Asianet Suvarna News Asianet Suvarna News

Live Updates: ಕೇಂದ್ರ ಸಚಿವ ಅನಂತ ಕುಮಾರ್ ಅಸ್ತಂಗತ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ನವೆಂಬರ್ 12ರಂದು ಮುಂಜಾನೆ ಬೆಂಗಳೂರಿನ ಶಂಕರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Latest Updates: ಈಗ್ಗೆ ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವರು ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Union Minister Ananth Kumar dies of cancer
Author
Bengaluru, First Published Nov 12, 2018, 5:36 AM IST

ಕರ್ನಾಟಕದ ರಾಜಕೀಯದ ಎವರ್‌ಗ್ರೀನ್ ನಾಯಕ ಅನಂತ್ ಕುಮಾರ್

ಶಿಷ್ಯನ ಸಾವಿಗೆ ಕಂಬನಿ ಮಿಡಿದ ಭೀಷ್ಮ

ದೂರದೃಷ್ಟಿಯುಳ್ಳ ಅನಂತ್

ಅನಂತ್ ಹಿಡಿದಿದ್ರೆ ಎಲ್ಲ ಕೆಲಸವಾಗುತ್ತಿತ್ತು: ಅಂಬರೀಶ್

ಅನಂತಕುಮಾರ್ ನನ್ನ ಆತ್ಮೀಯ ಸ್ನೇಹಿತ. ಒಬ್ಬ ಒಳ್ಳೆಯ ರಾಜಕಾರಣಿ. ಕೇಂದ್ರದಲ್ಲಿ ಪ್ರಭಾವಿಯುತ ರಾಜಕಾರಣಿಯಾಗಿದ್ರು. ವಿಷ್ಣುವರ್ಧನ್‌ಗೆ ತುಂಬಾ ಆತ್ಮೀಯರಾಗಿದ್ರು. ನನ್ನನ್ನ ಅಡ್ವಾಣಿ ಬಳಿ ಕರೆದುಕೊಂಡು ಹೋಗಿದ್ರು. ಕೇಂದ್ರದಲ್ಲಿ ಏನಾದರೂ ಕೆಲಸ ಆಗಬೇಕು ಅಂದ್ರೆ ಅನಂತಕುಮಾರ್ ಹಿಡಿದ್ರೆ ಸಾಕು ಕೆಲಸ ಆಗುತ್ತೆ ಅಂತ ಹೇಳುತ್ತಿದ್ದೀವಿ. ಇಂದು ನಮ್ಮ ಸ್ನೇಹಿತ ನಮ್ಮನ್ನ ಅಗಲಿದ್ದಾರೆ. ನಾವು ಬೇರೆ ಬೇರೆ ಪಕ್ಷದಲ್ಲಿದ್ರು ಉತ್ತಮ ಸ್ನೇಹಿತರಾಗಿದ್ವಿ.
- ಅಂಬರೀಶ್, ಮಾಜಿ ಸಚಿವ

 

