ಬೆಂಗಳೂರಿನ ಜನರು ಬಳಲುವುದೇ ಸಂಚಾರ ದಟ್ಟಣೆಯಿಂದ. ಇದಕ್ಕೆ ಎಷ್ಟು ಅನುದಾನ ಮೀಸಲಿಟ್ಟರೂ ಸಾಲದು. ಎಲ್ಲೆಡೆ ಫ್ಲೈ ಓವರ್ ನಿರ್ಮಿಸಿದರೂ ಸಮಸ್ಯೆಗೆ ಪರಿಹಾರ ಸಿಗೋಲ್ಲ. ಎಚ್.ಡಿ.ಕುಮಾರಸ್ವಾಮಿ ಸಹ ಬಜೆಟ್‌ನಲ್ಲಿ ಈ ಸಮಸ್ಯೆ ತೊಲಗಿಸಲು ಕೆಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದೆ, ಬೆಂಗಳೂರಿಗೆ, ಸಾರಿಗೆಗೆ, ಮೆಟ್ರೋ ಅಭಿವೃದ್ಧಿಗೆ ಕೊಟ್ಟಿದ್ದೆಷ್ಟು, ಬಿಟ್ಟಿದ್ದೆಷ್ಟು?
ಬೆಂಗಳೂರು (ಜು.5): ಸಮ್ಮಿಶ್ರ ಸರಕಾರದ ಬಜೆಟ್ ಮಂಡಿಸಿದ ಎಚ್.ಡಿ.ಕುಮಾರಸ್ವಾಮಿ ಮದ್ಯ ಬೆಲೆ ಏರಿಸಿ, ಪೆಟ್ರೋಲ್‌ನಿಂದಲೂ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದ್ದಾರೆ. ಬೆಂಗಳೂರಿಗರಿಗೆ ಕೆಲವು ಕೊಡುಗೆಗಳನ್ನು ನೀಡಿರುವ ಕುಮಾರಸ್ವಾಮಿ, ವಾಹನ ಸಂಚಾರ ದಟ್ಟಣೆ ತಡೆಗೆ ಅಗತ್ಯ ಕೈ ಕ್ರಮಗೊಳ್ಳಲು ಅನುದಾನವನ್ನು ಮೀಸಲಿಟ್ಟಿದ್ದಾರೆ.
ಬೆಂಗಳೂರಿಗೆ ಎಚ್ಟಿಕೆ ಕೊಟ್ಟಿದ್ದೇನು?
ಸಾರಿಗೆ
- BMRCL, BMTC, BDA, BBMPಗಳಿಗೆ ಸಮಗ್ರ ನೀತಿ
- ಬೆಂಗಳೂರು ವಾಹನ ದಟ್ಟನೆ ತಡೆಗೆ ದಿಟ್ಟ ಕ್ರಮ
- ಬಿಎಂಟಿಸಿಗೆ 100 ಕೋಟಿ ರೂಗಳ ಸಹಾಯಧನ
- ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ 4 ಕೋಟಿ ರೂ. ಸಹಾಯಧನ
- ಬೆಂಗಳೂರಿನಲ್ಲಿ 100 ಚಾರ್ಜಿಂಗ್ ಘಟಕ ಸ್ಥಾಪನೆ
- ಸಾರ್ವಜನಿಕರ ಉಪಯೋಗಕ್ಕಾಗಿ 4236 ನೂತನ ಬಸ್ ಖರೀದಿ
- ಬಿಎಂಟಿಸಿಯಿಂದ 80 ಎಲೆಕ್ಟ್ರಿಕ್ ಬಸ್ಗಳ ಖರೀದಿ, ಕಾರ್ಯಾಚರಣೆ
- ಬೆಂಗಳೂರು ಹೊರವಲಯದಲ್ಲಿ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ
- ಸ್ಪೆಷಲ್ ಪರ್ಪೋಸ್ ವೆಹಿಕಲ್ ಯೋಜನೆ ಮೂಲಕ ಪಿ.ಆರ್.ಆರ್ ನಿರ್ಮಾಣ
- 65 ಕಿ.ಮೀ ರಸ್ತೆ ನಿರ್ಮಾಣಕ್ಕಾಗಿ 11,950 ಕೋಟಿ ರೂ. ಅಂದಾಜು ಮೊತ್ತ
- ಯೋಜನೆ ಜಾರಿಗೆ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ಕ್ರಮ
ಮೆಟ್ರೋ
- ಮೆಟ್ರೋ 3ನೇ ಹಂತದ ಕಾಮಗಾರಿಗೆ ಚಾಲನೆ
- 95 ಕಿ.ಮೀ ದೂರದ 5 ಮಾರ್ಗಗಳ ಅಧ್ಯಯನಕ್ಕೆ ಕ್ರಮ
- ನೂತನ ಮಾರ್ಗಗಳಾದ ಜೆಪಿನಗರದಿಂದ ಕೆ.ಆರ್ ಪುರಂ 42.75 ಕಿ.ಮೀ
- ಟೋಲ್ ಗೇಟ್‌ನಿಂದ ಕಡಬಗೆರೆ 12.5 ಕಿ.ಮೀ,
- ಗೊಟ್ಟಿಗೆರೆಯಿಂದ ಬಸವಪುರ 3.07 ಕಿ.ಮೀ.
