ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. 

ನವದೆಹಲಿ, (ಅ.03): ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯವು ಪಾತಾಳಕ್ಕೆ ಕುಸಿದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ದಾಟಿದ್ದು, ಸದ್ಯ ೊಂದು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 73.34ಕ್ಕೆ ಕುಸಿದಿದೆ. ವಾಣಿಜ್ಯ ಸಮರ ಹಾಗು ಕಚ್ಛಾ ತೈಲ ಬೆಲೆ ಏರಿಕೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದ ತೈಲ ಬೆಲೆ ಮೇಲೆ ಇನ್ನಷ್ಟು ರುಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಹಿಂದಿನ ಸೋಮವಾರ ರೂಪಾಯಿ ಮೌಲ್ಯ 72.91 ಇತ್ತು .ಹಾಗಾಗಿ ಶೇ.0.60ರಷ್ಟು ಕುಸಿತ ಕಂಡಂತಾಗಿದೆ.