ನವದೆಹಲಿ(ಜ.15): ದೇಶಾದ್ಯಂತ ನಾಳೆಯಿಂದ ಕೊರೋನಾ ಲಸಿಕೆ ವಿತರಣೆ ಕಾರ‍್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಜ.17ರಂದು ನಿಗದಿಯಾಗಿದ್ದ ಪಲ್ಸ್‌ ಪೋಲಿಯೋ ಲಸಿಕೆ ಕಾರ‍್ಯಕ್ರಮವನ್ನು ಜ.31ಕ್ಕೆ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

‘ಜ.16ರಂದು ದೇಶಾದ್ಯಂತ ಕೋವಿಡ್‌ ಲಸಿಕೆ ವಿತರಣೆ ಕಾರ‍್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಲಸಿಕಾ ಕಾರ‍್ಯಕ್ರಮವಾಗಲಿದೆ. ಈ ಕಾರಣದಿಂದ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಕಾರ‍್ಯಕ್ರಮವನ್ನು ಜ.31ಕ್ಕೆ ಮುಂದೂಡಲಾಗಿದೆ.

ರಾಮಮಂದಿರಕ್ಕೆ ದೇಣಿಗೆ: 4 ಲಕ್ಷ ಹಳ್ಳಿಗಳು, 10 ಕೋಟಿ ಜನರ ಭೇಟಿಯ ಗುರಿ

ಜ.30ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಭವನದಲ್ಲಿ ಕೆಲವು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಪೋಲಿಯೋ ಲಸಿಕೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದಶಕದ ಹಿಂದೆ ಜನವರಿ 13, 2011 ರಂದು ಭಾರತದಲ್ಲಿ ಪೋಲಿಯೊ ರೋಗದ ಕೊನೆಯ ಪ್ರಕರಣ ವರದಿಯಾಗಿತ್ತು. 1990 ರ ದಶಕದ ಆರಂಭದವರೆಗೂ ಸಾಂಕ್ರಾಮಿಕ ವೈರಲ್ ರೋಗವು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿತ್ತು. ಇದರ ಪರಿಣಾಮವಾಗಿ ಪ್ರತಿದಿನ ಸರಾಸರಿ 500 ರಿಂದ 1,000 ಮಕ್ಕಳು ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದರು.