ನವದೆಹಲಿ[ಆ. 07] ಹೃದಯಾಘಾತದಿಂದ ನಿಧನರಾದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ ಆಗಸ್ಟ್ 7 ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದೆ.

ನವದೆಹಲಿಯಲ್ಲಿ BJP ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ಮಾಹಿತಿ ನೀಡಿದ್ದು, ಬೆಳಗ್ಗೆ 11 ಗಂಟೆಯವರೆಗೂ ನಿವಾಸದಲ್ಲೇ ಪಾರ್ಥಿವ ಶರೀರ ಇರಲಿದೆ. ಜಂತರ್ ಮಂತರ್ ರಸ್ತೆಯ ಧವನ್ ದೀಪ್ ಬಿಲ್ಡಿಂಗ್ ನಿವಾಸದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದೊಂದಿಗೆ ಸುಷ್ಮಾ ನಂಟು..ಒಂದೊಂದು ಪುಟಗಳು ರೋಚಕ

ಕುಟುಂಬಸ್ಥರು, ರಾಜಕೀಯ ನಾಯಕರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯಾಹ್ನ 12ರಿಂದ ನಾಯಕರು, ಕಾರ್ಯಕರ್ತರಿರು ಸ್ವರಾಜ್ ಅವರಿಗೆ ಅಂತಿಮ ನಮನ ಸಲ್ಲಿಸಬಹದು.

ಸುಷ್ಮಾ ಸ್ವರಾಜ್  ಬಾಲ್ಯ, ಶಿಕ್ಷಣ, ರಾಜಕಾರಣ

ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು 3ರ ನಂತರ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ನವದೆಹಲಿ ಲೋಧಿ ರಸ್ತೆಯಲ್ಲಿರುವ ದಯಾನಂದ್ ಘಾಟ್ ಮುಕ್ತಿಧಾಮದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.