ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಸಿಎಂರನ್ನು ತಡೆದ ರೇವಣ್ಣ

HD Revanna Vasthu Effect On CM Kumaraswamy
Highlights

ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಹೋದರ ಹಾಗೂ ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ತಡೆದ ಘಟನೆ ಇಂದು ನಡೆದಿದೆ. 

ಬೆಂಗಳೂರು :  ಇಂದು ಬಜೆಟ್ ಮಂಡಿಸಲು ಬಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಹೋದರ ರೇವಣ್ಣ ಅವರ ವಾಸ್ತು ಎಫೆಕ್ಟ್ ಆಗಿದೆ. ಎಂದಿನಂತೆ ಮುಖ್ಯಮಂತ್ರಿಗಳಿಗೆ ಇರುವ ಲಿಫ್ಟ್ ನಲ್ಲೂ ವಾಸ್ತು  ನೋಡಿದ ರೇವಣ್ಣ ಅವರು ಅದನ್ನು ಬಳಸಲು ಬಿಡಲಿಲ್ಲ. 

ಬಜೆಟ್ ಮಂಡಿಸಲು ವಿಧಾನಸೌಧಕ್ಕೆ ಬಂದ ಸಿಎಂ ಗೆ ರೆಗ್ಯುಲರ್ ಲಿಫ್ಟ್ ಬಳಸಲು ಬಿಡದೇ, ಅಧಿಕಾರಿಗಳು ಬಳಸುವ ಲಿಫ್ಟ್ ಅನ್ನು ನಿಲ್ಲಿಸಿ ಅದರಲ್ಲಿ ಹೋಗಲು ಸೂಚನೆ ನೀಡಿದರು. 

ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಮುಹೂರ್ತ, ವಾಸ್ತು ಎಂದು ನೋಡುತ್ತಿರುವ ರೇವಣ್ಣ ಅವರ ವಾಸ್ತು ನಡೆ ಇಂದು ಮುಖ್ಯಮಂತ್ರಿಗಳ ಮೇಲೂ ಪ್ರಭಾವ ಆಗಿದೆ.  

ಬಜೆಟ್ ಮಂಡನೆ ಕೂಡಾ ಶುಕ್ರವಾರದ ಬದಲಿಗೆ ಗುರುವಾರ ಮಂಡಿಸಲು ರೇವಣ್ಣ ಅವರೇ ನಿಗದಿ ಪಡಿಸಿದ್ದು,  ಶುಕ್ರವಾರ ಅಷ್ಟಮೀ ತಿಥಿ ಇರುವ ಕಾರಣದಿಂದ  ಒಂದು ದಿನ ಮೊದಲೇ  ಬಜೆಟ್ ಮಂಡನೆ ಮಾಡಬೇಕು ಎಂದು ಸೂಚಿಸಿದ್ದರು ಎನ್ನಲಾಗಿದೆ. 

loader