ಕಾಶ್ಮೀರ ವಿವಾದ ಪರಿಹಾರಕ್ಕೆ ಮಧ್ಯಸ್ಥಿಕೆಗೆ ಸಿದ್ಧ ಎಂದ ಟ್ರಂಪ್| ಮತ್ತೆ ಮಧ್ಯಸ್ಥಿಗೆ ಒಲವು ತೋರಿದ ಅಮೆರಿಕ ಅಧ್ಯಕ್ಷ| ಭಾರತ-ಪಾಕಿಸ್ತಾನ ನಡುವೆ ಮಧ್ಯಸ್ಥಿಕೆ ವಹಿಸುತ್ತೇನೆಂದ ಟ್ರಂಪ್| ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದ ಅಮೆರಿಕ ಅಧ್ಯಕ್ಷ| ಕಾಶ್ಮೀರ ವಿವಾದಕ್ಕೂ ಧರ್ಮಕ್ಕೂ ಸಂಬಂಧವಿದೆ ಎಂದ ಟ್ರಂಪ್|

ವಾಷಿಂಗ್ಟನ್(ಆ.21)​: ಕಾಶ್ಮೀರ ವಿವಾದ ಪರಿಹಾರಕ್ಕೆ ತಾನು ಮಧ್ಯಸ್ಥಿಕೆಗೆ ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​ ಮತ್ತೊಮ್ಮೆ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶ್ಮೀರ ಒಂದು ಸಂಕೀರ್ಣವಾದ ಸ್ಥಳ ಎಂದು ಅಭಿಪ್ರಾಯಪಟ್ಟಿರುವ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಗೆ ಧರ್ಮವೇ ಪ್ರಮುಖ ಕಾರಣ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕಾಶ್ಮೀರ ವಿವಾದಕ್ಕೂ ಹಿಂದೂ-ಮುಸ್ಲಿಂ ವೈಮನಸ್ಸಿಗೂ ತಳುಕು ಹಾಕಿರುವ ಟ್ರಂಪ್, ವಿವಾದವನ್ನು ಸೂಕ್ಷ್ಮವಾಗಿ ಬಗರೆಹರಿಸಬೇಕಿದ್ದು, ತಾವು ಮಧ್ಯಸ್ಥಿಕಗೆ ಸಿದ್ಧ ಎಂದು ಭರವಸೆ ನೀಡಿದ್ದಾರೆ.

Scroll to load tweet…

ಎರಡು ವಿವಾದಾತ್ಮಕ ಪ್ರಾಂತ್ಯಗಳನ್ನು ಹೊಂದಿರುವ ಭಾರತ-ಪಾಕಿಸ್ತಾನ, ಅದಕ್ಕಾಗಿ ಪರಸ್ಪರ ದ್ವೇಷ ಕಾರುತ್ತಿರುವುದು ಆತಂಕವನ್ನುಂಟು ಮಾಡಿದೆ ಎಂದು ಟ್ರಂಪ್ ಹೇಳಿದ್ದಾರೆ.

ಕಾಶ್ಮೀರ ವಿವಾದಕ್ಕೂ ಧಮರ್ಮಕ್ಕೂ ಸಂಬಂಧವಿದ್ದು, ಧರ್ಮವೇ ಒಂದು ಸಂಕೀರ್ಣ ವಿಚಾರವಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.