ಮೋದಿ ಸಭೆಯಲ್ಲಿ ಡಿಎಂಗೆ ಮಾತನಾಡಲು ಬಿಡದೇ, ಕೇಂದ್ರ ಅವಮಾನಿಸಿದೆ ಎಂದ ದೀದೀ!
* ಹತ್ತು ರಾಜ್ಯಗಳ ಸಿಎಂ ಹಾಗೂ ಅಲ್ಲಿನ 54 ಜಿಲ್ಲೆಗಳ ಡಿಎಂಗಳ ಜೊತೆ ಮೋದಿ ಸಭೆ
* ಸಭೆಯಲ್ಲಿ ಡಿಎಂಗೆ ಮಾತನಾಡಲು ಬಿಡದ ಮಮತಾ ಬ್ಯಾನರ್ಜಿ
* ಮೋದಿ ನಡೆಯಿಂದ ಅವಮಾನವಾದಂತಾಗಿದೆ ಎಂದು ದೀದೀ ಆರೋಪ
ಕೋಲ್ಕತ್ತಾ(ಮೇ.20): ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಪ್ರಧಾನಿ ನರೇಂದ್ರ ಮೋದಿ ಹತ್ತು ರಾಜ್ಯಗಳ ಸಿಎಂ ಹಾಗೂ ಅಲ್ಲಿನ 54 ಜಿಲ್ಲೆಗಳ ಡಿಎಂಗಳ ಜೊತೆ ಸಭೆ ನಡೆಸಿದ್ದಾರೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ನಡೆಸುವ ಸಭೆಗಳನ್ನು ಬಹುಷ್ಕರಿಸುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಮೋದಿ ಸಭೆಯಲ್ಲಿ ಈ ಬಾರಿ ಹಾಜರಾಗಿದ್ದರು. ಆದರೆ ಈ ಸಭೆ ಬಳಿಕ ಅವರು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಈ ಸಭೆಯಲ್ಲಿ ಛತ್ತೀಸ್‌ಗಢ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ ಹಾಗೂ ರಾಜಸ್ಥಾನದ ಅಧಿಕಾರಿಗಳು ತಮ್ಮ ತಮ್ಮ ವರದಿಗಳನ್ನು ಮಂಡಿಸಿದ್ದಾರೆ. ಆದರೆ ಅತ್ತ ಪಶ್ಚಿಮ ಬಂಗಾಳದ 24 ನಾರ್ತ್ ಪರಗನಾದ ಡಿಎಂ ಕೂಡಾ ಈ ಸಭೆಯಲ್ಲಿ ತಮ್ಮ ವರದಿಯನ್ನು ಮಂಡಿಸಿ ಮಾತನಾಡಬೇಕಿತ್ತು.ಆದರೆ ಮಮತಾ ಬ್ಯಾನರ್ಜಿ ಇದನ್ನು ಕ್ಯಾನ್ಸಲ್ ಮಾಡಿಸಿದ್ದಾರೆ. ಸಾಲದೆಂಬಂತೆ ಈ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳನ್ನು ಗೊಂಬೆಗಳಂತೆ ಕೂರಿಸಿದ್ದರು. ಯಾರಿಗೂ ಮಾತನಾಡುವ ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿಂದೆಯೂ ಕೇಂದ್ರದ ಸಭೆಯನ್ನು ಬಹಿಷ್ಕರಿಸಿದ್ದ ದೀದಿ
2014: ಪಿಎಂ ಜೊತೆ ಮುಖ್ಯಮಂತ್ರಿಗಳ ಪ್ಯಾನಲ್ ಸ್ಟ್ರಕ್ಷರ್‌ನಲ್ಲೂ ಭಾಗವಹಿಸಿರಲಿಲ್ಲ.'
2015: ಲ್ಯಾಂಡ್ ಬಿಲ್ ವಿಚಾರವಾಗಿ ಪಿಎಂ ಮೋದಿ ನಡೆಸಿದ್ದ ಸಭೆಗೂ ದೀದೀ ಹಾಜರಾಗಿರಲಿಲ್ಲ.
2019: ಮಮತಾ ಬ್ಯಾನರ್ಜಿ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಜೊತೆಗೆ ಒಂದೇ ದೇಶ, ಒಂದೇ ಚುನಾವಣೆ ಸಂಬಂಧ ನಡೆಸಿದ್ದ ಸಭೆಗೂ ಗೈರಾಗಿದ್ದರು.
2020: ಇದೇ ನಡೆ 2020ರಲ್ಲೂ ಮುಂದುವರೆದಿತ್ತು. ಪ್ರಧಾನಿ ಮೋದಿ ಕೊರೋನಾ ವೈರಸ್ ವಿಚಾರವಾಗಿ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯನ್ನೂ ಮಮತಾ ಬ್ಯಾನರ್ಜಿ ಬಹಿಷ್ಕರಿಸಿದ್ದರು.
2021: ಇದೇ ವರ್ಷ ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಕೊರೋನಾ ನಿಯಂತ್ರಿಸುವ ಬಗ್ಗೆ ನಡೆದ ಸಭೆಯಲ್ಲೂ ಭಾಗವಹಿಸಿರಲಿಲ್ಲ. ಅಂದು ಅವರು ಚುನಾವಣಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು.
ಕೇಂದ್ರದ ವಿರುದ್ಧ ಮಮತಾ ಆರೋಪ
ಅತ್ತ ಸಭೆ ಬಳಿಕ ಮಮತಾ ಬ್ಯಾನರ್ಜಿ ತಮ್ಮ ಕೋಪ ಹೊರ ಹಾಕಿದ್ದಾರೆ. ಈ ಸಭೆಯಲ್ಲಿ ಎಲ್ಲಾ ಮುಖ್ಯಮಂತ್ರಿಗಳನ್ನು ಗೊಂಬೆಯಂತೆ ಕೂರಿಸಿದ್ದರು. ಯಾರಿಗೂ ಮಾತನಾಡುವ ಅವಕಾಶವನ್ನೂ ನೀಡಲಿಲ್ಲ. ಪಿಎಂ ಮೋದಿ ಆಕ್ಸಿಜನ್ ಹಾಗೂ ಬ್ಲ್ಯಾಕ್ ಫಂಗಸ್ ವಿಚಾರವಾಗಿ ಏನನ್ನೂ ಮಾತನಾಡಲಿಲ್ಲ. ಪಿಎಂ ಮೋದಿ ಲಸಿಕೆ ವಿಚಾರವಾಗಿಯೂ ಈ ಸಭೆಯಲ್ಲಿ ಏನೂ ಕೇಳಲಿಲ್ಲ. ಮೋದಿಯ ಇಂತಹ ವರ್ತನೆಯಿಂದ ಅವಮಾನವಾದಂತಾಗಿದೆ. ರಾಜ್ಯಗಳಿಗೆ ಮಾತನಾಡುವ ಅವಕಾಶ ಇಲ್ಲವೆಂದಾದರೆ ಸಭೆ ಕರೆದಿದ್ದೇಕೆ? ಮಾತನಾಡುವ ಅವಕಾಶ ನೀಡದ್ದಕ್ಕೆ ಎಲ್ಲಾ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಬೇಕು ಎಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona