ಕೃಷಿ ಕಾಯ್ದೆ ಕುರಿತು ಕೇಂದ್ರಕ್ಕಿಲ್ಲ ವರಿ; ಬೆಂಗಳೂರಿಗೆ ಮತ್ತೊಂದು ಗರಿ; ಜ.15ರ ಟಾಪ್ 10 ಸುದ್ದಿ!
ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಕೇಂದ್ರ ಕೃಷಿ ಕಾಯ್ದೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬೆಂಬಲ ಸೂಚಿಸಿದೆ. ಜ. 17ಕ್ಕೆ ನಿಗದಿ ಮಾಡಿದ್ದ ಪೊಲೀಯೋ ಲಸಿಕೆ ಜನವರಿ 31ಕ್ಕೆ ಬದಲಿಸಲಾಗಿದೆ. ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಮಿಂಚಿನ ಪ್ರದರ್ಶನ ನೀಡಿದೆ. 69ರ ನಟಿಯ ಹಾಟ್ ಫೋಟೋ ಶೂಟ್ , ಬೆಂಗಳೂರು ವಿಶ್ವದ ನಂ.1 ಅತೀವೇಗದ ಟೆಕ್ನಾಲಜಿ ಹಬ್ ಸೇರಿದಂತೆ ಜನವರಿ 15ರ ಟಾಪ್ 10 ಸುದ್ದಿ ವಿವರ ಇಲ್ಲಿದೆ
ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ರಾಷ್ಟ್ರಪತಿ!...
ರಾಮ ಮಂದಿರ ನಿರ್ಮಾಣಕ್ಕೆ ತಯಾರಿ ಆರಂಭಗೊಂಡಿದೆ. ಇದೀಗ ದೇಶಾದ್ಯಂತ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಗೊಂಡಿದೆ. ಇದೀಗ ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್ 5 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ, ದೇಣಿಗೆ ಸಂಗ್ರಹ ವೇಗ ಹೆಚ್ಚಿಸಿದ್ದಾರೆ. ರಾಮನಾಥ್ ಕೋವಿಂದ್ ಜೊತೆಗೆ ದೇಣಿಗೆ ನೀಡಿದ ಇತರ ಕೆಲ ಮುಖ್ಯಮಂತ್ರಿಗಳು ದೇಣಿಗೆ ನೀಡಿದ್ದಾರೆ.
ಧಾರವಾಡ ಅಪಘಾತದ ಘೋರ ಚಿತ್ರಗಳು..ಬಾಲ್ಯದ ಗೆಳತಿಯರೆಲ್ಲ ದುರಂತಕ್ಕೆ ಬಲಿ...
ಬಾಲ್ಯದ ಗೆಳತಿಯರೆಲ್ಲರೂ ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದರು. ಆದರೆ ಘೋರ ವಿಧಿ ಅವರನ್ನೆಲ್ಲ ಬಲಿ ಪಡೆದಿತ್ತು. ಧಾರವಾಡದ ಭೀಕರ ರಸ್ತೆ ಅಪಘಾತದ ಕಣ್ಣೀರಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.
ಕೃಷಿ ಸುಧಾರಣೆಗೆ ಕಾಯ್ದೆ ಮಹತ್ವದ್ದಾಗಿದೆ; ಕೇಂದ್ರಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬೆಂಬಲ!...
ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಗೆ ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಬೆಂಬಲ ಸೂಚಿಸಿದೆ. ಕೃಷಿ ಕ್ಷೇತ್ರದ ಸುಧಾರಣೆಗೆ ನೂತನ ಕಾಯ್ದೆ ಮಹತ್ವದ್ದಾಗಿದೆ. ಆದರೆ ಹೊಸ ಪರಿವರ್ತನೆಯಿಂದಾಗಿ ಪರಿಣಾಮ ಬೀರವು ಕೃಷಿಕರನ್ನು ಸಮರ್ಪಕವಾಗಿ ರಕ್ಷಿಸಬೇಕು ಎಂದು IMF ಸಂವಹನ ನಿರ್ದೇಶಕ ಗ್ಯಾರೇ ರೈಸ್ ಹೇಳಿದ್ದಾರೆ.
17ಕ್ಕೆ ಪೊಲೀಯೋ ಲಸಿಕೆ ಅಭಿಯಾನ ಇಲ್ಲ: ಪರಿಷ್ಕೃತ ಡೇಟ್ & ಡೀಟೆಲ್ಸ್ ಹೀಗಿದೆ...
