ಬೆಂಗಳೂರು ವಿಶ್ವದ ನಂ.1 ಅತೀವೇಗದ ಟೆಕ್ನಾಲಜಿ ಹಬ್..!
ಬೆಂಗಳೂರಲ್ಲಿ ಹೂಡಿಕೆ 5.4 ಪಟ್ಟು ಏರಿಕೆ| ಬ್ರಿಟನ್ ಮೂಲದ ಸಂಸ್ಥೆಯ ರಾರಯಂಕಿಂಗ್| ಬ್ರಿಟನ್ ರಾಜಧಾನಿ ಲಂಡನ್ 2ನೇ ಸ್ಥಾನ| ಭಾರತದ ವಾಣಿಜ್ಯ ರಾಜಧಾನಿ ಮುಂಬೈ 6ನೇ ಸ್ಥಾನ|
ಲಂಡನ್(ಜ.15): ಭಾರತದ ಮಾಹಿತಿ ತಂತ್ರಜ್ಞಾನ ರಾಜಧಾನಿ ಎನಿಸಿಕೊಂಡಿರುವ ಕರ್ನಾಟಕ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ವಿಶ್ವದಲ್ಲೇ ಅತ್ಯಂತ ವೇಗದ ಪ್ರಬುದ್ಧ ತಂತ್ರಜ್ಞಾನ ವಾತಾವರಣ ಹೊಂದಿರುವ ನಂ.1 ನಗರಿ ಎಂಬ ಹಿರಿಮೆ ನಮ್ಮ ಬೆಂಗಳೂರಿಗೆ ದೊರಕಿದೆ. ಬ್ರಿಟನ್ ರಾಜಧಾನಿ ಲಂಡನ್ 2ನೇ ಸ್ಥಾನದಲ್ಲಿದ್ದರೆ, ಭಾರತದ ವಾಣಿಜ್ಯ ರಾಜಧಾನಿ ಮುಂಬೈ 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಡೀಲ್‌ರೂಂ.ಕೋ ಸಂಸ್ಥೆಯ ದತ್ತಾಂಶವನ್ನು ಲಂಡನ್ ಮೇಯರ್ ಅವರ ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಹೂಡಿಕೆ ಸಂಸ್ಥೆಯಾದ ಲಂಡನ್ ಆ್ಯಂಡ್ ಪಾರ್ಟನರ್ಸ್ ವಿಶ್ಲೇಷಣೆಗೊಳಪಡಿಸಿದ್ದು, ಅದರ ಆಧಾರದಲ್ಲಿ ಬೆಂಗಳೂರಿಗೆ ನಂ.1 ಪಟ್ಟ ನೀಡಲಾಗಿದೆ.
ಸ್ಮಾರ್ಟ್ ಮಾಸ್ಕ್ ಗೊತ್ತಾ ನಿಮಗೆ? ಗೊತ್ತಿಲ್ಲ ಎಂದರೆ ಓದಿ...
2016ರಲ್ಲಿ ಬೆಂಗಳೂರಿಗೆ 9500 ಕೋಟಿ ಬಂಡವಾಳ ಹರಿದುಬಂದಿತ್ತು. 2020ರಲ್ಲಿ ಇದು .52 ಸಾವಿರ ಕೋಟಿಗೆ ಏರಿಕೆಯಾಗಿದೆ. ನಾಲ್ಕೇ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹೂಡಿಕೆ ಪ್ರಮಾಣ 5.4 ಪಟ್ಟು ಏರಿಕೆಯಾಗಿದೆ. ವಿಶ್ವದ ಎಲ್ಲೂ ಹೂಡಿಕೆಯಲ್ಲಿ ಇಷ್ಟುಪಟ್ಟು ಏರಿಕೆಯಾಗದ ಕಾರಣ ಬೆಂಗಳೂರು ನಂ.1 ಸ್ಥಾನ ಅಲಂಕರಿಸಿದೆ.
2ನೇ ಸ್ಥಾನದಲ್ಲಿರುವ ಲಂಡನ್‌ನಲ್ಲಿ ಇದೇ ಅವಧಿಯಲ್ಲಿ ಮೂರು ಪಟ್ಟು ಹೂಡಿಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು, ಲಂಡನ್ ನಂತರದ ಸ್ಥಾನದಲ್ಲಿ ಜರ್ಮನಿಯ ಮ್ಯೂನಿಚ್ ಹಾಗೂ ಬರ್ಲಿನ್, ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್ ಸ್ಥಾನ ಪಡೆದಿವೆ. ಈ ಮೂರು ನಗರಗಳಲ್ಲಿ 2016- 2020ರ ಅವಧಿಯಲ್ಲಿ ಹೂಡಿಕೆ ಪ್ರಮಾಣ ಡಬಲ್ ಆಗಿದೆ.