Asianet Suvarna News Asianet Suvarna News

ಗೃಹ ಸಾಲ ಮಾಡಿದವರಿಗೆ, ಮಾಡುವವರಿಗೆ ಶಾಕಿಂಗ್ ಸುದ್ದಿ

 ಮನೆ ಸಾಲ, ಆಟೋ ಮತ್ತು ಇನ್ನಿತರ ಸಾಲ ಹೊಂದಿದ್ದೀರಾ? ಹಾಗಾದರೆ ಇದು ನಿಮಗೆ ಕಹಿ ಸುದ್ದಿ. ಪ್ರಮುಖ ಬ್ಯಾಂಕ್ ಗಳು ಬಡ್ಡಿ ದರದಲ್ಲಿ ಏರಿಕೆ ಮಾಡಿವೆ. ಏನು-ಎತ್ತ ವಿವರ ಇಲ್ಲಿದೆ.

SBI HDFC ICICI and PNB hike lending rates Your have to pay more
Author
Bengaluru, First Published Oct 2, 2018, 9:57 PM IST
  • Facebook
  • Twitter
  • Whatsapp

ನವದೆಹಲಿ[ಅ.2]  ಹಣದುಬ್ಬರ ನಿಯಂತ್ರಣ ಹಾಗೂ ಹೆಚ್ಚುತ್ತಿರುವ ಚಾಲ್ತಿಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತೆಗೆದುಕೊಂಡ ಕೆಲ ನೀತಿಗಳ ಪರಿಣಾಮ ಈಗ ಗೊತ್ತಾಗಿದೆ.

ಆರ್ ಬಿಐ ಗಾಗಲೇ ಎರಡು ಬಾರಿ ರೆಪೋರೇಟ್​ ಏರಿಕೆ ಮಾಡಿದೆ. ಪರಿಣಾಮ ಪ್ರಮುಖ ಬ್ಯಾಂಕ್​ಗಳಾದ ಎಸ್​​ಬಿಐ, ಐಸಿಐಸಿಐ ಮತ್ತು ಹೆಚ್​​ಡಿಎಫ್​​​ಸಿ ನೀಡಿದ್ದ ಮತ್ತು ನೀಡುವ ಸಾಲಗಳ ಬಡ್ಡಿದರ ಹೆಚ್ಚಿಗೆ ಆಗಲಿದೆ.

ಮನೆ ಸಾಲ, ಆಟೋ ಮತ್ತು ಇನ್ನಿತರ ಸಾಲಗಳ ಮೇಲೆ ಈ ಮೂರೂ ಪ್ರಮುಖ ಬ್ಯಾಂಕ್​ಗಳು ಸೋಮವಾರದಿಂದಲೇ ಬಡ್ಡಿದರ ಹೆಚ್ಚಳ ಮಾಡಿ ಆದೇಶ ಹೊರಡಿಸಿವೆ. ಎಸ್​​ಬಿಐ ಶೇ 8.50ಕ್ಕೆ ತನ್ನ ಬಡ್ಡಿದರ ಪ್ರಮಾಣವನ್ನ ಏರಿಕೆ ಮಾಡಿದೆ. 5 ಬೇಸಿಸ್​ ಪಾಯಿಂಟ್​ಗಳಷ್ಟು ಬಡ್ಡಿದರವನ್ನ ಏರಿಕೆ ಮಾಡಿದೆ. ಅತ್ತ ಐಸಿಐಸಿಐ 10 ರಷ್ಟು ಬೇಸಿಸ್ ಪಾಯಿಂಟ್​​ಗಳಷ್ಟು ಏರಿಕೆ ಮಾಡಿದೆ. ಈಗ ಅದರ ಬಡ್ಡಿದರ ಶೇ 8.65 ರಷ್ಟಿದೆ. ಹೆಚ್​ಡಿಎಫ್​ಸಿ ಸಹ 10 ಬೇಸಿಕ್​ ಪಾಯಿಂಟ್​ಗಳಷ್ಟು ಏರಿಕೆ ಮಾಡಿದೆ. ಹೊಸ ಬಡ್ಡಿದರ ಶೇ 8.85 ರಷ್ಟಿದೆ.

ಇನ್ನು ಮಿತಿಯಲ್ಲೂ ವ್ಯತ್ಯಾಸ ಮಾಡಲಾಗಿದ್ದು 30 ಲಕ್ಷದ ವರೆಗಿನ ಗೃಹ ಸಾಲಕ್ಕೆ ಶೇ 8.85 ರಷ್ಟಿದ್ದರೆ, 75 ಲಕ್ಷದವರೆಗಿನ ಸಾಲಕ್ಕೆ ಶೇ 9 ರಷ್ಟು ಬಡ್ಡಿದರವನ್ನ ನಿಗದಿ ಮಾಡಲಾಗಿದೆ. ಹಾಗಾಗಿ ಗೃಹ ಸಾಳ ಹೊಂದಿರುವವರು ಹೆಚ್ಚಿನ ಹಣವನ್ನು ಬಡ್ಡಿ ರೂಪದಲ್ಲಿ ಕಟ್ಟಬೇಕಾಗುತ್ತದೆ.  

Follow Us:
Download App:
  • android
  • ios