ದೇಶಾದ್ಯಂತ ನಾಳೆಯಿಂದ ಕೊರೋನಾ ಲಸಿಕೆ ವಿತರಣೆ ಕಾರ‍್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಜ.17ರಂದು ನಿಗದಿಯಾಗಿದ್ದ ಪಲ್ಸ್ ಪೋಲಿಯೋ ಲಸಿಕೆ ಕಾರ‍್ಯಕ್ರಮವನ್ನು ಜ.31ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಲಬುಶೇನ್ ಆಕರ್ಷಕ ಶತಕ, ಆಸೀಸ್‌ಗೆ ಮೊದಲ ದಿನದ ಗೌರವ...
ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲು ಇಡುತ್ತಿದೆ.
ಇನ್‌ಡೈರೆಕ್ಟ್ ಆಗಿ ಅನು-ಸೂರ್ಯ ಒಂದು ಮಾಡ್ತಾರ ಆರ್ಯವರ್ಧನ್?...
ಜೊತೆ ಜೊತೆಯಲಿ ಸೀರಿಯಲ್ ಸೂರ್ಯನ ಆಗಮನದ ನಂತರ ಬದಲಾಗ್ತಾನೇ ಹೋಗ್ತಿದೆ. ಆ ಕಡೆ ಅಭಿಮಾನಿಗಳಿಗೂ ಟೆನ್ಶನ್ ಶುರುವಾಗಿದೆ.
ಬೆಂಗಳೂರು ವಿಶ್ವದ ನಂ.1 ಅತೀವೇಗದ ಟೆಕ್ನಾಲಜಿ ಹಬ್..!...
ಬೆಂಗಳೂರಲ್ಲಿ ಹೂಡಿಕೆ 5.4 ಪಟ್ಟು ಏರಿಕೆ| ಬ್ರಿಟನ್ ಮೂಲದ ಸಂಸ್ಥೆಯ ರಾರಯಂಕಿಂಗ್| ಬ್ರಿಟನ್ ರಾಜಧಾನಿ ಲಂಡನ್ 2ನೇ ಸ್ಥಾನ| ಭಾರತದ ವಾಣಿಜ್ಯ ರಾಜಧಾನಿ ಮುಂಬೈ 6ನೇ ಸ್ಥಾನ|
ಐಕಾನಿಕ್ ಟಾಟಾ ಸಫಾರಿ ಉತ್ಪಾದನೆ ಆರಂಭ; ಮೊದಲ ಕಾರು ರೋಲ್ ಔಟ್!...
ಪುಣೆ ಘಟಕದಿಂದ ಮೊದಲ ಸಫಾರಿ ರೋಲ್ಸ್ ಔಟ್, ಹೊಸ ಸಫಾರಿ ಅತ್ಯಾಕರ್ಷ ಮಾತ್ರವಲ್ಲ, ದಕ್ಷ ಎಂಜಿನ್ ಸಾಮರ್ಥ್ಯ ಹೊಂದಿದೆ. ಇನ್ನು ಐಷಾರಾಮಿ SUV ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
69ರ ನಟಿಯ ಹಾಟ್ ಫೋಟೋ ಶೂಟ್ : ಹೀಗಿತ್ತು ನೆಟ್ಟಿಗರ ರಿಯಾಕ್ಷನ್...
ನಟಿ ಮಾಜಿ ಬಿಗ್‌ಬಾಸ್ ಸ್ಪರ್ಧಿ ರಜಿನಿ ಚಂಡಿ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಿರಿಯ ಮಾಲಿವುಡ್ ನಟಿಯ ಹಾಟ್ ಫೋಟೋ ಶೂಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
3 ವರ್ಷದ ನಂತ್ರ ದೇವಾಲಯಕ್ಕೆ ಬಂದ ಆನೆ: ಪ್ರಸಾದ ತಿನ್ನಿಸಿದ IAS ಅಧಿಕಾರಿಗೆ ಟೀಕೆ...
ಮೂರು ವರ್ಷಗಳ ನಂತರ ಗೋಪಾಲಸ್ವಾಮಿ ದರ್ಶನಕ್ಕೆ ಗಜರಾಜ ಮತ್ತೆ ಬಂದಿದ್ದಾನೆ. ಚಾಮರಾಜನಗರ ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಗಜರಾಜನ ಆಗಮನವಾಗಿದೆ.