ಬೆಂಗಳೂರು[ಆ. 07]  ಒಬ್ಬ ರಾಜಕಾರಣಿಯಾಗಿ, ಒಬ್ಬ ಪ್ರಭಾವಿ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಮಾಡಿದ ಕೆಲಸಗಳು ನಮಗೆಲ್ಲ ಗೊತ್ತೇ ಇದೆ. ಒಬ್ಬಳು ತಾಯಿಯನ್ನು ಕಳೆದುಕೊಂಡಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಮರಣೆ ಮಾಡುತ್ತಾರೆ. ಅಂದರೆ ಅವರು ಹೊಂದಿದ್ದ ಶಕ್ತಿ ಎಂಥಹದು ಎಂಬುದನ್ನು ಅವರಿತುಕೊಳ್ಳಬಹುದು.

"

ಸುಷ್ಮಾ ಸ್ವರಾಜ್ ಬದುಕಿನ ಸಾಧನೆಯ ಶೀಖರ ಏರಿದ ಕತೆ ಸರಳವಾದದ್ದೇನಲ್ಲ. ಅವರ ಬದುಕಿನ ಒಂದೊಂದು ಪುಟಗಳನ್ನು ನೋಡಲೇಬೇಕು. 1952ರ ಫೆಬ್ರುವರಿ 14 ರಂದು ಹರಿಯಾಣದ ಅಂಬಾಲಾ ಕ್ಯಾಂಟ್​​ ನಲ್ಲಿ ಸುಷ್ಮಾ ಜನಿಸಿದರು. ತಂದೆ ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ, ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಭ್ಯಾಸ ಮಾಡಿದ್ದರು.

ಎಂದಿಗೂ ಮರೆಯುವ ಹಾಗಿಲ್ಲ ಸುಷ್ಮಾ ಸ್ವರಾಜ್ ಕನ್ನಡ ಭಾಷಣ!

*1973ರಲ್ಲಿ ಸುಪ್ರೀಂ ಕೋರ್ಟ್​ನಲ್ಲಿ ವಕೀಲರಾಗಿ ಅಭ್ಯಾಸ ಆರಂಭ
* 1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​​ನೊಂದಿಗೆ ಹೋರಾಟ
* ವಾಜಪೇಯಿ, ಎಲ್​.ಕೆ.ಅಡ್ವಾಣಿ,  ಜಾರ್ಜ್ ಫರ್ನಾಂಡಿಸ್​​ ಜೊತೆ ನಿಕಟ ಸಂಬಂಧ 
* 1975ರಲ್ಲಿ ಜಾರ್ಜ್ ಫರ್ನಾಂಡಿಸ್ ಅವರ ಕಾನೂನು ರಕ್ಷಣಾ ತಂಡದಲ್ಲಿ ಭಾಗಿ 
* ಜಯಪ್ರಕಾಶ್ ನಾರಾಯಣರ ಚಳುವಳಿಯಲ್ಲಿ ಸುಷ್ಮಾ ಸಕ್ರಿಯವಾಗಿ ಭಾಗಿ

ಕರ್ನಾಟಕದೊಂದಿಗೆ ಸುಷ್ಮಾ ನಂಟು..ಒಂದೊಂದು ಪುಟಗಳು ರೋಚಕ 

* ತುರ್ತು ಪರಿಸ್ಥಿತಿಯ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸುಷ್ಮಾ 
* 1977ರಿಂದ 1982ರವರೆಗೆ ಹರಿಯಾಣ ವಿಧಾನಸಭೆಯ ಸದಸ್ಯರಾಗಿ ಆಯ್ಕೆ
* 25ನೇ ವಯಸ್ಸಿನಲ್ಲಿ ಅಂಬಾಲಾ ಕಂಟೋನ್ಮೆಂಟ್ ಶಾಸನ ಸಭೆಗೆ ಅವಕಾಶ
* 1977ರ ಜುಲೈನಲ್ಲಿ ಆಗಿನ ಸಿಎಂ ದೇವಿ ಲಾಲ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವೆ
* 1979ರಲ್ಲಿ ಹರಿಯಾಣ ರಾಜ್ಯದ ಜನತಾ ಪಕ್ಷದ ರಾಜ್ಯಾಧ್ಯಕ್ಷೆಯಾಗಿ ಕಾರ್ಯನಿರ್ವಹಣೆ 
* 1987ರಿಂದ 1990ರವರಗೆ ಹರಿಯಾಣ ಸರ್ಕಾರದಲ್ಲಿ  ಶಿಕ್ಷಣ ಸಚಿವೆ ಕಾರ್ಯ ನಿರ್ವಹಣೆ 
* 1998ರಲ್ಲಿ ದೆಹಲಿ ಸಿಎಂ ಆಗಿ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್
* 1999ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ಸುಷ್ಮಾ
* 2014ರಲ್ಲಿ ಮೋದಿ ಸರ್ಕಾದಲ್ಲಿ ವಿದೇಶಾಂಗ ಸಚಿವೆಯಾಗಿ ಸೇವೆ
* 2019ರಲ್ಲಿ ಚುನಾವಣೆಯಿಂದ ನಿವೃತ್ತಿ ಘೋಷಿಸಿದ ಸುಷ್ಮಾ