ಪಣಜಿ, (ಮಾ.28): ಮಹರಾಷ್ಟ್ರವಾದಿ ಗೋಮಂತಕ್‌ ಪಕ್ಷದಿಂದ ಬಿಜೆಪಿಗೆ ಸೇರಿದ ಒಂದು ದಿನಕ್ಕೆ ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್‌ ಅಜ್ಗಾಂಕರ್‌ ಅವರಿಗೆ ಉಪಮುಖ್ಯಮಂತ್ರಿ ಕುರ್ಚಿ ಸಿಕ್ಕಿದೆ. 

 ಈ ಮೂಲಕ ಗೋವಾ ಫಾರ್ವರ್ಡ್‌ ಪಕ್ಷದ ನಾಯಕ ಮತ್ತು ಸಚಿವ ವಿಜಯ್‌ ಸರ್ದೇಸಾಯಿ ಅವರೊಂದಿಗೆ ಅಜಂಗಾವ್ಕರ್ ಅವರು 2ನೇ ಉಪಮುಖ್ಯಮಂತ್ರಿಯಾದರು.

ಗೋವಾದಲ್ಲಿ ರಾಜಕೀಯ ಹೈಡ್ರಾಮಾ: ರಾತ್ರೋ ರಾತ್ರಿ ಬಿಜೆಪಿಗೆ ಸೇರ್ಪಡೆಗೊಂಡ ಎಂಜಿಪಿ ಶಾಸಕರು!

ಬುಧವಾರವಷ್ಟೇ ಅಜಂಗಾವ್ಕರ್ ಮತ್ತು ಮತ್ತೊಬ್ಬ ಮಹಾರಾಷ್ಟ್ರಾವಾದಿ ಗೊಮಾಂತಕ್ ಪಕ್ಷದ(MGP) ಶಾಸಕ ದೀಪಕ್ ಪವಾಸ್ಕರ್ ಅವರು ಪಕ್ಷದ ಶಾಸಕಾಂಗವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. 

ಈ ಬಗ್ಗೆ ಗೋವಾ ವಿಧಾನಸಭೆ ಸ್ಪೀಕರ್ ಮೈಕೆಲ್ ಲೋಬೊ ಅವರಿಗೆ ಎಂಜಿಪಿ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಪತ್ರವೊಂದನ್ನು ನೀಡಿದ್ದರು. 

ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು ಉಪಮುಖ್ಯಮಂತ್ರಿ ಸುದಿನ್ ಧವಳಿಕರ್ ಅವರನ್ನು ತಮ್ಮ ಸಂಪುಟದಿಂದ ಮಂಗಳವಾರ ವಜಾ ಮಾಡಿದ್ದರು.

ಇದೀಗ ಅವರ ಸ್ಥಾನಕ್ಕೆ ಮನೋಹರ್‌ ಅಂಜ್ಗಾಂಕರ್‌ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಲಾಗಿದೆ.