ಪ್ಯಾರಿಸ್(ಏ.18): ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾಗಿರುವ ಪ್ಯಾರಿಸ್‌ನ 850 ವರ್ಷಗಳ ಐತಿಹಾಸಿಕ ನೋಟ್ರೆ-ಡೇಮ್‌ ಕ್ಯಾಥೆಡ್ರಲ್‌  ಚರ್ಚ್‌ಗೆ ಸಂಬಂಧಿಸಿದಂತೆ ವಿಚಿತ್ರ ವಾದವೊಂದು ಹರಿದಾಡುತ್ತಿದೆ.

ಚರ್ಚ್‌ಗೆ ಬೆಂಕಿ ಬಿದ್ದ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆ ಮಧ್ಯೆ ಭಗವಾನ್ ಏಸು ಕ್ರಿಸ್ತನ ಪ್ರತಿರೂಪದ ದರ್ಶನವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸ್ಕಾಟ್‌ಲ್ಯಾಂಡ್‌ನ ಅಲೆಕ್ಸಾಂಡ್ರಿಯಾದ ಲೆಸ್ಲಿ ರೋವನ್ ಎಂಬುವವರು ಈ ಕುರಿತಾದ ಫೋಟೋವೊಂದನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಚಿತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಮಧ್ಯೆ ಏಸು ಕ್ರಿಸ್ತನ ಪ್ರತಿರೂಪ ಕಾಣಿಸಿದೆ.

ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕೆಲವರು ನಿಜಕ್ಕೂ ಅಲ್ಲಿರುವುದು ಏಸು ಕ್ರಿಸ್ತನೇ ಎಂದು ವಾದಿಸಿದರೆ ಮತ್ತೆ ಕೆಲವರು ಈ ವಾದವನ್ನು ಟೀಕಿಸಿದ್ದಾರೆ.

ಸದ್ಯ ಲೆಸ್ಲಿ ರೋವನ್ ಈ ಫೋಟೋವನ್ನು ಡಿಲೀಟ್ ಮಾಡಿದ್ದು, ಬೆಂಕಿಯ ಕೆನ್ನಾಲಿಗೆ ಮಧ್ಯೆ ಏಸು ಕ್ರಿಸ್ತ ನಿಜಕ್ಕೂ ಕಾಣಿಸಿಕೊಂಡನೇ ಎಂಬುದು ಭಾರೀ ಚರ್ಚೆಯ ವಿಷಯವಾಗಿದೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.