ಭಾರತದಲ್ಲಿ ರಫೆಲ್ ವಿಚಾರವಾಗಿ ಕಿತ್ತಾಡುತ್ತಿರುವ ನೇತಾರರು| ರಫಲ್ ಹಗರಣ ಎಂದು ಬೊಬ್ಬೆ ಇಡುತ್ತಿರುವ ಪಕ್ಷಗಳು| ಭಾರತದಕ್ಕೆ ಇದುವರೆಗೂ ಬರದ ರಫೆಲ್ ಯುದ್ಧ ವಿಮಾನ| ರಹಸ್ಯವಾಗಿ ತನ್ನ ಪೈಲೆಟ್ ಗಳಿಗೆ ರಫೆಲ್ ತರಬೇತಿ ನೀಡಿರುವ ಪಾಕ್| ಸೌದಿ ಅರೇಬಿಯಾ ವಾಯುಸೇನೆಯಿಂದ ಪಾಕ್ ಪೈಲೆಟ್ ಗಳಿಗೆ ತರಬೇತಿ?| ಸೌದಿಗೆ ಮೊದಲ ಹಂತದ ರಫೆಲ್ ಯುದ್ಧ ವಿಮಾನ ಸರಬರಾಜು ಮಾಡಿರುವ ಡಸಾಲ್ಟ್ ಏವಿಯೇಶನ್|

ನವದೆಹಲಿ(ಏ.11): ಭಾರತದಲ್ಲಿ ರಫೆಲ್ ಯುದ್ಧ ವಿಮಾನ ಕುರಿತು ರಾಜಕೀಯ ಪಕ್ಷಗಳು ಮತ್ತು ನಾಯಕರು ಆರೋಪ ಪ್ರತ್ಯಾರೋಪದಲ್ಲಿ ನಿರತರಾಗಿದ್ದರೆ, ಪಾಕಿಸ್ತಾನ ಮೌನವಾಗಿ ತನ್ನ ವಾಯುಸೇನೆ ಪೈಲೆಟ್ ಗಳಿಗೆ ರಫೆಲ್ ಯುದ್ಧ ವಿಮಾನ ಚಲಾಯಿಸುವ ತರಬೇತಿ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ಭಾರತಕ್ಕೆ ರಫೆಲ್ ಯುದ್ಧ ವಿಮಾನ ಸರಬರಾಜು ಮಾಡುವ ಡಸಾಲ್ಟ್ ಏವಿಯೇಶನ್ ಸೌದಿ ಅರೇಬಿಯಾ ವಾಯುಸೇನೆಗೂ ರಫೆಲ್ ಯುದ್ಧ ವಿಮಾನ ರಫ್ತು ಮಾಡಿದೆ. ಸೌದಿ ವಾಯುಸೇನೆಯಿಂದ ಪಾಕಿಸ್ತಾನ ವಾಯುಸೇನೆಯ ಪೈಲೆಟ್ ಗಳಿಗೆ ರಫೆಲ್ ಯುದ್ಧ ವಿಮಾನ ಚಲಾಯಿಸುವ ತರಬೇತಿ ನೀಡಲಾಗಿದೆ ಎನ್ನಲಾಗಿದೆ.

ಕಳೆದ ಫೆಬ್ರವರಿಯಲ್ಲೇ ಡಸಾಲ್ಟ್ ಸೌದಿ ಅರೇಬಿಯಾಗೆ ಮೊದಲ ಹಂತದ ರಫೆಲ್ ಯುದ್ಧ ವಿಮಾನ ಸರಬರಾಜು ಮಾಡಿದ್ದು, ಪಾಕಿಸ್ತಾನದ ಪೈಲೆಟ್ ಗಳು ಕೂಡ ತರಬೇತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ವರದಿ ಪ್ರಸಾರ ಮಾಡಿರುವ ainonline.com ಎಂಬ ಖಾಸಗಿ ಮಾಧ್ಯಮ, 2017ರಲ್ಲೇ ಸೌದಿ ಅರೇಬಿಯಾದ ವಾಯುಸೇನೆಯ ಪೈಲೆಟ್ ಗಳಿಗೆ ಫ್ರಾನ್ಸ್‌ನಲ್ಲಿ ರಫೆಲ್ ಯುದ್ಧ ವಿಮಾನ ತರಬೇತಿ ನೀಡಲಾಗಿತ್ತು. ಇದರಲ್ಲಿ ಪಾಕಿಸ್ತಾನಿ ಪೈಲೆಟ್ ಗಳೂ ಕೂಡ ಸೇರಿದ್ದರು ಎಂದು ಹೇಳಿದೆ.

ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ, ರಫೆಲ್ ಯುದ್ಧ ವಿಮಾನ ಪಡೆಯಲು ಪರದಾಡುತ್ತಿರುವ ಭಾರತಕ್ಕೆ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿ ಪರಿಣಮಿಸಲಿದೆ ಎಂದು ಅಂದಾಜಿಸಲಾಗಿದೆ.

ದೇಶದಲ್ಲಿ ಏ.11ರಿಂದ ಮೇ19ರವರೆಗೆ ಏಳು ಹಂತಗಳಲ್ಲಿ ಮತದಾನ, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಕ್ಷೇತ್ರ, ಕರ್ನಾಟಕದಲ್ಲಿ 28.