ಮಲೆ ಮಹದೇಶ್ವರ ಬೆಟ್ಟವನ್ನು ದರ್ಶನ್ ದತ್ತು ತೆಗೆದುಕೊಂಡಿದ್ದು ನಿಜನಾ? ಅರಣ್ಯ ಇಲಾಖೆ ನೀಡಿದೆ ಸ್ಪಷ್ಟೀಕರಣ |
ಬೆಂಗಳೂರು (ಡಿ. 19): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಲೆ ಮಹದೇಶ್ವರ ಬೆಟ್ಟವನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಅರಣ್ಯ ಭೂಮಿಯನ್ನು ಸಾರ್ವಜನಿಕರಿಗೆ ದತ್ತು ನೀಡುವಂತಹ ಯಾವುದೇ ಯೋಜನೆ ರಾಜ್ಯ ಸರ್ಕಾರದಲ್ಲಿಲ್ಲ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.
ಪ್ರಾಣಿಯಾಯ್ತು , ಈಗ ಇಡೀ ಬೆಟ್ಟವನ್ನೇ ದತ್ತು ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಅರಣ್ಯ, ಮೀಸಲು ಅರಣ್ಯ ಹಾಗೂ ವನ್ಯಜೀವಿ ಧಾಮಗಳನ್ನು ದತ್ತು ನೀಡುವಂತಹ ಯಾವುದೇ ಯೋಜನೆ ಅರಣ್ಯ ಇಲಾಖೆಯಲ್ಲಿಲ್ಲ. ಆದರೆ, ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ಚಿತ್ರ ನಟ ದರ್ಶನ್ ಅವರು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಭೂಮಿ ದತ್ತು ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ. ಈ ಅಂಶ ಸತ್ಯಕ್ಕೆ ದೂರವಾಗಿದೆ ಎಂದು ಮಲೈ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ತಿಳಿಸಿದ್ದಾರೆ.
ದರ್ಶನ್ ಕುರುಕ್ಷೇತ್ರಕ್ಕೆ ಸೆನ್ಸಾರ್ ಮಂಡಳಿ ಸರ್ಟಿಫಿಕೇಟ್, ಅಂಬಿ ನೆನಪು
ದರ್ಶನ್ ಅವರು ಮಲೈಮಹದೇಶ್ವರ ವನ್ಯಜೀವಿಧಾಮದಲ್ಲಿರುವ ಎರಡು ಕ್ಯಾಂಪ್‌ಗಳಲ್ಲಿ ಕಾರ್ಯನಿರ್ವಹಿಸುವ ಅರಣ್ಯ ವೀಕ್ಷಕರ ಕಲ್ಯಾಣಕ್ಕಾಗಿ ಹಣ ನೀಡಿದ್ದಾರೆ. ಆದರೆ, ಅರಣ್ಯ ಭೂಮಿ ದತ್ತು ಪಡೆದಿದ್ದಾರೆ ಎಂಬ ಅಂಶ ಸತ್ಯಕ್ಕೆ ದೂರವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
