ಪಾಟ್ನಾ(ಡಿ. 17) ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಲು ಪೋರ್ನ್ ವೆಬ್ ಸೈಟ್ ಗಳು ಒಂದು ಕಾರಣವಾಗಿದ್ದು ಅಶ್ಲೀಲ ವೆಬ್ ತಾಣಗಳನ್ನು ನಿಷೇಧ ಮಾಡಬೇಕು ಎಂದು ಬಿಹಾರದ ಸಿಎಂ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಯುವಜನತೆ ಪೋರ್ನ್ ಸೈಟ್ ಗಳ ವೀಕ್ಷಣೆ ಮಾಡುತ್ತಿದೆ. ಇದರಲ್ಲಿನ ಅತ್ಯಾಚಾರದ ಕೆಲ ದೃಶ್ಯಗಳು ವೇಗವಾಗಿ ಹರಿದಾಡುತ್ತಿವೆ. ಇವು ಮಾನವನ ಮನಸ್ಸಿನ ಮೇಲೆ ಪರಿಣಾಂ ಬೀರುತ್ತಿದ್ದು ಎಲ್ಲ ಬಗೆಯ ಪೋರ್ನ್ ನಿಷೇಧ ಆಗಬೇಕು ಎಂದು ನಿತೀಶ್ ಕುಮಾರ್ ಪತ್ರದಲ್ಲಿ ಒತ್ತಾಯ ಮಾಡಿದ್ದಾರೆ.

ನಿಷೇಧದ ಬಳಿಕ ಪೋರ್ನ್ ವೀಕ್ಷಣೆಗೆ ಕಳ್ಳದಾರಿ, 'ನೀಲಿ' ಪ್ರಿಯರಿಗೆ ಇದೇ ಹೆದ್ದಾರಿ!...

ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆ ಮೇಲಿನ ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾಚಾರಕ್ಕೆ ಅಶ್ಲೀಲ ವೆಬ್ಸೈಟ್ ಗಳ ವೀಕ್ಷಣೆ ಹೆಚ್ಚಾಗುತ್ತಿರುವುದೇ ಕಾರಣ, ಪೋರ್ನ್ ಸೈಟ್ ನಿಷೇಧಿಸಿದರೆ, ಇಂಥ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2015 ರಲ್ಲಿ ಉತ್ತರಾಖಂಡ್ ಹೈಕೋರ್ಟ್ ಆದೇಶದಂತೆ ಮೋದಿ ಸರ್ಕಾರ 857 ಅಶ್ಲೀಲ ತಾಣಗಳನ್ನು ನಿಷೇಧಿಸಿತ್ತು. ಆದರೆ, ನಂತರ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದ್ದು, ಯಾವುದೇ ಭಯ, ನಿರ್ಬಂಧವಿಲ್ಲ ಪೋರ್ನ್ ಚಿತ್ರಗಳ ವೀಕ್ಷಣೆ ಅಧಿಕವಾಗಿದೆ. ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಹತ್ಯೆ, ಉನ್ನಾವೋ ಯುವತಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿದ ಪ್ರಕರಣ, ಸಮಷ್ಟಿಪುರ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳ ಉಲ್ಲೇಖವನ್ನು ನಿತೀಶ್ ಕುಮಾರ್ ಮಾಡಿದ್ದಾರೆ.