ನವದೆಹಲಿ(ಜು.27): ಸದನದಲ್ಲಿ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಅವರನ್ನು ತಾವು ಕ್ಷಮಿಸುವುದಿಲ್ಲ ಎಂದು ಬಿಜೆಪಿ ಸಂಸದೆ ರಮಾದೇವಿ ಹೇಳಿದ್ದಾರೆ.

ಆಜಂ ಅವರಂತಹ ವ್ಯಕ್ತಿಗಳನ್ನು ಎದುರಿಸುವ ಶಕ್ತಿ ತಮಗಿದ್ದು, ಅವರನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ರಮಾದೇವಿ ಸ್ಪಷ್ಟಪಡಿಸಿದ್ದಾರೆ.

ಆಜಂ ಖಾನ್ ತಮ್ಮ ಕುರಿತು ನೀಡಿದ ಹೇಳಿಕೆ ಇಡೀ ದೇಶದ ಮಹಿಳೆಗೆ ಮಾಡಿದ ಅವಮಾನವಾಗಿದ್ದು, ಇಂತಹ ವ್ಯಕ್ತಿಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.