ಕೊರೋನಾ 2ನೇ ಅಲೆ; 2 ತಿಂಗಳಲ್ಲಿ ಭಾರತದ 329 ವೈದ್ಯರು ಬಲಿ!...

ಭಾರತೀಯ ವೈದ್ಯಕೀಯ ಸಂಘ(IMA) ಕೇವಲ 2 ತಿಂಗಳಲ್ಲಿ 329 ವೈದ್ಯರು ಕೊರೋನಾಗೆ ಬಲಿಯಾಗಿದ್ದಾರೆ ಅನ್ನೋ ದಾಖಲೆ ಬಿಡುಗಡೆ ಮಾಡಿದೆ.

ಒಂದು ಸ್ಥಾನ ಗೆಲ್ಲದ ಕಮಲ್ ಹಾಸನ್ ಪಕ್ಷಕ್ಕೆ ಮತ್ತೊಂದು ಹೊಡೆತ; ಪ್ರಮುಖ ನಾಯಕ ಗುಡ್‌ಬೈ!...

ತಮಿಳುನಾಡು ಚುನಾವಣೆ ಫಲಿತಾಂಶ ಬಳಿಕ ನಟ ಕಮಲ್ ಹಾಸನ್ ಸ್ಥಾಪಿಸಿದ ಮಕ್ಕಳ್ ನೀಧಿ ಮಯ್ಯಂ(MNM) ರಾಜಕೀಯ ಪಕ್ಷ ಮುಳುಗುತ್ತಿರುವ ದೋಣಿಯಾಗಿ ಪರಿಣಮಿಸಿದೆ. ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗದ MNM ಪಕ್ಷ ಇದೀಗ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿದೆ. ಇದೀಗ ಪಕ್ಷದ ನೀತಿ, ಧೋರಣೆ ವಿರೋಧಿಸಿ ಪ್ರಮುಖ ನಾಯಕ ಸೆಕೆ ಕುಮರವೇಲ್ ಕಮಲ್ ಹಾಸನ್ ಪಕ್ಷದಿಂದ ಹೊರಬಂದಿದ್ದಾರೆ.

ಮೋದಿ ಸಭೆಯಲ್ಲಿ ಡಿಎಂಗೆ ಮಾತನಾಡಲು ಬಿಡದೇ, ಕೇಂದ್ರ ಅವಮಾನಿಸಿದೆ ಎಂದ ದೀದೀ!...

ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಹತ್ತು ರಾಜ್ಯಗಳ ಸಿಎಂ ಹಾಗೂ ಅಲ್ಲಿನ 54 ಜಿಲ್ಲೆಗಳ ಡಿಎಂಗಳ ಜೊತೆ ಸಭೆ ನಡೆಸಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ನಡೆಸುವ ಸಭೆಗಳನ್ನು ಬಹುಷ್ಕರಿಸುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಮೋದಿ ಸಭೆಯಲ್ಲಿ ಈ ಬಾರಿ ಹಾಜರಾಗಿದ್ದರು. ಆದರೆ ಈ ಸಭೆ ಬಳಿಕ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಒಂದೇ ದಿನ 4,529 ಬಲಿ: ಭಾರತದಲ್ಲಿ ವಿಶ್ವದಾಖಲೆ!...

ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಕೊಂಚ ತಗ್ಗಿದ್ದರೂ, ಕೊರೋನಾಗೆ ಬಲಿಯಾದವರ ಸಂಖ್ಯೆ ಬುಧವಾರ ಹೊಸ ವಿಶ್ವ ದಾಖಲೆ ಬರೆದಿದೆ. ಒಂದೇ ದಿನ 4,529 ಮಂದಿ ವೈರಸ್‌ ಸೋಂಕಿನಿಂದ ಸಾವಿಗೀಡಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿ 2021ರ ಏ.12ರಂದು ಒಂದೇ ದಿನ 4468 ಜನರು ಸಾವನ್ನಪ್ಪಿದ್ದು ಈವರೆಗಿನ ದೈನಂದಿನ ಗರಿಷ್ಠ ದಾಖಲೆಯಾಗಿತ್ತು. ಅದನ್ನು ಇದೀಗ ಭಾರತ ಮುರಿದಿದೆ.

ಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್‌ ಆಗಿ ರಾಹುಲ್‌ ದ್ರಾವಿಡ್‌ ಆಯ್ಕೆ...

ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ, ದ ವಾಲ್‌ ಖ್ಯಾತಿಯ ರಾಹುಲ್ ದ್ರಾವಿಡ್‌ ಮುಂಬರುವ ಶ್ರೀಲಂಕಾ ಪ್ರವಾಸದ ಭಾರತ ಕ್ರಿಕೆಟ್‌ ತಂಡಕ್ಕೆ ಮುಖ್ಯಕೋಚ್‌ ಆಗಿ ನೇಮಕವಾಗಿದ್ದಾರೆ. ಈ ಮೊದಲು 2014ರ ಇಂಗ್ಲೆಂಡ್ ಪ್ರವಾಸದ ವೇಳೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದರು.

ವಿಶೇಷ ತಿಂಡಿ ಕಿಟ್ ನೀಡುವ ಮೂಲಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಸುದೀಪ್!...

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಮತ್ತೊಂದು ಮಹತ್ವದ ಕೆಲಸ. ಹಿರಿಯ ಕಲಾವಿದರಿಗೆ ಸುದೀಪ್ ಪತ್ರ....

ಖಾಸಗಿತನ ನೀತಿ ಕೈಬಿಡಿ: ವಾಟ್ಸಾಪ್‌ಗೆ ಕೇಂದ್ರ ತಾಕೀತು!...

ವಿವಾದಾತ್ಮಕ ಹೊಸ ಖಾಸಗಿತನ ನೀತಿಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವು ಮೊಬೈಲ್‌ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್‌ ಮಾಲೀಕತ್ವದ ‘ವಾಟ್ಸಾಪ್‌’ಗೆ ಖಡಕ್ಕಾಗಿ ಸೂಚಿಸಿದೆ.

ಭಾರತೀಯ IT ಉದ್ಯೋಗಿಗಳಿಗೆ ಬಿಗ್ ರಿಲೀಫ್; ಕಠಿಣ H-1B ವೀಸಾ ನಿಷೇಧ ತೆರವು !...

ಸ್ಥಳೀಯರಿಗೆ ಉದ್ಯೋಗ ಭದ್ರತೆ ನೀಡಲು ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇರಲಾಗಿದ್ದ H-1B ವೀಸಾ ನಿಷೇಧ ಕಾಯ್ದೆಯನ್ನು ತೆರವುಗೊಳಿಸಲಾಗಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಅಮೆರಿಕದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಭಾರತ ಸೇರಿದಂತೆ ಇತರ ರಾಷ್ಟ್ರಗಳ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ

ಮಾಜಿ ಕ್ರಿಕೆಟರ್‌ ತಾಯಿ ಚಿಕಿತ್ಸೆಗೆ ವಿರಾಟ್ ಕೊಹ್ಲಿ 6.77 ಲಕ್ಷ ರೂ ನೆರವು...

ಭಾರತದ ಮಾಜಿ ಕ್ರಿಕೆಟರ್‌ ಶ್ರವಂತಿ ನಾಯ್ದು ಅವರ ತಾಯಿಯ ಕೋವಿಡ್‌ ಚಿಕಿತ್ಸೆಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ 6.77 ಲಕ್ಷ ರುಪಾಯಿ ನೆರವು ನೀಡಿದ್ದಾರೆ. 

ಈ ಕಂದನ ಬದುಕಿಸು ಭಗವಂತ: ದೇವಸ್ಥಾನದಲ್ಲಿ ಶವವಿಟ್ಟು ಅಜ್ಜಿಯ ಕಣ್ಣೀರು!...

ಇಲ್ಲೊಂದು ಕಡೆ ಮಗುವೊಂದು ಗಂಟಲಿಗೆ ಶೇಂಗಾ ಬೀಜ ಸಿಲುಕಿ, ಉಸಿರುಗಟ್ಟಿ ಸತ್ತಿದೆ. ಹೀಗಿರುವಾಗ ಅಜ್ಜಿಯೊಬ್ಬರು ಮಗುವಿನ ಶವವನ್ನು ಗಣಪತಿ ದೇವಸ್ಥಾನಕ್ಕೊಯ್ದು ಕಂದನ ಬದುಕಿಸುವತೆ ಬೇಡಿದ್ದಾರೆ. ಮತ್ತೊಂದು ಕಡೆ ಲಾಕ್‌ಡೌನ್ ಉಲ್ಲಂಘಿಸಿದ ಯುವಕರಿಂದ ಪೊಲೀಸರು ನಾಗಿಣಿ ಡಾನ್ಸ್ ಮಾಡಿಸಿದ್ದಾರೆ.