ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ತಮ್ಮ ರಾಜಕೀಯ ಗೆಳೆಯ ಅನಂತಕುಮಾರ್ ಅವರ ಅಂತಿಮ ದರ್ಶನ ಪಡೆದುಕೊಂಡರು.
ಬೆಂಗಳೂರು, (ನ.12): ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಎಚ್.ಎನ್. ಅನಂತ ಕುಮಾರ್ ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕಂಬನಿ ಮಿಡಿದಿದ್ದಾರೆ.
ರಾಜಕೀಯ ಸ್ನೇಹಿತ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಚಂದ್ರಶೇಖರ್ ಅವರು ಇಂದು [ಸೋಮವಾರ] ಬೆಳಗ್ಗೆ ಅನಂತಕುಮಾರ್ ಅವರ ನಿವಾಸಕ್ಕೆ ದೌಡಾಯಿಸಿ ಗೆಳೆಯನ ಅಂತಿಮ ದರ್ಶನ ಪಡೆದರು.
Live Updates: ಕೇಂದ್ರ ಸಚಿವ ಅನಂತ ಕುಮಾರ್ ಇನ್ನಿಲ್ಲ
Scroll to load tweet…
ನನ್ನ ಸಹೋದರ, ನನ್ನ ಸ್ನೇಹಿತ, ನನ್ನ ಸಲಹೆಗಾರ ಅನಂಕುಮಾರ್ ನಮ್ಮನ್ನು ಅಗಲಿದ್ದು, ಅವರು ನನಗೆ ಕುಟುಂಬವಾಗಿದ್ದರು. ನನ್ನ ರಾಜಕೀಯದಲ್ಲಿ ಆಪ್ತ ಸ್ನೇಹಿತರಲ್ಲಿ ಅವರು ಒಬ್ಬರಾಗಿದ್ದರು ಎಂದು ಟ್ವೀಟ್ ಮೂಲಕ ರಾಜೀವ್ ಚಂದ್ರಶೇಖರ್ ಅವರು ಅಗಲಿದೆ ಸ್ನೇಹಿತನಿಗೆ ಸಂತಾಪ ಸೂಚಿಸಿದ್ದಾರೆ.
"
