ವಾಯುಮಾಲಿನ್ಯಕ್ಕೆ ಪಾಕ್, ಚೀನಾ ಕಾರಣ: ಕ್ಸಿ ಅವರನ್ನು ಮೋದಿ ಮುದ್ದಾಡಿದ್ದೇಕಣ್ಣ?
ಪಾಕ್, ಚೀನಾದಿಂದ ದೆಹಲಿ ಮೇಲೆ ವಿಷಾನಿಲ ದಾಳಿ ಎಂದ ಬಿಜೆಪಿ ನಾಯಕ| ದೆಹಲಿ ವಾಯುಮಾಲಿನ್ಯಕ್ಕೆ ಪಾಕ್ ಹಾಗೂ ಚೀನಾ ಕಾರಣವಂತೆ| 'ಪಾಕಿಸ್ತಾನ ಹಾಗೂ ಚೀನಾ ಸೇರಿ ಭಾರತದೆಡೆಗೆ ವಿಷಾನಿಲ ಬಿಡುಗಡೆಗೆ ಮಾಡುತ್ತಿವೆ'| ಉತ್ತರಪ್ರದೇಶ ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಹಾಸ್ಯಾಸ್ಪದ ಹೇಳಿಕೆ| ಎರಡೂ ರಾಷ್ಟ್ರಗಳು ಭಾರತದ ವಿರುದ್ಧ ಕತ್ತಿ ಮಸಿಯುತ್ತಿವೆ ಎಂದ ಶಾರ್ದ| 'ವಾಯುಗುಣಮಟ್ಟ ಕುಸಿಯುವುದಕ್ಕೆ ರೈತರು ಹಾಗೂ ಕೈಗಾರಿಕೋದ್ಯಮಿಗಳನ್ನು ದೂಷಿಸಬಾರದು'|
ಲಕ್ನೋ(ನ.06): ರಾಷ್ಟ್ರ ರಾಜಧಾನಿ ನವದೆಹಲಿಯ ವಾಯುಮಾಲಿನ್ಯಕ್ಕೆ ಅಲ್ಲಿನ ಜನ ಬೆಸ್ತು ಬಿದ್ದಿದ್ದಾರೆ. ಉಸಿರಾಟದ ತೊಂದರೆ ಎಲ್ಲಿ ಪ್ರಾಣಕ್ಕೆ ಕುತ್ತು ತರುವುದೋ ಎಂಬ ಭಯದಲ್ಲೇ ದೆಹಲಿ ಜನತೆ ದಿನ ದೂಡುತ್ತಿದ್ದಾರೆ.
ರಾಜಧಾನಿಯಲ್ಲಿ ಮಾಲಿನ್ಯ ವಿಪರೀತಕ್ಕೆ
ಆದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಾದ ಸರ್ಕಾರ, ಜನಪ್ರತಿನಿಧಿಗಳು ಮಾತ್ರ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲೇ ಕಾಲ ಕಳೆಯುತ್ತಿದ್ದಾರೆ. ಬಾಯಿಗೆ ಬಂದಿದ್ದು ಮಾತನಾಡುತ್ತಾ ತಮ್ಮ ವೈಫಲ್ಯವನ್ನು ಇತರರ ಮೇಲೆ ಹಾಕುತ್ತಾ ಮೋಜು ಮಾಡುತ್ತಿದ್ದಾರೆ.
ರಾಜಧಾನಿ ಮಾಲಿನ್ಯ: ಸರ್ಕಾರದ ವಿರುದ್ಧ ಸುಪ್ರೀಂ
ದೆಹಲಿಯಲ್ಲಿ ಉದ್ಭವಿಸಿರುವ ಮಾಲಿನ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾ ಕಾರಣ ಎಂದು ಉತ್ತರ ಪ್ರದೇಶ ಬಿಜೆಪಿ ನಾಯಕರೊಬ್ಬರು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಹಾಗೂ ಚೀನಾ ಸೇರಿ ಭಾರತದೆಡೆಗೆ ವಿಷ ಅನಿಲಗಳನ್ನು ಬಿಡುಗಡೆಗೆ ಮಾಡುತ್ತಿವೆ. ಇದರಿಂದಾಗಿ ರಾಷ್ಟ್ರರಾಜಧಾನಿಯಲ್ಲಿ ವಾಯುಗುಣಮಟ್ಟ ಹದಗೆಟ್ಟಿದೆ ಎಂದು ಬಿಜೆಪಿ ನಾಯಕ ವಿನೀತ್ ಅಗರ್ವಾಲ್ ಶಾರ್ದ ಹೇಳಿದ್ದಾರೆ.
