ಬಂದ್‌ನಲ್ಲಿ ಸಕ್ರಿಯರಾಗಿರುವ ರೈತ ನಾಯಕರ ಜೊತೆ ಸಂಜೆ 7 ಗಂಟೆಗೆ ಅಮಿತ್ ಶಾ ಸಭೆ ಕರೆದಿದ್ದಾರೆ. ಇದರ ನಡುವೆ ಬಂದ್ ಕಾರಣ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೃಹ ಬಂಧನ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಉಗ್ರರ ಎನ್‌ಕೌಂಟರ್ ನಡೆಸಲಾಗಿದೆ. ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ ಚಾರ್ಲಿ ಶೂಟಿಂಗ್, ಹೇಗಿತ್ತು ಭಾರತ್ ಬಂದ್ ಸೇರಿದಂತೆ ಡಿಸೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಭಾರತ್ ಬಂದ್ ನಡುವೆ ಸಂಜೆ 7 ಗಂಟೆಗೆ ರೈತ ನಾಯಕರ ಸಭೆ ಕರೆದ ಅಮಿತ್ ಶಾ!...
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್ರ್ಗೆ ಕರೆ ನೀಡಲಾಗಿದೆ. ನಾಲ್ಕು ಗಂಟೆಗಳ ಕಾಲ ನಡೆಯುವ ಈ ಬಂದ್‌ಗೆ ಒಟ್ಟು ಹದಿನೆಂಟು ರಾಜಕೀಯ ಪಕ್ಷಗಳು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಿರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು, ಮಂಗಳವಾರ ಸಂಜೆ ಗಂಟೆಗೆ ರೈತ ನಾಯಕರ ಸಭೆ ಕರೆದಿದ್ದಾರೆ.
ಕೇಜ್ರೀವಾಲ್ ಗೃಹ ಬಂಧನ, ಆಪ್ ಆರೋಪ ಸುಳ್ಳು ಎಂದ ಪೊಲೀಸರು!...
ರೈತರು ನಡೆಸುತ್ತಿರುವ ಭಾರತ್ ಬಂದ್ ನಡುವೆ ಆಮ್ ಆದ್ಮಿ ಪಕ್ಷ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್‌ರನ್ನು ಗೃಹಬಂಧನದಲ್ಲಿರಿಸಲಾಗ್ಇದೆ ಎಂದು ಆರೋಪಿಸಿದೆ. ಆದರೆ ದೆಹಲಿ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
ದೆಹಲಿ ಎನ್‌ಕೌಂಟರ್ 5 ಉಗ್ರರ ಅರೆಸ್ಟ್: ಪಾಕ್ ಸಂಚು ಬಯಲು!...
ಶೌರ್ಯಚಕ್ರ ವಿಜೇತ ಯೋಧ ಬಲ್ವಿಂದರ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಸೇರಿದಂತೆ ಐವರು ಶಂಕಿತ ಉಗ್ರರನ್ನು ಸೋಮವಾರ ಪೂರ್ವ ದಿಲ್ಲಿಯಲ್ಲಿ ನಡೆದ ಎನ್‌ಕೌಂಟರ್ ಬಳಿಕ ಬಂಧಿಸಲಾಗಿದೆ.
ಯೋಧನ ರಕ್ಷಿಸಿ ಕೈ ಕಳೆದುಕೊಂಡಾಕೆ ಬಿಜೆಪಿ ಅಭ್ಯರ್ಥಿ...
ಕೇರಳದಲ್ಲಿ ಸ್ಥಳೀಯ ಚುನಾವಣೆ ಬಿಸಿ ಹೆಚ್ಚಿದ್ದು, ಕಣಕ್ಕಿಳಿದಿರೋ ಅಭ್ಯರ್ಥಿಗಳ ಹಿಂದೆ ಇಂಟ್ರೆಸ್ಟಿಂಗ್ ಕಥೆಗಳೇ ಇವೆ. ಯೋಧನ ರಕ್ಷಿಸಲು ಕೈಕಳೆದುಕೊಂಡು ಆತನಿಗೇ ವಧುವಾದ ಯುವತಿ ಈಗ ಬಿಜೆಪಿ ಅಭ್ಯರ್ಥಿ. ಇಲ್ಲಿ ಓದಿ ಆಕೆಯ ಹಿಂದಿನ ಕುತೂಹಲಕಾರಿ ಕಥನ
ಇಂದು ಭಾರತ್ ಬಂದ್: ಸಂಪೂರ್ಣ ಸ್ತಬ್ಧ ಇಲ್ಲ? ಕಾರಣ ಇಲ್ಲಿದೆ...
