ನವದೆಹಲಿ(ಜು.03): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿರುವ ರಾಜೀನಾಮೆಯನ್ನು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೊನೆಗೂ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.

ರಾಹುಲ್ ಟ್ವಿಟ್ಟರ್ ಖಾತೆಯಲ್ಲಿ ಈ ಹಿಂದೆ ಎಐಸಿಸಿ ಅಧ್ಯಕ್ಷ ಎಂದು ಇತ್ತು. ಇದೀಗ ಕೇವಲ INC ಸದಸ್ಯ ಎಂದು ನಮೂದಿಸಲಾಗಿದೆ. ಟ್ವಿಟ್ಟರ್’ನಲ್ಲಿ ಬಯೋಡೆಟಾ ಬದಲಿಸಿಕೊಂಡಿರುವ ರಾಹುಲ್, ಲೋಕಸಭಾ ಸದಸ್ಯ ಎಂತಲೂ ನಮೂದಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆಯಷ್ಟೇ ನಾಲ್ಕು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದು ಖಚಿತ ಎಂದು ತಿಳಿಸಿದ್ದರು. ಅದರಂತೆ ರಾಹುಲ್ ರಾಜೀನಾಮೆಯನ್ನು ಅಂಗೀರಿಸಿರುವ ಕಾಂಗ್ರೆಸ್, ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.