ಬೆಂಗಳೂರು (ಜೂ.5): ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಪ್ರಥಮ ಮುಂಗಡ ಪತ್ರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ್ದು, ರೈತರ ತುಸು ಸಾಲ ಮನ್ನಾ ಮಾಡಿ, ಕೊಂಚ ನಿರಾಳವಾಗಿಸಿದ್ದಾರೆ. 

ಆದರೆ, ಹೇಳುವಂಥ ಕೊಡುಗೆಗಳೇನೂ ನೀಡದ ಕುಮಾರಸ್ವಾಮಿ, ಜೆಡಿಎಸ್‌ ಅನ್ನು ಕಡೆಗಣಿಸಿದ ಮಲೆನಾಡು ಹಾಗೂ ಕರಾವಳಿ ಭಾಗವನ್ನು ತಿರಸ್ಕರಿಸಿದ್ದಾರೆ. ಆದರೆ, ಪಕ್ಷದ ಕೈ ಹಿಡಿದ ಮಂಡ್ಯ, ರಾಮನಗರ ಹಾಗೂ ತವರು ಕ್ಷೇತ್ರ ಹಾಸನ ಜಿಲ್ಲೆಗಳಿಗೆ ಭರಪೂರ ಕೊಡುಗೆ ನೀಡಿದ್ದಾರೆ. ಜತೆಗೆ ಉತ್ತರ ಕರ್ನಾಟಕ ಭಾಗಕ್ಕೂ ಹೇಳುವಂಥ ಯಾವುದೇ ಅನುದಾನವನ್ನು ಘೋಷಿಸಿಲ್ಲ. ಪ್ರಾಂತ್ಯವಾರು ಅನುದಾನ ನಿಗದಿಗೊಳಿಸುವಲ್ಲಿಯೂ ಎಚ್ಟಿಕೆ ತಾರತಮ್ಯ ತೋರಿದ್ದಾರೆ. 

ಕುಮಾರಸ್ವಾಮಿ ಅವರ ಈ ನಿಲುವನ್ನು ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ವಿರೋಧಿಸಿದ್ದಾರೆ. 'ಉತ್ತರ ಕರ್ನಾಟಕಕ್ಕೆ ಏನೂ ಘೋಷಿಸಿಲ್ಲ,' ಎಂದು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಪ ಸಂಖ್ಯಾತ ಸಮುದಾಯಕ್ಕೆಆದ್ಯತೆ ನೀಡುವಲ್ಲಿ ವಿಫಲವಾದ ಕುಮಾರಸ್ವಾಮಿ ಬಜೆಟ್‌ ತೃಪ್ತಕರವಲ್ಲವೆಂದು ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಬಜೆಟ್ ಗೆ 10 ಸಾವಿರ ಕೋಟಿ ಸೇರಿಸಿ ಬಜೆಟ್ ಮಂಡಿಸಿದ್ದಾರೆ. ಕಳೆದ ಬಾರಿಯ ಬಜೆಟ್‌ನಲ್ಲಿ ಕರಾವಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ರೈತರ ಸಾಲಮನ್ನಾ ಮಾಡಲಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಸಿದರೂ, ಕೇಂದ್ರ ಸರಕಾರದಷ್ಟು ಏರಿಸಿಲ್ಲ.
- ಯು.ಟಿ ಖಾದರ್ , ನಗರಾಭಿವೃದ್ಧಿ ಸಚಿವ

ಇದು ಮುಂದುವರಿದ ಬಜೆಟ್. ಎರಡು ಪಕ್ಷಗಳ ಕಾರ್ಯಕ್ರಮ‌ ಒಗ್ಗೂಡಿಸುವ ಬಜೆಟ್. ಸಮನ್ವಯ ಸಮತಿ ಸಭೆಯಲ್ಲಿ ಒಪ್ಪಿಗೆಯಾದ ಬಜೆಟ್. ಕೆಲವು ಹೊಸ ತೆರಿಗೆ ಪರೀಕ್ಷೆ ಮಾಡಲಾಗಿದೆ. ಬೆಳೆ ಸಾಲ ಮನ್ನಾ ಮಾಡಿ ರೈತರಿಗೆ ಅನುಕೂಲ ಮಾಡಲಾಗಿದೆ.
- ಸಿದ್ದರಾಮಯ್ಯ, ಮಾಜಿ ಸಿಎಂ 

ಕರಾವಳಿಗೆ ಏನೂ ಕೊಟ್ಟಿಲ್ಲ. ಇದು ಹಾಸನ, ಮಂಡ್ಯ ಮೈಸೂರು ಬಜೆಟ್. ಕರಾವಳಿಯಲ್ಲಿ ಮಳೆ ಹಾನಿಯಾಗಿ ಸಾಕಷ್ಟು ಸಮಸ್ಯೆಯಾಗಿತ್ತು.  ಒಂದು ಪ್ಯಾಕೇಜ್ ಕೊಡ್ತಾರೆ ಅನ್ನೋ ಭರವಸೆ ಇತ್ತು.ಯಾವುದನ್ನೂ ಕೊಟ್ಟಿಲ್ಲ‌. ಮೀನುಗಾರರ ಸಾಲಮನ್ನಾ ಆಗಬೇಕಿತ್ತು.  ಅದು ಆಗಿಲ್ಲ.
- ಹರೀಶ್ ಪೂಂಜಾ, ಬೆಳ್ತಂಗಡಿ ಶಾಸಕ

ಇದೊಂದು ದೋಖಾ‌. ರೈತರ ಸಾಲ ಮನ್ನಾ ಮಾಡಿಲ್ಲ. ನಾವು ಕುಳಿತು ಚರ್ಚೆ ಮಾಡಿ ಹೋರಾಟದ ರೂಪು ರೇಷೆ ಮಾಡ್ತಿವಿ. ಪೆಟ್ರೋಲ್ ಡಿಸೆಲ್ ತೆರಿಗೆ ಹೆಚ್ಚಿಸಿದ್ದಾರೆ. ನಮ್ಮ ದುಡ್ಡನ್ನು ಬಳಸಿಕೊಂಡು ತೆರಿಗೆ ಹೆಚ್ಚಿಸಿದ್ದಾರೆ.
- ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ಶಾಸಕ

ತೈಲ ತೆರಿಗೆ ದರ ಏರಿಕೆ
ಬಜೆಚ್ ಮಂಡಿಸಲು ವಿಧಾನಸೌಧಕ್ಕೆ ಬಂದ ಎಚ್ಡಿಕೆ ತಡೆದ ರೇವಣ್ಣ
ಬೆಂಗಳೂರು ವಾಹನ ದಟ್ಟಮೆ ನಿಯಂತ್ರಕ್ಕೆ ಕ್ರಮ