ಕೃಷಿ ಸುಧಾರಣೆಗೆ ಕಾಯ್ದೆ ಮಹತ್ವದ್ದಾಗಿದೆ; ಕೇಂದ್ರಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬೆಂಬಲ!
ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಗೆ ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಬೆಂಬಲ ಸೂಚಿಸಿದೆ. ಕೃಷಿ ಕ್ಷೇತ್ರದ ಸುಧಾರಣೆಗೆ ನೂತನ ಕಾಯ್ದೆ ಮಹತ್ವದ್ದಾಗಿದೆ. ಆದರೆ ಹೊಸ ಪರಿವರ್ತನೆಯಿಂದಾಗಿ ಪರಿಣಾಮ ಬೀರವು ಕೃಷಿಕರನ್ನು ಸಮರ್ಪಕವಾಗಿ ರಕ್ಷಿಸಬೇಕು ಎಂದು IMF ಸಂವಹನ ನಿರ್ದೇಶಕ ಗ್ಯಾರೇ ರೈಸ್ ಹೇಳಿದ್ದಾರೆ.
ವಾಶಿಂಗ್ಟನ್(ಜ.15) ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆಗೆ ಇದೀಗ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಬೆಂಬಲ ಸೂಚಿಸಿದೆ. ಕೃಷಿ ಕ್ಷೇತ್ರದ ಸುಧಾರಣೆಗೆ ನೂತನ ಕಾಯ್ದೆ ಮಹತ್ವದ್ದಾಗಿದೆ. ಆದರೆ ಹೊಸ ಪರಿವರ್ತನೆಯಿಂದಾಗಿ ಪರಿಣಾಮ ಬೀರವು ಕೃಷಿಕರನ್ನು ಸಮರ್ಪಕವಾಗಿ ರಕ್ಷಿಸಬೇಕು ಎಂದು IMF ಸಂವಹನ ನಿರ್ದೇಶಕ ಗ್ಯಾರೇ ರೈಸ್ ಹೇಳಿದ್ದಾರೆ.
ವಾಶಿಂಗ್ಟನ್‌ನಲ್ಲಿನ ಕಾರ್ಯಕ್ರಮವೊಂದರಲ್ಲಿ ಕೇಳಿದ ಪ್ರಶ್ನಗೆ ಗ್ಯಾರಿ ರೈಸ್ ಮಹತ್ವದ ಉತ್ತರ ನೀಡಿದ್ದಾರೆ. ಕೃಷಿ ಮಸೂದೆಗಳು ಭಾರತದಲ್ಲಿ ಕೃಷಿ ಸುಧಾರಣೆಗಳಿಗಾಗಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಾವು ನಂಬುತ್ತೇವೆ. ಈ ಕಾಯ್ದೆಯಿಂದ ಮಧ್ಯವರ್ತಿಗಳ ಮೂಲಕ ವ್ಯವಹಾರ ತಪ್ಪುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ. ಇದು ಕೃಷಿಕರ ಗ್ರಾಮೀಣ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದು ರೈಸ್ ಹೇಳಿದ್ದಾರೆ.