ರಾಜ್ಯ ಸರ್ಕಾರಗಳು ಅಬಕಾರಿ ಸುಂಕವನ್ನು 1.50 ರೂ. ಕಡಿಮೆ ಮಾಡಿದರೆ ಒಟ್ಟು 4 ರೂ. ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರಗಳೂ ಕೈಜೋಡಿಸಬೇಕು. ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. - ಅರುಣ್ ಜೇಟ್ಲಿ
ನವದೆಹಲಿ[ಅ.04]: ಕೊನೆಗೂ ಜನಸಾಮಾನ್ಯರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ ತೈಲ ದರಗಳನ್ನು 2.50 ರೂ. ಕಡಿತಗೊಳಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಸರ್ಕಾರದಿಂದ 1.50 ರೂ. ಹಾಗೂ ತೈಲ ಕಂಪನಿಗಳಿಂದ 1 ರೂ. ಕಡಿತಗೊಳಿಸಿರುವುದಾಗಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ಅಬಕಾರಿ ಸುಂಕವನ್ನು 1.50 ರೂ. ಕಡಿಮೆ ಮಾಡಿದರೆ ಪೆಟ್ರೋಲ್, ಡೀಸೆಲ್ ಬೆಲೆ ಒಟ್ಟು 4 ರೂ. ಕಡಿಮೆಯಾಗಲಿದೆ. ಕೇಂದ್ರ ಸರ್ಕಾರದ ಜತೆ ರಾಜ್ಯ ಸರ್ಕಾರಗಳೂ ಕೈಜೋಡಿಸಬೇಕು. ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ. ನಮ್ಮ ಕೆಲವು ಪ್ರಸ್ತಾಪಗಳಿಗೆ ಪ್ರಧಾನಿ ಮೋದಿ ಸಮ್ಮತಿ ನೀಡಿದ್ದಾರೆ’ ಎಂದರು.
ಈ ಸುದ್ದಿಯನ್ನು ಓದಿ : ಗೃಹ ಸಾಲ ಮಾಡಿದವರಿಗೆ, ಮಾಡುವವರಿಗೆ ಶಾಕಿಂಗ್ ಸುದ್ದಿ
ಕಚ್ಚಾ ತೈಲ ದರ ದಿನೇ ದಿನೇ ಹೆಚ್ಚಳವಾಗುತ್ತಿದೆ. ಜಗತ್ತಿನ ಎಲ್ಲ ಮಾರುಕಟ್ಟೆಗಳ ಮೇಲೆ ತೈಲದರ ಹೆಚ್ಚಳ ಪರಿಣಾಮ ಬೀರುತ್ತಿದೆ. ಈ ಎಲ್ಲ ಬೆಳವಣಿಗೆ ಕುರಿತು ಇಲಾಖೆಯಲ್ಲಿ ಚರ್ಚೆ ನಡೆಸಲಾಗಿದೆ. ಹಣಕಾಸು ಮತ್ತು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ. ಆಮದು ನಿಯಂತ್ರಿಸಲು ಸಹ ಕ್ರಮ ಕೈಗೊಳ್ಳಲಾಗುತ್ತಿದೆ. ಹಣದುಬ್ಬರ
ಹೆಚ್ಚಳವಾಗದಂತೆ ಕ್ರಮಕೈಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನು ಓದಿ: ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ
21 ಸಾವಿರ ರೂ. ಕೋಟಿ ಹೊರೆ
ಕೇಂದ್ರ ಸರ್ಕಾರ ಕೈಗೊಂಡಿರುವ ತೈಲ ದರ ಕಡಿತದಿಂದ 21 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಕಳೆದ 9 ತಿಂಗಳಲ್ಲಿ ಪೆಟ್ರೋಲ್ ದರ 14 ರೂ. ಹೆಚ್ಚಿಸಲಾಗಿತ್ತು. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 84.67 ರೂ., ಡೀಸೆಲ್ ಬೆಲೆ 75.84 ರೂ. ಇದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಪರಿಷ್ಕತ ದರ ಜಾರಿಗೆ ಬರಲಿದೆ.
ಈ ಸುದ್ದಿಯನ್ನು ಓದಿ: ಬ್ಯಾಂಕಲ್ಲಿ ಹಣವಿಲ್ಲ, ಮನೆಯಲ್ಲಿ ದುಡ್ಡಿಟ್ರೆ ಸೇಫಲ್ಲ: ಏನಿದರ ಕಥೆ..!
ಬಜೆಟ್ ನಲ್ಲಿ ಸಿಎಂ ಕುಮಾರಸ್ವಾಮಿ ಪೆಟ್ರೋಲ್ ಮೇಲೆ 1.14 ರೂ., ಡೀಸೆಲ್ ಮೇಲೆ 1.12 ರೂ. ಅಬಕಾರಿ ಸುಂಕವನ್ನು ಹೆಚ್ಚಳಗೊಳಿಸಿ ಕೆಲವು ದಿನಗಳ ನಂತರ 2 ರೂ. ಕಡಿತಗೊಳಿಸಿದ್ದರು. ಈಗ ಪುನಃ ದರಗಳನ್ನು ಕಡಿಮೆಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ರಾಜಸ್ಥಾನ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್ ಪೆಟ್ರೋಲ್ ದರವನ್ನು 2 ರೂ. ಕಡಿಮೆಗೊಳಿಸಿದ್ದವು. ಈಗ ಪುನಃ ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳು 2.50 ರೂ. ಕಡಿಮೆಗೊಳಿಸಿ ಆದೇಶ ನೀಡಿವೆ.
