ಉಧಂಪುರ[ಮೇ.21]: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಪಾಕ್‌ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ, ಭಾರತೀಯ ಸೇನೆ ಪಾಕಿಸ್ತಾನದ ನೆಲದೊಳಗೆ ನುಗ್ಗಿ 2016ರಲ್ಲಿ ನಡೆಸಿದ ದಾಳಿಯೇ, ಭಾರತೀಯ ಸೇನೆ ನಡೆಸಿದ ಮೊದಲ ಸರ್ಜಿಕಲ್‌ ದಾಳಿ ಎಂದು ಸೇನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಮೂಲಕ ಯುಪಿಎ ಸರ್ಕಾರದ ಅವಧಿಯಲ್ಲೂ 6 ಸರ್ಜಿಕಲ್‌ ದಾಳಿ ನಡೆಸಲಾಗಿತ್ತು ಎಂದು ಇತ್ತೀಚೆಗೆ ಕಾಂಗ್ರೆಸ್‌ ನಾಯಕರು ನೀಡಿದ್ದ ಹೇಳಿಕೆಯನ್ನು ಸ್ಪಷ್ಟವಾಗಿ ಅಲ್ಲಗಳೆದಿದೆ. ಹಿರಿಯ ಸೇನಾ ನಾಯಕರೊಬ್ಬರಿಂದಲೇ ಹೊರಬಿದ್ದ, ಈ ಸ್ಪಷ್ಟನೆ ಕಾಂಗ್ರೆಸ್‌ಗೆ ಭಾರೀ ಮುಖಭಂಗ ಉಂಟುಮಾಡಿದೆ.

ಯುಪಿಎ ಅವಧಿಯಲ್ಲಿ 6 ಸರ್ಜಿಕಲ್ ಸ್ಟ್ರೈಕ್: ನಾವು ಹೇಳ್ಕೋಂಡಿಲ್ಲ ಎಂದ ಸಿಂಗ್!

ಭಾರತೀಯ ಸೇನೆಯ ಉತ್ತರ ವಲಯದ ಮುಖ್ಯಸ್ಥ, ಲೆಫ್ಟಿನೆಂಟ್‌ ಜನರಲ್‌ ರಣಬೀರ್‌ಸಿಂಗ್‌ ಅವರನ್ನು ಪತ್ರಕರ್ತರು ಯುಪಿಎ ಅವಧಿಯಲ್ಲೂ 6 ಸರ್ಜಿಕಲ್‌ ದಾಳಿ ನಡೆದಿತ್ತು ಎಂದು ಕಾಂಗ್ರೆಸ್‌ ನಾಯಕರು ಮಂಡಿಸಿದ ವಾದದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಲೆ.ಜ.ರಣಬೀರ್‌ಸಿಂಗ್‌ ‘ಕೆಲ ದಿನಗಳ ಹಿಂದಷ್ಟೇ ಮಿಲಿಟರಿ ಕಾರ್ಯಾಚರಣೆ ವಿಭಾಗದ ಪ್ರಧಾನ ನಿರ್ದೇಶಕರು, ಆರ್‌ಟಿಐನಡಿ ಸಲ್ಲಿಸಿದ ಪ್ರಶ್ನೆಯೊಂದಕ್ಕೆ, 2016ರ ಸೆಪ್ಟೆಂಬರ್‌ನಲ್ಲಿ ನಡೆದ ಸರ್ಜಿಕಲ್‌ ದಾಳಿಯೇ ಮೊದಲ ದಾಳಿ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆಯೂ ಸರ್ಜಿಕಲ್ ದಾಳಿ ನಡೆದಿವೆ: ನಿವೃತ್ತ ಲೆ.ಜ. ಹೂಡಾ!

ರಾಜಕೀಯ ಪಕ್ಷಗಳು ಏನು ಹೇಳುತ್ತವೆ ಎಂಬ ವಿಷಯದ ಬಗ್ಗೆ ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ಅದಕ್ಕೆಲ್ಲಾ ಸರ್ಕಾರ ಉತ್ತರ ನೀಡುತ್ತದೆ. ನಾನು ಹೇಳುವುದು ಸತ್ಯಾಂಶಗಳನ್ನು ಆಧರಿಸಿದ್ದು’ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಉರಿ ದಾಳಿಯಾಗಿ ಪ್ರತಿಯಾಗಿ ನಡೆದ ದಾಳಿಯೇ ಭಾರತ ನಡೆಸಿದ ಮೊದಲ ಸರ್ಜಿಕಲ್‌ ದಾಳಿ ಎಂಬ ಕೇಂದ್ರ ಸರ್ಕಾರದ ವಾದವನ್ನು ಎತ್ತಿಹಿಡಿದಿದ್ದಾರೆ.

10 ಅಲ್ರೀ 100 ದಾಳಿ ಮಾಡಿದ್ದೇವೆ: ಕ್ಯಾ. ಅಮರೀಂದರ್ ಸಿಂಗ್!