ಇಂದು ಭಾರತ್ ಬಂದ್: ಸಂಪೂರ್ಣ ಸ್ತಬ್ಧ ಇಲ್ಲ? ಕಾರಣ ಇಲ್ಲಿದೆ
ಇಂದು ಭಾರತ್ ಬಂದ್| ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಬಂದ್‌ಗೆ ಕರೆ| ಬಂದ್ ಯಶಸ್ವಿಯಾಗೋದು ಡೌಟ್
ನವದೆಹಲಿ(ಡಿ.08): ಕೇಂದ್ರ ಸರ್ಕಾರ ಸಪ್ಟೆಂಬರ್‌ನಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕಳೆದ ಹನ್ನೆರಡು ದಿನಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸಂಘಟನೆಗಳು ಮಂಗಳವಾರ ಬಂದ್ ನಡೆಸಲು ಕರೆ ನೀಡಿವೆ.
ಹಳೇ ನಿಯಮದಿಂದ ಭವ್ಯ ಭಾರತ ನಿರ್ಮಾಣ ಸಾಧ್ಯವಿಲ್ಲ; ಪರೋಕ್ಷ ಸೂಚನೆ ನೀಡಿದ ಮೋದಿ!
ಈ ರೈತ ಹೋರಾಟಕ್ಕೆ ಹದಿನೆಂಟು ರಾಜಕೀಯ ಪಕ್ಷಗಳು, ದೆಶವ್ಯಾಪಿ ವಿವಿಧ ಸಂಘಟನೆಗಳು ವ್ಯಾಪಕ ಬೆಂಬಲ ನೀಡಿವೆ. ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ. ಆದರೆ ವಿವಿಧ ಕಾರಣಗಳಿಂದ ಈ ಬಂಷದ್ ಸಂಪೂರ್ಣ ಸ್ತಬ್ಧವಾಗುವ ಬಗ್ಗೆ ಅನುಮಾನವಿದೆ ಎಂದು ವಿಶ್ಲೇಷಿಸಲಾಗಿದೆ.
ಯಾಕೆ ಬಂದ್ ಸಾಧ್ಯತೆ ಇಲ್ಲ?
* ಜನರಿಗೆ ತೊಂದರೆಯಾಗಬಾರದೆಂಬ ಕಾರಣ ನೀಡಿ ದಿಲ್ಲಿಯ ರೈತ ಸಂಘಟನೆಗಳೇ ಕೇವಲ ನಾಲ್ಕು ತಾಸುಗಳ ಬಂದ್‌ಗೆ ಕರೆ ನೀಡಿವೆ.
* ಬ್ಯಾಂಕ್, ಸರ್ಕಾರಿ ಕಚೇರಿ, ಅಂಗಡಿ ಮುಂಗಟ್ಟು, ಸಾರಿಗೆ ಮತ್ತಿತರ ಪ್ರಮುಖ ಕ್ಷೇತ್ರಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಭಾರತ್ ