ನವದೆಹಲಿ[ಅ.02]: ದೇಶದ ಮೊದಲ ಖಾಸಗಿ ರೈಲು ತೇಜಸ್‌ ಎಕ್ಸ್‌ಪ್ರೆಸ್‌ ನಿಗದಿತ ಸಮಯಕ್ಕಿಂತ ವಿಳಂಬವಾದಲ್ಲಿ ಪ್ರಯಾಣಿಕರಿಗೆ ಆರ್ಥಿಕ ಪರಿಹಾರ ನೀಡಲಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ. ಇಂತಹ ಕೊಡುಗೆ ನೀಡಿದ ದೇಶದ ಮೊದಲ ರೈಲಾಗಿದೆ.

ಶೀಘ್ರ ದೆಹಲಿ ಮತ್ತು ಲಖನೌ ನಡುವೆ ಖಾಸಗಿ ರೈಲು ಸಂಚಾರ

ತೇಜಸ್‌ ಎಕ್ಸ್‌ಪ್ರೆಸ್‌ ರೈಲು ನಿಗದಿಗಿಂತ 1 ಗಂಟೆ ಅಧಿಕ ವಿಳಂಬವಾದಲ್ಲಿ 100 ರು., 2 ಗಂಟೆ ಅಧಿಕ ತಡವಾದಲ್ಲಿ 250 ರು. ಪರಿಹಾರ ಮೊತ್ತ ನೀಡಲಿದೆ. ಅಲ್ಲದೇ ಪ್ರಯಾಣಿಕರಿಗೆ 25 ಲಕ್ಷ ಉಚಿತ ಜೀವವಿಮೆ ಸೌಲಭ್ಯದ ಜತೆಗೆ, ಪ್ರಯಾಣದ ವೇಳೆ ವಸ್ತುಗಳು ಕಳ್ಳತನ, ದರೋಡೆ ನಡೆದರೆ 1 ಲಕ್ಷ ರು. ವಿಮೆಯೂ ಒಳಗೊಂಡಿದೆ.

ಖಾಸಗಿ ರೈಲಿನ ಟಿಕೆಟ್‌ ದರ ವಿಮಾನಕ್ಕಿಂತ ಶೇ.50 ಅಗ್ಗ!

ತೇಜಸ್‌ ಎಕ್ಸ್‌ಪ್ರೆಸ್‌ ಅಕ್ಟೋಬರ್‌ 4 ರಂದು ಚಾಲನೆ ನೀಡಲಾಗುವುದು. ಅ.5 ರಿಂದ ವಾರದಲ್ಲಿ 6 ದಿನ ದೆಹಲಿ-ಲಖನೌ ಮಧ್ಯೆ ಸಂಚಾರ ಆರಂಭಿಸಲಿದೆ.