ಪಾಟ್ನಾ(ಜು.28): ಬಿಹಾರ ಬಿಜೆಪಿ ಸಂಸದೆ ರಮಾದೇವಿ ಕುರಿತು ಲೋಕಸಭೆಯಲ್ಲಿ ಕೀಳು ಮಟ್ಟದ ಹೇಳಿಕೆ ನೀಡಿ ಎಸ್’ಪಿ ಸಂಸದ ಆಜಂ ಖಾನ್ ಇಡೀ ದೇಶದ ವಿರೋಧ ಕಟ್ಟಿಕೊಂಡಿದ್ದಾರೆ. ಆಜಂ ಖಾನ್ ಅವರನ್ನು ಸದನದಿಂದ ಉಚ್ಛಾಟಿಸುವಂತೆ ಇಡೀ ದೇಶ ಒಕ್ಕೊರಲಿನಿಂದ ಒತ್ತಾಯಿಸುತ್ತಿದೆ.

ಈ ಮಧ್ಯೆ ಆಜಂ ಖಾನ್ ಪರ ಬ್ಯಾಟ್ ಬೀಸಿರುವ HAM ನಾಯಕ, ಮಾಜಿ ಬಿಹಾರ ಸಿಎಂ ಜೀತನ್ ರಾಮ್ ಮಾಂಝಿ, ಆಜಂ ಖಾನ್ ನಡುವಳಿಕೆ ಆಕ್ಷೇಪಾರ್ಹವಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಆಜಂ ಖಾನ್ ಬೆಂಬಲಿಸುವ ಭರದಲ್ಲಿ ವಿಚಿತ್ರ ವಾದ ಮುಂದಿಟ್ಟಿರುವ ಜಿತನ್ ರಾಮ್, ಅಣ್ಣ-ತಂಗಿ, ತಾಯಿ-ಮಗ ಪರಸ್ಪರ ಮುತ್ತು ಕೊಟ್ಟರೆ ಅದನ್ನು ಕಾಮದ ದೃಷ್ಟಿಯಿಂದ ನೋಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಆಜಂ ಖಾನ್ ಅವರು ರಮಾದೇವಿ ಅವರ ಕ್ಷಮೆ ಕೋರಿದರೆ ಸಾಕು, ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ ಎಂದು ಜಿತನ್ ರಾಮ್ ಅಭಿಪ್ರಾಯಪಟ್ಟಿದ್ದಾರೆ.