ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

ದೆಹಲಿಯಲ್ಲಿ ಮಳೆ ಸಂಭವ: ಸ್ಥಿತಿ ಮತ್ತಷ್ಟು ಸುಧಾರಣೆ ಸಾಧ್ಯತೆ | ಗಾಳಿಯಿಂದಾಗಿ ಮಲಿನ ಗಾಳಿ ಪ್ರಮಾಣ ಕುಸಿತ | ದಿಲ್ಲಿಯಲ್ಲಿ ಪರಿಸ್ಥಿತಿ ಸೋಮವಾರ ಸ್ವಲ್ಪ ಸುಧಾರಿಸಿದೆ | 

As winds blow away haze pollution levels in New Delhi

ನವದೆಹಲಿ (ನ.05):  ವಾಯುಮಾಲಿನ್ಯಪೀಡಿತ ದಿಲ್ಲಿಯಲ್ಲಿ ಪರಿಸ್ಥಿತಿ ಸೋಮವಾರ ಸ್ವಲ್ಪ ಸುಧಾರಿಸಿದೆ. ಗಂಟೆಗೆ 20 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ಮಾಲಿನ್ಯ ಇಳಿಕೆಯಾಗಿದೆ. ಅಲ್ಲದೆ, ಶೀಘ್ರದಲ್ಲೇ ಅಪ್ಪಳಿಸಲಿರುವ ಮಹಾ ಚಂಡಮಾರುತದ ಪರಿಣಾಮ ಸುತ್ತಲಿನ ರಾಜ್ಯಗಳಲ್ಲಿ ಮಳೆ ಬಂದು ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಸೋಮವಾರ ಸಂಜೆ 4 ಗಂಟೆಗೆ ದಿಲ್ಲಿ ವಾಯುಮಾಲಿನ್ಯ ಸೂಚ್ಯಂಕ 419 ಎಂದು ತೋರಿಸುತ್ತಿತ್ತು. ಇದು ‘ಗಂಭೀರ ದರ್ಜೆ’ಯ ಮಾಲಿನ್ಯವಾಗಿದೆ. ಆದರೆ ಭಾನುವಾರದ 625 ಸೂಚ್ಯಂಕಕ್ಕಿಂತ ಇದು ಉತ್ತಮ. 401ರಿಂದ 500ರ ನಡುವೆ ಸೂಚ್ಯಂಕವಿದ್ದರೆ ಅದು ಗಂಭೀರ ಎನ್ನಿಸಿಕೊಳ್ಳುತ್ತದೆ. ಭಾನುವಾರ ಗಂಭೀರ ಸ್ಥಿತಿಯನ್ನೂ ಮಾಲಿನ್ಯ ಮಟ್ಟಮೀರಿ ಹೋಗಿತ್ತು.

ಮಾಸ್ಕ್ ಧರಿಸಿದ ಬಾಂಗ್ಲಾ ತಂಡ; ದೆಹಲಿ ಸಿಎಂ ಕೇಜ್ರಿವಾಲ್ ತಿವಿದ ಗಂಭೀರ್ !

ಜಾವಡೇಕರ್‌-ಆಪ್‌ ಜಟಾಪಟಿ:

ಈ ನಡುವೆ ದೆಹಲಿ ಮಾಲಿನ್ಯ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಜಟಾಪಟಿ ತೀವ್ರಗೊಂಡಿದೆ. ದಿಲ್ಲಿ ಸುತ್ತಲಿನ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ಸುಡುವುದು ಮಾಲಿನ್ಯಕ್ಕೆ ಕಾರಣ. ಹೀಗಾಗಿ ಆ ರಾಜ್ಯಗಳಿಗೆ ಬೆಳೆ ತ್ಯಾಜ್ಯ ಸುಡುವ ತಂತ್ರಜ್ಞಾನಕ್ಕೆಂದು ದಿಲ್ಲಿಯ ಆಪ್‌ ಸರ್ಕಾರ 1500 ಕೋಟಿ ನೀಡಬೇಕು ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್‌ ಆಗ್ರಹಿಸಿದ್ದಾರೆ.

‘ಆದರೆ, ಬೆಳೆ ಸುಡುವ ತಂತ್ರಜ್ಞಾನಕ್ಕೆ ದುಡ್ಡು ನೀಡುವುದು ಆಯಾ ರಾಜ್ಯ ಸರ್ಕಾರಗಳ ಕೆಲಸ. ಪಕ್ಕದ ರಾಜ್ಯಗಳಿಗೆ ಹಣ ನೀಡುವುದು ನಮ್ಮ ಕೆಲಸವಲ್ಲ’ ಎಂದು ಆಪ್‌ ಸಂಸದ ಸಂಜಯ ಸಿಂಗ್‌ ಅವರು ಜಾವಡೇಕರ್‌ಗೆ ತಿರುಗೇಟು ನೀಡಿದ್ದಾರೆ.

Latest Videos
Follow Us:
Download App:
  • android
  • ios