ಖಾಸಗಿ ರೈಲಿನ ಟಿಕೆಟ್‌ ದರ ವಿಮಾನಕ್ಕಿಂತ ಶೇ.50 ಅಗ್ಗ!| ಐಆರ್‌ಸಿಟಿಸಿಗೆ 2 ತೇಜಸ್‌ ರೈಲುಗಳ ಹಸ್ತಾಂತರ| ರೈಲಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಸೌಲಭ್ಯ

ನವದೆಹಲಿ[ಆ.28]: ರೈಲ್ವೇ ಖಾಸಗೀಕರಣದ ಭಾಗವಾಗಿ ಭಾರತೀಯ ರೈಲು ಪ್ರವಾಸೋದ್ಯಮ ಹಾಗೂ ಆಹಾರ ನಿಗಮಕ್ಕೆ ಹಸ್ತಾಂತರಿಸಲಾಗಿದ್ದ ಎರಡು ರೈಲುಗಳ ಪ್ರಯಾಣ ದರ ಅದೇ ನಗರಗಳ ನಡುವೆ ಕಾರ್ಯಾಚರಿಸುವ ವಿಮಾನ ದರಕ್ಕಿಂತ ಶೇ.50 ರಷ್ಟುಕಡಿಮೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಶತಾಬ್ದಿ, ತೇಜಸ್‌ ರೈಲು ಪ್ರಯಾಣಿಕರಿಗೆ ಬಂಪರ್‌

ದೆಹಲಿ -ಲಖನೌ ಹಾಗೂ ಅಹ್ಮದಾಬಾದ್‌-ಮುಂಬೈ ಸೆಂಟ್ರಲ್‌ ನಡುವೆ ಸಂಚರಿಸುವ ತೇಜಸ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ರೈಲ್ವೇ ಅಂಗಸಂಸ್ಥೆ ಐಆರ್‌ಸಿಟಿಸಿಗೆæ ಹಸ್ತಾಂತರಿಸಲು ಒಪ್ಪಿಗೆ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ರೈಲುಗಳ ದರ ನಿಗದಿ ಮಾಡುವ ಅಧಿಕಾರವನ್ನು ಹಾಗೂ ಐಆರ್‌ಸಿಟಿಸಿಗೆ ನೀಡಲಾಗಿದ್ದು, ಜನದಟ್ಟಣೆ ಇರುವ ವಿಶೇಷ ಸಂದರ್ಭಗಳಲ್ಲೂ ಇದೇ ನಗರಗಳ ನಡುವೆ ಕಾರ್ಯಾಚರಿಸುವ ವಿಮಾನ ದರಕ್ಕಿಂತ ಶೇ.50 ರಷ್ಟುಕಡಿಮೆ ಇರಲಿದೆ. ಅಲ್ಲದೇ ಈ ರೈಲುಗಳಲ್ಲಿ ಇತರೆ ರೈಲುಗಳಲ್ಲಿರುವ ವಿಐಪಿ, ವಿಶೇಷ ಚೇತನ ವಿನಾಯಿತಿ ಸಹಿತ ಯಾವುದೇ ವಿನಾಯಿತಿ ಇರುವುದಿಲ್ಲ .

ವಿರೋಧದ ಮಧ್ಯೆ 2 ತೇಜಸ್ ರೈಲು ಐಆರ್‌ಸಿಟಿಸಿ ತೆಕ್ಕೆಗೆ!

5 ವರ್ಷಕ್ಕಿಂತ ಮೇಲ್ಪಟ್ಟಮಕ್ಕಳಿಗೆ ಪೂರ್ಣ ಟಿಕೆಟ್‌ ಹಾಗೂ ಇದೇ ಮೊದಲ ಬಾರಿಗೆ ಪ್ರಯಾಣಿಕರಿಗೆ 50 ಲಕ್ಷ ಪ್ರಯಾಣ ವಿಮೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲುಗಳಲ್ಲಿ ವಿಶ್ವ ದರ್ಜೆಯ ಸೌಲಭ್ಯ ಕಲ್ಪಿಸಲಾಗಿದ್ದು, ಆಧುನಿಕ ಬೋಗಿ, ಉತ್ತಮ ಒಳಾಂಗಣ ವಿನ್ಯಾಸ, ಎಲ್‌ಇಡಿ ಟಿವಿ, ಕರೆ ಸೌಲಭ್ಯ, ಸ್ವಯಂ ಚಾಲಿಯ ಬಾಗಿಲು ಹಾಗೂ ಸಿಸಿಟಿವಿ ಸೌಲಭ್ಯ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.