ನನ್ನನ್ನು ಸಚಿವನ್ನಾಗಸಿದ್ದೇ ಅನಂತ್ ಕುಮಾರ್: ಯತ್ನಾಳ್
ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಅನಂತಕುಮಾರ ಅವರು. ನನ್ನನ್ನು ರಾಜಕೀಯಕ್ಕೆ ತಂದವರು, ನನಗೆ ಸ್ಥಾನ ಮಾನ ಸಿಗಲು‌ ಅವರೇ ಕಾರಣ.ಶಾಸಕನಾಗಲು, ಸಂಸದನಾಗಲು ಹಾಗೂ ಕೇಂದ್ರ ಸಚಿವನಾಗಿಸಿದ್ದೇ ಅವರು. ಕಳೆದ 30 ವರ್ಷಗಳಿಂದ ಅವರು ಪರಿಚಿತ. ಅನಂತ ನಿಧನ ಜೀವನದ ಕರಾಳ ದಿನ. ರಾಜ್ಯಕ್ಕೆ ಅನ್ಯಾಯವಾದಾಗ ಸಿಡಿದೆದ್ದಿದ್ದರು. ಆಲಮಟ್ಟಿ ಡ್ಯಾಂ ಎತ್ತರದ ವಿಷಯದಲ್ಲಿ ಆಂಧ್ರ ಪ್ರದೇಶ ವಿರೋಧಿಸಿತ್ತು.  ಅಟಾರ್ನಿ ಜನರಲ್  ಹರೀಶ ಸಾಳ್ವೆ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗೆ ಹರಿಸಲು ಸಹಾಯ ಮಾಡಿದ್ದರು. ರಾಷ್ಟ್ರದಲ್ಲಿ ಕರ್ನಾಟಕದ ಧ್ವನಿಯಾಗಿದ್ದರು. ರಾಜಕೀಯವಾಗಿ ಎಲ್ಲ ನಾಯಕರ ಒಡನಾಟವಿತ್ತು. ಟ್ರಬಲ್ ಶೂಟರ್ ನಿಧನದಿಂದ ಬಿಜೆಪಿಗೆ ರಾಜ್ಯಕ್ಕೆ ಅಪಾರ ನಷ್ಟವಾಗಿದೆ

- ಬಸನಗೌಡ ಪಾಟೀಲ್ ಉತ್ನಾಳ್, ವಿಜಯಪುರ ನಗರ ಶಾಸಕ
 

ವಿನಯವಂತ ಕಾಡಕಾರಣಿಗೆ ಭೈರಪ್ಪ ಸಂತಾಪ
 

ಅವರೊಬ್ಬ ಉತ್ತಮ ರಾಜಕೀಯ ಪಟು. ವಿದ್ವಾಂಸರು, ಗಂಭೀರ ಚಿಂತಕರನ್ನು ಕಂಡರೆ ಬಹಳವಾಗಿ ಗೌರವಿಸುತ್ತಿದ್ದರು. ಬ್ಯಾಂಕ್‌ಗಳನ್ನು ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸುವ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹಿತ ಕಾಪಾಡಿದ್ದರು.ನಾನೂ ಸೇರಿದಂತೆ ನಿಯೋಗವನ್ನು ಅರುಣ್ ಜೇಟ್ಲಿ ಅವರ ಬಳಿ ಕರೆದೊಯ್ದು ಮನವರಿಕೆ ಮಾಡಿಸಿಕೊಟ್ಟರು. ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಪ್ರಚಾರ ಪಡೆಯದೆ ಮೌನವಾಗಿರುತ್ತಿದ್ದ ವಿನಯವಂತ ರಾಜಕಾರಣಿ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
-ಎಸ್.ಎಲ್. ಭೈರಪ್ಪ,  ಹಿರಿಯ ಸಾಹಿತಿ

 

 

ಅನಂತ್‌ಗೆ ಅದಮ್ಯ ಚೈತನ್ಯವಾಗಿದ್ದ ಪತ್ನಿಗೆ ಇನ್ಫೋಸಿಸ್ ಸುಧಾ ಮೂರ್ತಿ ಸಾಂತ್ವನ

Union Minister Ananth Kumar dies of cancer

 

ಬಿಜೆಪಿ ಹಿಂದಿನ ಅನಂತ ಶಕ್ತಿ

ಗೆಳೆಯನ ಅಂತಿದ ದರ್ಶನ ಪಡೆದ ಸಂಸದ ಆರ್‌ಸಿ

ಹಿರಿಯಣ್ಣನಂತಿದ್ದ ಅನಂತ್ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ

ಅನಂತ್ ಸಾವಿಗೆ ಅಮಿತ್ ಸಂತಾಪ
 

;

 

ಸಹೋದ್ಯೋಗಿ ಸಾವಿಗೆ ಕಣ್ಣೀರಾದ ಪಿಯೂಶ್, ಉಪ ರಾಷ್ಟ್ರಪತಿ

 

 



ಅಗಲಿದ ಗೆಳೆಯನಿಗೆ ನಿತೀಶ್ ಅಶ್ರುತರ್ಪಣ



ಅನಂತ್ ಅಂತಿಮ ದರ್ಶನ ಪಡೆದ ರಾಜ್ಯಪಾಲ

 

