ದೂರವಾಣಿ ಸಂಭಾಷಣೆ ನಡೆಸಿದ ಮೋದಿ-ಟ್ರಂಪ್| ಆರ್ಟಿಕಲ್ 370 ರದ್ದತಿ ನಂತರದ ಬೆಳವಣಿಗೆಗಳ ಕುರಿತು ಚರ್ಚೆ| ಭಾರತದ ವಿರುದ್ಧ ದ್ವೇಷ ಕಾರುತ್ತಿರುವ ಪಾಕ್ ಪ್ರಧಾನಿ| ಇಮ್ರಾನ್ ಹೇಳಿಕೆ ಶಾಂತಿ ಸ್ಥಾಪನೆಗ ಧಕ್ಕೆ ಎಂದ ಪ್ರಧಾನಿ ಮೋದಿ| ಉಭಯ ನಾಯಕರ 30 ನಿಮಿಷಗಳ ದೂರವಾಣಿ ಸಂಭಾಷಣೆ| ಮೆತ್ತಗಿರುವಂತೆ ಇಮ್ರಾನ್ ಖಾನ್‌ಗೆ ಸಲಹೆ ನೀಡಿದ ಟ್ರಂಪ್| 

ನವದೆಹಲಿ(ಆ.20): ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೂರವಾಣಿ ಸಂಭಾಷಣೆ ನಡೆಸಿದ ಪರಿಣಾಮ, ಭಾರತದ ವಿರುದ್ಧ ದ್ವೇಷ ಕಾರುವ ಹೇಳಿಕೆ ನೀಡದಂತೆ ಟ್ರಂಪ್ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆಯೇ(ಆ.19) ಉಭಯ ನಾಯಕರು ದೂರವಾಣಿ ಸಂಭಾಷಣೆ ನಡೆಸಿದ್ದು, ಆರ್ಟಿಕಲ್ 370 ರದ್ದತಿ ನಂತರದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಭಾರತದ ವಿರುದ್ಧ ಯುದ್ಧದ ಮಾತುಗಳನ್ನಾಡುತ್ತಿರುವ ಇಮ್ರಾನ್ ಖಾನ್ ವಿರುದ್ಧ ಪ್ರಧಾನಿ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದರು.

Scroll to load tweet…

 ಭಾರತದ ವಿರುದ್ಧ ದ್ವೇಷ ಕಾರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗಳ ಕುರಿತು ಮೋದಿ ಪ್ರಸ್ತಾಪಿಸಿದ್ದು, ಈ ರೀತಿಯ ದ್ವೇಷಪೂರಿತ ಹೇಳಿಕೆಗಳು ಶಾಂತಿ ಸ್ಥಾಪನೆಗೆ ಧಕ್ಕೆ ತರಲಿವೆ ಎಂದು ಟ್ರಂಪ್’ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಮಾತನಾಡಿರುವ ಟ್ರಂಪ್, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದ್ದಾರೆ.ಅಲ್ಲದೇ ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.