Asianet Suvarna News Asianet Suvarna News

ಆರ್‌ಸಿಗೆ ಕೇಂದ್ರ ಸರ್ಕಾರದ ಸಮಿತಿಯಲ್ಲಿ ಸ್ಥಾನ

ಮಾಲಿನ್ಯ ನಿಯಂತ್ರಣ, ಬೆಂಗಳೂರಿನ ಸಮಸ್ಯೆಗಳು ಸೇರಿ ಇನ್ನಿತರ ಕೆಲ ನಗರಗಳ ನಿರ್ದಿಷ್ಟಸಮಸ್ಯೆಗಳ ನಿವಾರಣೆಗೆ ಸಮಿತಿಯೊಂದನ್ನು ರೂಪಿಸಿದ್ದು, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಇದರಲ್ಲಿ ಸ್ಥಾನ ಪಡೆದಿದ್ದಾರೆ.

BJP MP from Karnataka Rajeev Chandrasekhar appointed in central committee
Author
Bengaluru, First Published Nov 6, 2019, 10:56 AM IST
  • Facebook
  • Twitter
  • Whatsapp

ನವದೆಹಲಿ [ನ.06]:  ದೆಹಲಿಯ ಮಾಲಿನ್ಯ ನಿಯಂತ್ರಣ, ಬೆಂಗಳೂರಿನ ಸಮಸ್ಯೆಗಳು ಸೇರಿ ಇನ್ನಿತರ ಕೆಲ ನಗರಗಳ ನಿರ್ದಿಷ್ಟಸಮಸ್ಯೆಗಳ ನಿವಾರಣೆಗೆ ಪ್ರಧಾನ ಮಂತ್ರಿ ಕಚೇರಿ ನೀತಿ ಆಯೋಗದ ಉಪ ಮುಖ್ಯಸ್ಥ ರಾಜೀವ್‌ ಕುಮಾರ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರೂಪಿಸಿದ್ದು, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಇದರಲ್ಲಿ ಸ್ಥಾನ ಪಡೆದಿದ್ದಾರೆ.

"

ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ ರಾಘವನ್‌, ಹಾರ್ವರ್ಡ್‌ ಬ್ಯುಸಿನೆಸ್‌ ಸ್ಕೂಲ್ ನ ತರುಣ್‌ ಖನ್ನಾ ಮತ್ತು ಮೇಜರ್‌ ಜನರಲ್ ಮಾಧುರಿ ಕಾನಿಟ್ಕರ್‌ ಅವರು ಸಮಿತಿ ಸದಸ್ಯರಾಗಿದ್ದು, 2 ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ. 

ಬಾಲಕಿಯರ ರೇಪ್, ಆತ್ಮಹತ್ಯೆ ಪ್ರಕರಣ: ಸ್ಮೃತಿ ಮಧ್ಯಪ್ರವೇಶಕ್ಕೆ ಸಂಸದ ರಾಜೀವ್ ಆಗ್ರಹ...

ನವದೆಹಲಿ, ಬೆಂಗಳೂರು, ಹೈದರಾಬಾದ್‌ ಮತ್ತು ಪುಣೆ ನಗರಗಳ ಸಮಸ್ಯೆಗಳ ಬಗ್ಗೆ ಸುಮಾರು 40 ಸಂಶೋಧನಾ ಸಂಸ್ಥೆಗಳ ನಡುವೆ ಸಮನ್ವಯ ಕ್ರಮಗಳನ್ನು ಕೈಗೊಂಡು ಈ ನಗರಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ವರದಿ ನೀಡಲಿದೆ.

Follow Us:
Download App:
  • android
  • ios