 

ರಾಜ್ಯದಲ್ಲಿ ಪಕ್ಷ ಬೆಳೆಸಿದ ಅನಂತ್ ನೆನೆದ ಬಿಎಸ್‌ವೈ

ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತಿದ್ದರು. ನನ್ನ ಅವರ ಸಂಬಂಧ 30 ವರ್ಷಗಳದ್ದು. ಕರ್ನಾಟಕದಲ್ಲಿ ಬಿಜೆಪಿ ಇಷ್ಟು ಬೆಳೆಯೋದಕ್ಕೆ ಅವರ ಕೊಡುಗೆ ಅಪಾರ. ನಾನು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯದ ಉದ್ದಗಲಕ್ಕೂ ನನ್ನ ಜೊತೆಯಲ್ಲೇ ಪ್ರವಾಸ ಮಾಡಿದ್ರು. ನಾನು ಶಾಸಕನಾದಾಗ ಅವರು ಹೈ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು. ಅವತ್ತು ಅವರು ಕೋಟ್ ಬಿಚ್ಚಿಟ್ಟು ಸಕ್ರಿಯ ರಾಜಕಾರಣಕ್ಕೆ ಬಂದರು. ಅಂದಿನಿಂದ ಇಂದಿನವರೆಗೂ ರಾಜಕಾರಣದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ, ಮೋದಿ ಅವರ ಸರ್ಕಾರದಲ್ಲಿ ಅವರು ಮಂತ್ರಿಯಾಗಿ ಕಾರ್ಯನಿರ್ವಾಹಿಸಿದ್ದಾರೆ. ಆರು ಬಾರಿ ಬೆಂಗಳೂರಿನ ಸಂಸದರಾಗಿ ಆಯ್ಕೆಯಾಗಿದ್ದರು. ಅವರ ಅಕಾಲಿಕ ಮರಣ ಅತೀವ ಶೋಕ ತಂದಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
- ಬಿ.ಎಸ್.ಯಡಿಯೂರಪ್ಪ

 


'ವಿಭವ'ದಲ್ಲಿ ನೀರವ ಮೌನ
ಹುಬ್ಬಳ್ಳಿಯ ಅನಂತಕುಮಾರ್ ನಿವಾಸದಲ್ಲಿ ನೀರವ ಮೌನ. ಇಂದಿರಾ ನಗರದಲ್ಲಿರುವ ಅನಂತಕುಮಾರ್ ಅವರ ತಂದೆ ನಾರಾಯಣ ಶಾಸ್ತ್ರಿಗಳು ಕಟ್ಟಿಸಿದ್ದ  'ವಿಭವ' ನಿವಾಸವಿದೆ. ಇದೇ ಮನೆಯಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದ ಅನಂತಕುಮಾರ್. ಹುಬ್ಬಳ್ಳಿಗೆ ಬಂದಾಗ ಇಲ್ಲಿಯೇ ವಾಸ್ತವ್ಯ  ಹೂಡುತ್ತಿದ್ದರು. ಅನಂತಕುಮಾರ್ ನಿಧನದ ಸುದ್ದಿ ಕೇಳಿ ತೀವ್ರ ಆಘಾತಗೊಂಡ‌ ಮನೆ ಅಕ್ಕಪಕ್ಕದ ನಿವಾಸಿಗಳು ಕಣ್ಣೀರಿಟ್ಟಿದ್ದಾರೆ. ಮನೆಗೆ ಬೀಗ ಹಾಕಿ ಹದಿನೈದು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದೆ ಅನಂತ್ ಕುಮಾರ್ ಕುಟುಂಬ. 

