ಧಾರವಾಡ ಅಪಘಾತದ ಘೋರ ಚಿತ್ರಗಳು..ಬಾಲ್ಯದ ಗೆಳತಿಯರೆಲ್ಲ ದುರಂತಕ್ಕೆ ಬಲಿ
ಧಾರವಾಡ(ಜ. 15) ಬಾಲ್ಯದ ಗೆಳತಿಯರೆಲ್ಲರೂ ಒಟ್ಟಾಗಿ ಸಮಯ ಕಳೆಯಬೇಕು ಎಂದು ಹೊರಟಿದ್ದರು. ಆದರೆ ಘೋರ ವಿಧಿ ಅವರನ್ನೆಲ್ಲ ಬಲಿ ಪಡೆದಿತ್ತು. ಧಾರವಾಡದ ಭೀಕರ ರಸ್ತೆ ಅಪಘಾತದ ಕಣ್ಣೀರಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ.
ಹರಟೆ ಹೊಡೆಯುತ್ತ ಸಮಯ ಕಳೆಯುತ್ತಿದ್ದರು. ಗೋವಾಗೆ ತೆರಳಿ ಅಲ್ಲಿ ಎಂಜಾಯ್ ಮಾಡುವ ಯೋಚನೆಯಲ್ಲಿದ್ದವರ ಟೆಂಪೋ ಟ್ರಾವೆಲರ್ ಗೆ ಟಿಪ್ಪರ್ ಬಂದು ಢಿಕ್ಕಿ ಹೊಡೆದಿತ್ತು.
ಸಾವನ್ನಪ್ಪಿದ ಬಹುತೇಕ ರು ದಾವಣಗೆರೆಯವರು ನಗರದ ವಿದ್ಯಾನಗರ, ಎಂಸಿಸಿ ಎ ಬ್ಲಾಕ್ ಮತ್ತು ಎಂಸಿಸಿ ಬಿ ಬ್ಲಾಕ್ ನಿವಾಸಿಗಳು.
ದಾವಣಗೆರೆ ನಗರದ ಸೇಂಟ್ ಪೌಲ್ಸ್ ಕಾನ್ವೆಂಟ್ ಶಾಲೆಯ ಹಳೆ ವಿದ್ಯಾರ್ಥಿ ಗಳು ಗೋವಾಗೆ ಪ್ರವಾಸಕ್ಕೆ ಹೊರಟಿದ್ದರು.
ಮಧ್ಯರಾತ್ರಿ 2.30 ಕ್ಕೆ ದಾವಣಗೆರೆ ಬಿಟ್ಟಿದ್ದರು. ಮಾಜಿ ಶಾಸಕ ಬಿಜೆಪಿ ಮುಖಂಡ ಗುರುಸಿದ್ದನಗೌಡರ ಸೊಸೆ ಹಾಗೂ ಆರೈಕೆ ಆಸ್ಪತ್ರೆ ಡಾ.ರವಿಕುಮಾರ ಪತ್ನಿ ಪ್ರೀತಿ ರವಿಕುಮಾರ, ಸ್ತ್ರೀ ರೋಗ ತಜ್ಞ ಡಾ.ವೀಣಾ ಪ್ರಕಾಶ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಧಾರವಾಡದ ಇಟ್ಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅತ್ಯಂತ ಭೀಕರ ಅಪಘಾತಕ್ಕೆ ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.
ಸೆಲ್ಫಿ ತೆಗೆದುಕೊಂಡು ಸ್ಟೇಟಸ್ ಗೆ ಹಾಕಿದ್ದ ಮಹಿಳೆಯರಿಗೆ ಇದೆ ಕೊನೆ ಸೆಲ್ಫಿ ಆಗಲಿದೆ ಎಂಬುದು ಗೊತ್ತಿರಲಿಲ್ಲ.
ಭೀಕರ ಅಪಘಾತಕ್ಕೆ ಪ್ರಧಾನಿ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ತಾಲೂಕಿನ ಇಟ್ಟಿಗಟ್ಟಿಯ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿರುವ ಭೀಕರ ಅಪಘಾತಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಶೋಕ ವ್ಯಕ್ತಪಡಿಸಿದ್ದು ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಸೂಚನೆ ನೀಡಿದ್ದಾರೆ.