ಬೆಂಗಳೂರು[ಸೆ.26]:  ಜಿಮ್ ಟ್ರೈನರ್ ಮಾರುತಿ ಗೌಡ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ  ನಟ ದುನಿಯಾ ವಿಜಯ್ ಹಾಗೂ ಸಹಚರರಿಗೆ ಜಾಮೀನನ್ನು ನಿರಾಕರಿಸಿದೆ.

ಈ ಸುದ್ದಿಯನ್ನು ಓದಿ: ದುನಿಯಾ ವಿಜಿ ಸಂಗಾತಿ ಕೀರ್ತಿ ಗೌಡ ಯಾರು?

ವಾದ, ಪ್ರತಿವಾದ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಹಲ್ಲೆ, ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೈಗ್ರೌಂಡ್ಸ್‌ ಪೊಲೀಸ್ ಠಾಣೆಯಲ್ಲಿ ದುನಿಯಾ ವಿಜಿ ಹಾಗೂ ಮೂವರು ಸಹಚರರ ವಿರುದ್ಧ ಪ್ರಕರಣ ದಾಖಲಾಗಿ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿತ್ತು. ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿ ಪರ ವಕೀಲರಿಗೆ ಸೆ.26ರಂದು ಅರ್ಜಿಯನ್ನು ಕಾಯ್ದಿರಿಸಲಾಗಿತ್ತು. ಆರೋಪಿ ಪರ ವಕೀಲ ನಾಳೆ ಸೆಷನ್ಸ್ ಕೋರ್ಟಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಆರೋಪಿಗಳು ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. 

ಈ ಸುದ್ದಿಯನ್ನು ಓದಿ : ದುನಿಯಾ ವಿಜಿಯನ್ನು ವಿಲನ್ ಮಾಡೋ ಹಿಂದೆ ಕೈ ಯಾರದ್ದು?

ನಗರದ ಅಂಬೇಡ್ಕರ್‌ ಭವನದಲ್ಲಿ ಸೆ.22ರ ಶನಿವಾರ ರಾತ್ರಿ ನಡೆದ ಜಗಳದಿಂದಾಗಿ ನಟ ದುನಿಯಾ ವಿಜಯ್‌ ಮತ್ತು ಬೆಂಬಲಿಗರನ್ನು ಬಂಧಿಸಲಾಗಿತ್ತು.
ಜಿಮ್‌ ಟ್ರೈನರ್‌ ಆಗಿರುವ ಪಾನಿಪುರಿ ಕಿಟ್ಟಿ ಅವರ ತಮ್ಮನ ಮಗ ಮಾರುತಿ ಗೌಡ ಎಂಬುವವರನ್ನು ವಿಜಿ ಒಳಗೊಂಡು ನಾಲ್ವರು ಅಪಹರಿಸಿ  ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ಏತನ್ಮದ್ಯೆ ಪಾನಿಪುರಿ ಕಿಟ್ಟಿ ವಿರುದ್ಧವೂ ಹಲ್ಲೆ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇಲೆ ಎಫ್ ಐಆರ್ ದಾಖಲಾಗಿದೆ.

ಈ ಸುದ್ದಿಯನ್ನು ಓದಿ: ವಿರೋಧ ಮರೆತು ನಟ ದರ್ಶನ್ ಆರೋಗ್ಯ ವಿಚಾರಿಸಿದ ನಾಯಕ