 

ಮಾರ್ಗದರ್ಶಕನ ನಿಧನಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಸಂತಾಪ

ಕೇಂದ್ರ ಸಚಿವ ಅನಂತ್ ಕುಮಾರ್ ಅವರ ನಿಧನ ರಾಷ್ಟ್ರ ಮತ್ತು ರಾಜ್ಯಕ್ಕೆ ಅಪಾರ ನಷ್ಟ ತಂದಿದೆ. ನಾನು ವಿಪಕ್ಷ ನಾಯಕನಾಗಿದ್ದಾಗ ನನಗೆ ಮಾರ್ಗದರ್ಶನ ಮಾಡಿದ್ದರು. ರಾಜ್ಯದಲ್ಲಿ ವಿರೋಧವಿಲ್ಲದೆ ವಿರೋಧ ಪಕ್ಷದ ನಾಯನಾಗಿದ್ದೀರಿ, ಅಂತ ಶುಭ ಹಾರೈಸಿದ್ದರು. ನೂರಾರು ಬಿಜೆಪಿ ನಾಯಕರಿಗೆ ಮಾರ್ಗದರ್ಶನ ಮಾಡಿದ್ದರು. ಯಾವುದೇ ವಿಚಾರ ಮಂಡನೆ ಮಾಡುವಾಗಸೂ ದೂರದೃಷ್ಟಿ ಇಟ್ಟುಕೊಂಡು ವಿಚಾರ ಮಂಡನೆ ಮಾಡುತ್ತಿದ್ದರು. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ.
- ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ವಿಪಕ್ಷ ನಾಯಕ

 

 

  • ಅನಂತ್ ಅಗಲಿಕೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್
    • ಅನಂತ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ 
    • ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ; ಅನಂತಕುಮಾರ್ ಅಂತಿಮ ದರ್ಶನ ಪಡೆಯಲಿರುವ ಮೋದಿ
    • ಮಂಗಳವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಅನಂತ್ ಕುಮಾರ್ ಅಂತ್ಯಕ್ರಿಯೆ 
    • 9 ಗಂಟೆಯ ನಂತರ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು. ನವೆಂಬರ್ 13ರ ಮಧ್ಯಾಹ್ನ ಅಂತ್ಯ ಸಂಸ್ಕಾರ ನೆರವೇರುವ ಸಾಧ್ಯತೆ ಇದೆ. ಜಯನಗರ ಎಸಿಪಿ ಶ್ರೀನಿವಾಸ್ ನೇತೃತ್ವದಲ್ಲಿ ಭದ್ರತೆಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, 1 ಕೆ‌ಎಸ್ಆರ್ಪಿ ತುಕಡಿ, ಐದು ಇನ್ಸ್ಪೆಕ್ಟರ್ ಸೇರಿ 100 ಮಂದಿ ಸದ್ಯಕ್ಕೆ ನಿಯೋಜಿಸಲಾಗಿದೆ.
    • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಿಜೆಪಿ ನಾಯಕ, ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್ ಕೊನೆಯುಸಿರೆಳೆದಿದ್ದಾರೆ. ಚಾಮರಾಜಪೇಟೆಯ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಪತ್ನಿ ತೇಜಸ್ವಿನಿ ಹಾಗೂ ಮಕ್ಕಳಾದ ಐಶ್ವರ್ಯಾ ಹಾಗೂ ವಿಜೇತಾರನ್ನು ಅನಂತ್ ಕುಮಾರ್ ಅವರು ಅಗಲಿದ್ದಾರೆ. ಕಳೆದ 20 ದಿನಗಳಿಂದ ಶಂಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    Union Minister Ananth Kumar dies of cancer

    ಸತತ ಆರು ಬಾರಿ ಸಂಸದರಾಗಿದ್ದ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಪ್ರಧಾನಿ ಮೋದಿ ಸರಕಾರದಲ್ಲಿ ಗೊಬ್ಬರ ಹಾಗೂ ರಾಸಾಯನಿಕ ಸಚಿವರಾಗಿದ್ದ ಅನಂತ್ ಕುಮಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಭಾವಿತರಾಗಿದ್ದರು.ರಾಜ್ಯದಲ್ಲಿ ಬಿಜೆಪಿಯನ್ನು ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    "

     

    Follow Us:
    Download App:
    • android
    • ios