- ಆರ್.ಕೆ. ಹೆಗ್ಡೆ ನಗರದಿಂದ ಏರೋಸ್ಪೆಸ್ ಪಾರ್ಕ್ ವರೆಗೆ 18.95 ಕಿ.ಮೀ
- ಕೋಗಿಲು ಕ್ರಾಸ್ ನಿಂದ ರಾಜಾನು ಕುಂಟೆ 10.6 ಕಿ.ಮೀ
- ಇಬ್ಬಲೂರು ನಿಂದ ಕರ್ಮಲ್ ರಾಮ್ ವರೆಗೆ 6.67 ಕಿ.ಮೀ ವಿಸ್ತರಿಸಲು ಚಿಂತನೆ.
ಬಿಡಿಎ
- ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ಅನುದಾನ
- ಬೆಳ್ಳಂದೂರು ಕೆರೆಯಿಂದ ಬೆಂಗಳೂರು ಗ್ರಾಂ. ಪ್ರದೇಶಗಳಿಗೆ ಹನಿ ನೀರಾವರಿ ವ್ಯವಸ್ಥೆ
- ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ.
- 2ನೇ ಹಂತದಲ್ಲಿ 3000 ನಿವೇಶನ ಹಂಚಿಕೆ ಕಾರ್ಯಸೂಚಿ
- ಈಗಾಗಲೇ ಮಾಲೀಕರಿಗೆ 2175 ನಿವೇಶನ ಹಂಚಲಾಗಿದೆ
ಪೌರಾಡಳಿತ
5 ಮಹಾನಗರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವಾಹನ ನಿಲುಗಡೆ ಸೌಲಭ್ಯ
ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿ ವಿವರ ಜಿಪಿಎಸ್ ಮೂಲಕ ವೀಕ್ಷಿಸುವ ಸೌಲಭ್ಯ
10 ಮಹಾನಗರಗಳಲ್ಲಿ ನೀರು ಸರಬರಾಜು, ಒಳಚರಂಡಿ ಜಾಲದ ಮ್ಯಾಪಿಂಗ್
ಹಾಸನ ಜಿಲ್ಲೆ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 36 ಕೋಟಿ ರೂ.
ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ರೂ. ವಿಶೇಷ ಪ್ಯಾಕೇಜ್
ಪ್ಲಾಸ್ಟಿಕ್ ವಸ್ತುಗಳ ಎಂ.ಆರ್.ಪಿ ಮೇಲೆ ಶೇ. 3ರಷ್ಟು ಶುಲ್ಕ
ಶುಲ್ಕದಿಂದ ಸಂಗ್ರಹವಾದ ಮೊತ್ತ ಪ್ಲಾಸ್ಟಿಕ್ ಸಂಸ್ಕರಣೆಗೆ ಬಳಕೆ
ಇ- ಅಡಳಿತ
ನಾಗರೀಕರ ಕುಂದ-ಕೊರತೆ ನಿರ್ವಹಣೆಗೆ ಇ-ದೂರು ವಿಭಾಗ ಸ್ಥಾಪನೆ
ಗ್ರಾಮ ಪಂಚಾಯತಿವರೆಗೆ ವಿಡಿಯೋ ಸಂವಹನ ವ್ಯವಸ್ಥೆ
ಸರ್ಕಾರದ ಸವಲತ್ತು ಪಡೆಯಲು ಒಂದೇ ಕುಟುಂಬ ಚೀಟಿ(Family Id) ಪದ್ಧತಿ ಜಾರಿ
ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಗೆ ಎಚ್ಡಿಕೆ ಕತ್ತರಿ
ಸಮಾಜ ಕಲ್ಯಾಣ ಇಲಾಖೆಗೆ ಬಜೆಟ್‌ನಲ್ಲಿ ನೀಡಿದ್ದೆಷ್ಟು?
