ನವದೆಹಲಿ[ಏ.10]: ಗೋವಾದ ದಿವಂಗತ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಅವರ ನಿಧನದಿಂದ ಖಾಲಿಯಾಗಿದ್ದ ಪಣಜಿ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ದಿನಾಂಕ ನಿಗದಿ ಮಾಡಿ ಚುನಾವಣಾ ಆಯೋಗ ಘೋಷಣೆ ಮಾಡಿದೆ. 

ಗೋವಾ ಸಿಎಂ ಮನೋಹರ್ ಪರಿಕ್ಕರ್ ಇನ್ನಿಲ್ಲ

ಇದರ ಜತೆಗೆ ತಮಿಳುನಾಡಿನ ನಾಲ್ಕು ಹಾಗೂ ಕರ್ನಾಟಕದ ಕುಂದಗೋಳ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಇದೇ ದಿನ ಉಪಚುನಾವಣೆ ನಡೆಯಲಿದೆ. ಮೇ 23ರಂದು ಲೋಕಸಭಾ ಕ್ಷೇತ್ರಗಳ ಜತೆಗೆ ಈ ಕ್ಷೇತ್ರಗಳ ಮತ ಎಣಿಕೆಯೂ ನಡೆಯಲಿದೆ.

ಮನೋಹರ್ ಪರ್ರಿಕರ್‌ ಪುತ್ರರು ರಾಜಕೀಯಕ್ಕೆ

ಮಾಜಿ ರಕ್ಷಣಾ ಸಚಿವ ಪರ್ರಿಕರ್ ಮಾರ್ಚ್ 17ರಂದು ನಿಧನರಾಗಿದ್ದರು. ಹಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಮನೋಹರ್‌ ಪಣಜಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ್ದರು.

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.