Bengaluru: ಏರ್‌ಪೋರ್ಟ್‌ ಸಿಟಿಯಲ್ಲಿ ವಿಮಾನ ನಿರ್ವಹಣೆ ತರಬೇತಿ ಸಂಸ್ಥೆ ಆರಂಭಿಸಲಿರುವ ಏರ್‌ಇಂಡಿಯಾ!

2026ರ ವೇಳೆ ವಿಮಾನ ನಿರ್ವಹಣೆ ತರಬೇತಿ ಸಂಸ್ಥೆ ಬೆಂಗಳೂರಿನಲ್ಲಿ ತಲೆ ಎತ್ತಲಿದೆ. ಭವಿಷ್ಯಕ್ಕೆ ಸಿದ್ದವಾದ ವಾಯುಯಾನ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುವತ್ತ ದೊಡ್ಡ ಹೆಜ್ಜೆ ಎಂದು ಏರ್‌ ಇಂಡಿಯಾ ತಿಳಿಸಿದೆ.

Bengaluru Air India to set up aircraft maintenance training institute san

ಬೆಂಗಳೂರು (ನ.22): ಭಾರತೀಯ ವಾಯುಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಪ್ರಮಾಣೀಕರಿಸಿದ 2+2 ವರ್ಷಗಳ ಏರ್‌ಕ್ರಾಫ್ಟ್ ಮೆಂಟೆನೆನ್ಸ್ ಎಂಜಿನಿಯರಿಂಗ್ (ಎಎಮ್‌ಇ) ಕಾರ್ಯಕ್ರಮವನ್ನು ನೀಡುವ ಮೂಲಭೂತ ನಿರ್ವಹಣೆ ತರಬೇತಿ ಸಂಸ್ಥೆಯನ್ನು (ಬಿಎಂಟಿಒ) ಸ್ಥಾಪಿಸುವುದಾಗಿ ಏರ್ ಇಂಡಿಯಾ ಶುಕ್ರವಾರ ತಿಳಿಸಿದೆ. ಏರ್ ಇಂಡಿಯಾದ BMTO ಭಾರತದಲ್ಲಿ ದೃಢವಾದ, ಭವಿಷ್ಯಕ್ಕೆ ಸಿದ್ಧವಾದ ವಾಯುಯಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ.ತನ್ನ ಭವಿಷ್ಯದ ಯೋಚನೆಗಳನ್ನು ಮುಂದುವರಿದಿರು ಏರ್‌ಲೈನ್ಸ್‌ನ ಮಹತ್ವಾಕಾಂಕ್ಷೆಗಳನ್ನು ಇದು ಮುಂದುವರಿಸಲಿದೆ. ಏರ್‌ ಇಖಡಿಯಾ ತನ್ನ ವಿಮಾನಗಳನ್ನು ಹೆಚ್ಚು ಮಾಡಿದಂತೆ ವಿಮಾನ ನಿರ್ವಹಣಾ ಇಂಜಿನಿಯರ್‌ಗಳ ಅಗತ್ಯವೂ ಇರುತ್ತದೆ. ಈ ಸಂಸ್ಥೆಯಿಂದಾಗಿ ನಿರ್ವಹಣೆಯ ವಿಚಾರದಲ್ಲಿ ಏರ್ ಇಂಡಿಯಾ ಸ್ವಾವಲಂಬಿಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಏರ್ ಇಂಡಿಯಾ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ನ ಅಂಗಸಂಸ್ಥೆಯಾದ ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (BACL) ನೊಂದಿಗೆ AME ಕಾರ್ಯಕ್ರಮಕ್ಕಾಗಿ ಬಿಲ್ಡ್-ಟು-ಸೂಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದೆ, ಇದು ಆಧುನಿಕ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳನ್ನು ಒಳಗೊಂಡಿರುತ್ತದೆ. ಪ್ರಾಯೋಗಿಕ ತರಬೇತಿ ಮತ್ತು ಅರ್ಹ ತರಬೇತುದಾರರ ತಂಡ ಕೂಡ ಇರದಲ್ಲಿ ಇರಲಿದೆ.

ಬೆಂಗಳೂರು ಏರ್‌ಪೋರ್ಟ್‌ ಸಿಟಿಯಲ್ಲಿ 86 ಸಾವಿರ ಚದರಅಡಿಯಲ್ಲಿ ಇದು ವ್ಯಾಪಿಸಲಿದ್ದು, 2026ರಲ್ಲಿ ಕಾರ್ಯಾರಂಭ ಮಾಡಲಿದೆ. BMTO ಯ ಗುರಿಯು ವಿಮಾನ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾರ್ಯಾಚರಣೆಗಳಿಗಾಗಿ ನುರಿತ ವೃತ್ತಿಪರರ ಕಾರ್ಯಪಡೆಯನ್ನು ಬೆಳೆಸುವುದು, ಅಲ್ಲಿ ವಿದ್ಯಾರ್ಥಿಗಳು ಅನುಭವ ಮತ್ತು ತರಬೇತಿಯನ್ನು ಪಡೆಯುತ್ತಾರೆ, ಉದ್ಯಮದ ಮಾನದಂಡಗಳು ಮತ್ತು ಏರ್ ಇಂಡಿಯಾದ ನಿರ್ದಿಷ್ಟ ಅವಶ್ಯಕತೆಗಳನ್ನು ಅನುಸರಿಸುತ್ತಾರೆ ಎಂದ ತಿಳಿಸಿದೆ.

ಕೆಜಿಎಫ್‌-2 ಸ್ಟೋರಿ ಕಾಪಿ ಮಾಡಿದ ಪುಷ್ಪ-2; ಇಷ್ಟೆಲ್ಲಾ ಕಾಕತಾಳೀಯ ಇರೋಕೆ ಹೇಗೆ ಸಾಧ್ಯ?

ಏರ್ ಇಂಡಿಯಾದಲ್ಲಿ ಹೆಚ್ಚುತ್ತಿರುವ ವಿಮಾನಗಳು ಹಾಗೂ ಅದರ ನಿರ್ವಹಣೆ ಅಗತ್ಯತೆಗಳನ್ನು ಪೂರೈಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅದರ AME ಪದವೀಧರರಿಗೆ ವಿಶೇಷವಾದ ವೃತ್ತಿ ಮಾರ್ಗಗಳನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ. ವಿಶ್ವವಿದ್ಯಾನಿಲಯದ ಪಾಲುದಾರಿಕೆಗಳ ಮೂಲಕ ಏಕಕಾಲದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಇದು ಅವರ ಶೈಕ್ಷಣಿಕ ಮತ್ತು ವೃತ್ತಿ ಅವಕಾಶಗಳನ್ನು ಹೆಚ್ಚಿಸುತ್ತದೆ.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

Latest Videos
Follow Us:
Download App:
  • android
  • ios