ಪಾಕಿಸ್ತಾನ ನಮ್ಮ ದೇಶದ ಮೇಲೆ ವಿಷ ಅನಿಲ ಪ್ರಯೋಗ ಮಾಡಿರುವ ಸಾಧ್ಯತೆ ಇದ್ದು, ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು ಎಂದು ವಿನೀತ್ ಅಭಿಪ್ರಾಯಪಟ್ಟಿದ್ದಾರೆ.
ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ
ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಧಿಕಾರವಹಿಸಿಕೊಂಡಾಗಿನಿಂದ ಪಾಕಿಸ್ತಾನ ಉಡುಗಿಹೋಗಿದ್ದು, ಭಾರತವನ್ನು ದುರ್ಬಲಗೊಳಿಸಲು ವಿಷಾನೀಲ ಬಿಡುಗಡೆ ಮಾಡಿರುವ ಸಾಧ್ಯತೆ ಹೆಚ್ಚು ಎಂದು ವಿನೀತ್ ಹೇಳಿದ್ದಾರೆ.
ಅದರಂತೆ ಚೀನಾ ಕೂಡ ಪಾಕಿಸ್ತಾನಕ್ಕೆ ಸಾಥ್ ನೀಡಿರುವ ಸಾಧ್ಯತೆ ಇದ್ದು, ಎರಡೂ ರಾಷ್ಟ್ರಗಳು ಭಾರತದ ವಿರುದ್ಧ ಕತ್ತಿ ಮಸಿಯುತ್ತಿವೆ ಎಂದು ವಿನೀತ್ ಗಂಭೀರ ಆರೋಪ ಮಾಡಿದ್ದಾರೆ.
ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ
ವಾಯುಗುಣಮಟ್ಟ ಕುಸಿಯುವುದಕ್ಕೆ ರೈತರು ಹಾಗೂ ಕೈಗಾರಿಕೋದ್ಯಮಿಗಳನ್ನು ದೂಷಿಸಬಾರದು ಎಂದು ಹೇಳಿರುವ ಅಗರ್ವಾಲ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸುತ್ತಿರುವಂತೆ ಕೈಗಾರಿಕೆಗಳು ವಾಯುಮಾಲಿನ್ಯಕ್ಕೆ ಕಾರಣವಲ್ಲ ಎಂದು ಹೇಳಿದ್ದಾರೆ.
ಇನ್ನು ವಿನೀತ್ ಅಗರ್ವಾಲ್ ಹೇಳಿಕೆಯನ್ನು ಟೀಕಿಸಿರುವ ವಿಪಕ್ಷಗಳು, ವಿಷಾನಿಲ ದಾಳಿಯಲ್ಲಿ ಚೀನಾ ಕೂಡ ಭಾಗಿಯಾಗಿದ್ದರೆ ಅಧ್ಯಕ್ಷ ಜಿನ್‌ಪಿಂಗ್ ಅವರನ್ನು ತಮಿಳುನಾಡಿನಲ್ಲಿ ಕೊಂಕಳಲ್ಲಿ ಕುಳ್ಳಿರಿಸಿ ಪ್ರಧಾನಿ ಮೋದಿ ಸುತ್ತಾಡಿದ್ದೇಕೆ ಎಂದು ಪ್ರಶ್ನಿಸಿವೆ.
ಮಾಲಿನ್ಯದಿಂದ ದಿಲ್ಲಿ ಮತ್ತಷ್ಟು ಚೇತರಿಕೆ; ಮಳೆ ಬಂದರೆ ಸಹಜ ಸ್ಥಿತಿಗೆ