ಒಡಿಶಾ :  ತಗ್ಗುಪ್ರದೇಶಗಳಿಂದ ತೆರವುಗೊಳಿಸಲಾಗಿರುವ ಜನರನ್ನು 880 ಚಂಡಮಾರುತ ನಿರಾಶ್ರಿತ ಶಿಬಿರಗಳಿಗೆ ಸಾಗಿಸಲಾಗಿದೆ. ಇಂತಹ ಸೌಲಭ್ಯ ಇಲ್ಲದ ಕಡೆ ಶಾಲೆಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. 

ಮುನ್ನೆಚ್ಚರಿಕೆ ಕ್ರಮವಾಗಿ ರೈಲ್ವೆ ಇಲಾಖೆ 223 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಈಗಾಗಲೇ ಮುಂಗಡ ಟಿಕೆಟ್‌ ಕಾದಿರಿಸಿದ್ದವರಿಗೆ ಹಣ ವಾಪಸ್‌ ಮಾಡುವುದಾಗಿ ತಿಳಿಸಿದೆ. ಪುರಿಯಲ್ಲಿದ್ದ ಪ್ರವಾಸಿಗರನ್ನು ಗುರುವಾರ ಸಂಜೆಯೇ ವಾಪಸ್‌ ಕಳುಹಿಸಲಾಗಿದೆ.

ಒಡಿಶಾ : ಕರಾವಳಿಯತ್ತ ಮುನ್ನುಗ್ಗಿ ಬರುತ್ತಿದೆ ಫನಿ : 14 ಜಿಲ್ಲೆಗಳಲ್ಲಿ ಹೈ ಅಲರ್ಟ್

ಈ ನಡುವೆ, ಒಡಿಶಾದಲ್ಲಿರುವ ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಕ್ಷಿಪ್ರವಾಗಿ ಕಳುಹಿಸಿಕೊಡಲು ಪುರಿಯಿಂದ ಹೌರಾ ಹಾಗೂ ಶಾಲಿಮಾರ್‌ಗೆ ಗುರುವಾರ 3 ವಿಶೇಷ ರೈಲುಗಳನ್ನು ಓಡಿಸಲಾಗಿದೆ.