ರಮ್ಯಾ ಸ್ಥಾನಕ್ಕೆ ಸ್ವರಾ ಭಾಸ್ಕರ್...ಯಾಕೆ ಹೀಗಾಯ್ತು!?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 2:29 PM IST
Fight erupts between Swara Bhaskar and Divya Spandana as Social Media head of Congress party
Highlights

‘ವೀರ್‌ ಡಿ ವೆಡ್ಡಿಂಗ್‌' ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಕಾಣಿಸಿಕೊಂಡು ಟ್ರೋಲಿಗರಿಗೆ ಆಹಾರವಾಗಿದ್ದ ನಟಿ ಸ್ವರಾ ಭಾಸ್ಕರ್ ಗೆ ಇದೀಗ ಹೊಸದೊಂದು ಜವಾಬ್ದಾರಿ ವಹಿಸಿಕೊಡಲಾಗುತ್ತಿದೆ. ದಿವ್ಯ ಸ್ಪಂದನ ಅಲಿಯಾಸ್ ರಮ್ಯಾರ ಸ್ಥಾನಕ್ಕೆ ಸ್ವರಾ ಭಾಸ್ಕರ್ ಬರಲಿದ್ದಾರೆ!

ನವದೆಹಲಿ[ಜು.19] ಎಐಸಿಸಿ ಸೋಶಿಯಲ್ ಮೀಡಿಯಾದ ಮುಖ್ಯಸ್ಥೆ ಸ್ಥಾನ ದಿವ್ಯಸ್ಪಂದನಾ ಅಲಿಯಾಸ್ ರಮ್ಯಾ ಅವರಿಗೆ ಗೇಟ್ ಪಾಸ್ ನೀಡಲಾಗುತ್ತಿದೆಯೇ? ಹೌದು ಗುರುವಾರದ ಸೋಶಿಯಲ್ ಮೀಡಿಯಾ ನೋಡಿದರೆ ನಿಮಗೆ ಇಂಥದ್ದೊಂದು ಅನುಮಾನ ಬಂದಿರುತ್ತದೆ.

ಸ್ವರಾ ಭಾಸ್ಕರ್ ಮಾಡಿದ್ದರು ಎನ್ನಲಾದ ಟ್ವೀಟ್ ಈ ಎಲ್ಲ ಘಟನೆಗಳಿಗೆ ಮೂಲ ಕಾಣ. ಟಿವಿ ಸ್ಟುಡಿಯೋವೊಂದರಲ್ಲಿ ಮೌಲಾನಾವೊಬ್ಬರು ಟಿವಿಯ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದು ಸುದ್ದಿಯಾಗಿತ್ತು. ಇದಾದ ಮೇಲೆ ಸ್ವರಾ ಭಾಸ್ಕರ್ ಬಿಜೆಪಿ ಮತ್ತು ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು.

ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

ಮುಸಲ್ಮಾನರು ನಮ್ಮಂತೆ ಮನುಷ್ಯರು, ನಾನು ಅವರೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ ಎಂದು ಕೆಲ ಬಾಲಿವುಡ್ ಸ್ಟಾರ್ ಗಳೊಂದಿಗೆ ಸೇರಿ ಟ್ವಿಟರ್ ನಲ್ಲಿ ಭಿತ್ತಿಪತ್ರದ ಅಭಿಯಾನ ಮಾಡಿದ್ದರು.,

ಇದೆಲ್ಲವನ್ನು ಕೂತಲ್ಲೇ ವೀಕ್ಷಣೆ ಮಾಡುತ್ತಿದ್ದ ಜಾಲತಾಣಿಗರು ಸ್ವರಾ ಭಾಸ್ಕರ್ ಸಾಮಾಜಿಕ ತಾಣದಲ್ಲಿ ರಮ್ಯಾ ಅವರನ್ನೇ ಹಿಂದಿಕ್ಕಿದ್ದು ಎಐಸಿಸಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ಹೊರಲು ಸ್ವರಾ ಭಾಸ್ಕರ್ ಸೂಕ್ತ ಎಂದಿದ್ದಾರೆ.

loader