ನವದೆಹಲಿ[ಜು. 25] ಹಿರಿಯ ನಾಯಕಲಿ, ಕಲಾವಿದೆ ಜಯಪ್ರದಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ನಂತರ  ಕ್ಷಮೆ ಯಾಚನೆ ಮಾಡಿದ್ದ ಸಂಸದ ಅಜಂ ಖಾನ್ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅದು ಸಂಸತ್ತಿನಲ್ಲಿಯೇ!

ಸಮಾಜವಾದಿ ಪಕ್ಷದ ಸಂಸದರು ಮಾತನಾಡುತ್ತ ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದ  ಡೆಪ್ಯುಟಿ ಸ್ಪೀಕರ್ ರಮಾದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ನೀವು ತುಂಬಾ ಸುಂದರವಾಗಿ ಕಾಣಿಸುತ್ತೀರಿ ನಿಮ್ಮನ್ನು ಕಣ್ಣ್ಲಲ್ಲಿ ಕಣ್ಣಿಟ್ಟು ನೋಡಬೇಕು ಎನಿಸುತ್ತೆ’ ಎಂದು ಹೇಳಿದ್ದು ಉಳಿದ ಸಂದದರ ಆಕ್ರೋಶಕ್ಕೂ ಕಾರಣವಾಯಿತು.

ಜಯಾಪ್ರದಾ ಒಳವಸ್ತ್ರದ ಬಗ್ಗೆ ಆಜಂ ಖಾನ್ ಕೀಳು ಹೇಳಿಕೆ

ನೀವು ಎಷ್ಟು ಸುಂದರವಾಗಿ ಕಾಣುತ್ತಿದ್ದೀರಿ ಎಂದರೆ ನನ್ನ ಮನಸ್ಸು ನಿಮ್ಮ ಕಣ್ಣ್ಲಲ್ಲಿ ಕಣ್ಣಿಟ್ಟು ನೋಡುವಂತೆ ಮಾಡುತ್ತಿದೆ. ಆದರೆ ನೀವು ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ತ್ರಿಪಲ್ ತಲಾಖ್ ವಿಚಾರದ ಮೇಲೆ ಚರ್ಚೆ ನಡೆಯುತ್ತಿದ್ದಾಗ ಖಾನ್ ಮಾತನಾಡುತ್ತಿದ್ದರು. ಉಳಿದ ಸಂಸದರ ಆಕ್ರೋಶದ ನಂತರ ಖಾನ್ ಕ್ಷಮೆ ಕೇಳಿದ್ದಾರೆ. ನಿಮ್ಮ ಮೇಲೆ ನನಗೆ ಬಹಳ ಗೌರವವಿದೆ ನೀವು ನನ್ನ ತಂಗಿ ಇದ್ದಂತೆ ಎಂದು ಹೇಳುತ್ತ ವಿವಾದಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.