ನವದೆಹಲಿ[ಜು.04]: ಲೋಕಸಭಾ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದರು. ಹೀಗಿದ್ದರೂ ಪಕ್ಷದ ಹಿರಿಯಲ್ ರಾಹುಲ್ ಗಾಂಧಿ ಓಲೈಸಲು ಯತ್ನಿಸಿದ್ದರು. ಆದರೆ ತಮ್ಮ ನಿರಗ್ಧಾರದಿಂದ ಹಿಂದೆ ಸರಿಯದ ರಾಹುಲ್ ಗಾಂಧಿ ಒಂದು ತಿಂಗಳ ಬಳಿಕ, ಜುಲೈ 3ರಂದು ಬರೋಬ್ಬರಿ 4 ಪುಟಗಳ ದೀರ್ಘ ಪತ್ರ ಬರೆದು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಪಕ್ಷ ತನ್ನ ನೂತನ ಅಧ್ಯಕ್ಷರನ್ನು ನೇಮಿಸಬೇಕೆಂದು ಸಲಹೆ ನೀಡಿದ್ದಾರೆ.

ಕಾಂಗ್ರೆಸ್‌ಗೆ ರಾಹುಲ್ ವಿದಾಯ; ಗಮನ ಸೆಳೆದ ಭಾವನಾತ್ಮಕ ಪತ್ರ

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿರುವ ರಾಹುಲ್ ಗಾಂಧಿ 'ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದು ನನಗೆ ಹೆಮ್ಮೆಯ ವಿಚಾರ. ಆದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎದುರಿಸಿದ ಸೋಲಿಗೆ ಅಧ್ಯಕ್ಷ ಸ್ಥಾನದಲ್ಲಿದ್ದ ನಾನೇ ಕಾರಣ. ಹೀಗಾಘಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಹುಲ್ ಗಾಂಧಿ ತಂಗಿ ಪ್ರಿಯಾಂಕಾ ತನ್ನ ಅಣ್ಣ ಈ ನಿರ್ಧಾರಕ್ಕೆ ಭೇಷ್ ಎಂದಿದ್ದಾರೆ. 

ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಬದಲಾವಣೆ: ಏನಿತ್ತು ಏನಾಯ್ತು ಗೊತ್ತಾ?

ರಾಹುಲ್ ಗಾಂಧಿ ರಾಜೀನಾಮೆ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ 'ರಾಹುಲ್ ಗಾಂಧಿ, ನೀವು ತೆಗೆದುಕೊಂಡಂತಹ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಕೆಲವರಿಗಷ್ಟೇ ಇರುತ್ತದೆ. ನಿಮ್ಮ ನಿರ್ಧಾರವನ್ನು ಗೌರವಿಸುತ್ತೇವೆ' ಎಂದಿದ್ದಾರೆ.