ಮಾಲಿನ್ಯ ತಡೆಗೆ ದೆಹಲಿ ಸರ್ಕಾರದಿಂದ ಹೊಸ ಪ್ರಯೋಗ | ಕೇಜ್ರಿವಾಲ್‌ ಕಾರ್‌ ಪೂಲಿಂಗ್‌, ಸೈಕಲ್‌ನಲ್ಲಿ ಬಂದ ಡಿಸಿಎಂ | ನವೆಂಬರ್‌ 05 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ.

ನವದೆಹಲಿ (ನ. 05): ದಿಲ್ಲಿ ಹಾಗೂ ಸುತ್ತಮುತ್ತ ವಾಯುಮಾಲಿನ್ಯ ಮಿತಿ ಮೀರಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ‘ಸಮ-ಬೆಸ ಸಂಚಾರ ವ್ಯವಸ್ಥೆ’ಯನ್ನು ಮರುಜಾರಿ ಮಾಡಲಾಗಿದೆ. ನವೆಂಬರ್‌ 04 ರಿಂದ 15 ರವರೆಗೆ ಇದು ಜಾರಿಯಲ್ಲಿರಲಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಸಮಸಂಖ್ಯೆಯ ದಿನಾಂಕದಂದು ಹಾಗೂ ಬೆಸಸಂಖ್ಯೆಯ ನೋಂದಣಿ ಸಂಖ್ಯೆಯಿಂದ ಅಂತ್ಯವಾಗುವ ವಾಹನಗಳು ಬೆಸಸಂಖ್ಯೆ ದಿನಾಂಕದಂದು ಸಂಚರಿಸಬೇಕು ಎಂಬುದೇ ಈ ನಿಯಮ.

ಶಿವಸೇನೆಗೆ ಸೋನಿಯಾ ಶಾಕ್; ಎನ್ ಸಿಪಿ, ಶಿವಸೇನೆ ಜತೆಗೆ ಒಪ್ಪಂದ ಸೋನಿಯಾ ಗಾಂಧಿ

ಮೊದಲ ದಿನ ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಈ ವ್ಯವಸ್ಥೆಗೆ ದಿಲ್ಲಿಗರಿಂದ ಶೇ.100ರಷ್ಟುಪ್ರತಿಕ್ರಿಯೆ ವ್ಯಕ್ತವಾಗಿದೆ. ನ.15ರವರೆಗೆ ಮಾಲಿನ್ಯ ತಡೆಗಟ್ಟಲು ಈ ಕ್ರಮ ಜರುಗಿಸಲಾಗಿದ್ದು, ಸಹಕರಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮನವಿ ಮಾಡಿದರು.

ಅಲ್ಲದೆ, ಕೇಜ್ರಿವಾಲ್‌ ಅವರು ಸಚಿವ ಸತ್ಯೇಂದ್ರ ಜೈನ್‌ ಹಾಗೂ ಗೋಪಾಲ್‌ ರಾಯ್‌ ಜತೆ ಕಾರಿನಲ್ಲಿ ಸಚಿವಾಲಯಕ್ಕೆ ತೆರಳಿದರು. ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಕಚೇರಿಗೆ ಸೈಕಲ್‌ನಲ್ಲಿ ಹೋದರು. ಈ ಮೂಲಕ ಮಾಲಿನ್ಯ ತಡೆಗೆ ಅಳಿಲು ಸೇವೆ ಸಲ್ಲಿಸಿದರು.

ಸಮ-ಬೆಸ ಪಾಲಿಸದ ಬಿಜೆಪಿ, ಸಂಸದನಿಗೆ 4000 ರು. ದಂಡ

ಈ ನಡುವೆ ಕೇಜ್ರಿವಾಲ್‌ ಅವರ ಸಮ-ಬೆಸ ವ್ಯವಸ್ಥೆಗೆ ಬಿಜೆಪಿ ಸಂಸದ ವಿಜಯ್‌ ಗೋಯಲ್‌ ಬೆಲೆ ಕೊಡದೇ ಬೆಸ ಸಂಖ್ಯೆಯಿಂದ ಅಂತ್ಯವಾಗುವ ಕಾರನ್ನು ಡ್ರೈವ್‌ ಮಾಡಿದರು. ಪೊಲೀಸರಿಂದ ತಾವೇ 4 ಸಾವಿರ ರು. ದಂಡ ಹಾಕಿಸಿಕೊಂಡರು. ‘ಕೇಜ್ರಿವಾಲ್‌ ಅವರ ಸಮ-ಬೆಸ ವ್ಯವಸ್ಥೆ ಕೇವಲ ಪ್ರಚಾರಕ್ಕಾಗಿ. ಹೀಗಾಗಿ ನಾನು ಅವರ ನಿರ್ಧಾರವನ್ನು ಈ ರೀತಿ ಪ್ರತಿಭಟಿಸಿದ್ದೇನೆ’ ಎಂದು ಹೇಳಿದರು. ಆದರೆ ‘ಬಿಜೆಪಿಯವರು ಈ ರೀತಿ ಮಾಡಿ ಬರೀ ಸ್ಟಂಟ್‌ ಮಾಡುತ್ತಿದ್ದಾರೆ’ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟೀಕಿಸಿದ್ದಾರೆ.