ಕೇಂದ್ರ ಸರ್ಕಾರ ಸಪ್ಟೆಂಬರ್‌ನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಳೆದ ಹನ್ನೆರಡು ದಿನಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸಂಘಟನೆಗಳು ಮಂಗಳವಾರ ಬಂದ್ ನಡೆಸಲು ಕರೆ ನೀಡಿವೆ.
ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಎದುರಾಯ್ತು ಮತ್ತೊಂದು ಸಂಕಷ್ಟ..!...
ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ಮುಕ್ತಾಯವಾಗುತ್ತಿದ್ದಂತೆ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಆರಂಭಿಕ ಹಿನ್ನಡೆಯಾಗುವ ಸಾಧ್ಯತೆಯಿದೆ.
ಕಾಶ್ಮೀರದಲ್ಲಿ ರಕ್ಷಿತ್ ಶೆಟ್ಟಿ;ಕೊರೆಯುವ ಚಳಿಯಲ್ಲೂ ಚಾರ್ಲಿ ಹಂಗಾಮ!...
ಚಿತ್ರೀಕರಣ ಮುಗಿಸಿದರೂ ಕೊರೋನಾ ಕಾರಣಕ್ಕೆ ಬಿಡುಗಡೆಯ ಭಾಗ್ಯ ದೊರೆಯದ ‘ಜಾಕ್‌ಪಾಟ್’ ಚಿತ್ರ ಇದೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿ ಮಾಡಿಕೊಳ್ಳುತ್ತಿದೆ.
ಸೈಡ್‌ನಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್, ಇನ್ನಷ್ಟು ಹೊಸ ಫೀಚರ್‌ನೊಂದಿಗೆ ವಿವೋ ವೈ51 ಫೋನ್...
ಸರಣಿ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ವಿವೋ ತನ್ನ ಬಳಕೆದಾರರಿಗೆ ಹೊಸ ಹೊಸ ಅಚ್ಚರಿಗಳನ್ನು ನೀಡುತ್ತಲೇ ಇದೆ. ಕಂಪನಿ ಇದೀಗ 17,990 ರೂಪಾಯಿ ಬೆಲೆಯ ವೈ 51 ಫೋನ್ ಬಿಡುಗಡೆ ಮಾಡಿದ್ದು, ಇದು ಅನೇಕ ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿದೆ.
90 ರೂ. ಗಡಿ ದಾಟಿದ ಪೆಟ್ರೋಲ್, ಕೇಂದ್ರದ ವಿರುದ್ಧ ಸ್ವತಃ ಬಿಜೆಪಿ ನಾಯಕ ಗರಂ!...
ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ದುಬಾರಿ ತಲೆಬಿಸಿ ಒಂದೆಡೆಯಾದರೆ, ಮತ್ತೊಂದೆಡೆ ಕೊರೋನಾ, ಭಾರತ್ ಬಂದ್ ಸೇರಿದಂತೆ ಹೆಜ್ಜೆ ಹೆಜ್ಜೆಗೂ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಇಂಧನ ಬೆಲೆ ಏರಿಕೆಗೆ ಕಿಡಿ ಕಾರಿತ್ತು. ಇದೀಗ ಸ್ವತಃ ಬಿಜೆಪಿ ನಾಯಕನೇ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖುಷಿ ಜೊತೆಗೆ ಸರ್ಜಾ ಕುಟುಂಬಕ್ಕೆ ಆಘಾತ; ಮೇಘನಾ, ಪುತ್ರನಿಗೂ ಕೋವಿಡ್!...
ಸುಂದರ್ ರಾಜ್, ಪ್ರಮೀಳಾ, ಮೇಘನಾ ರಾಜ್ ಹಾಗೂ ಪುತ್ರ ಚಿಂಟುಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 8, 2020, 4:57 PM IST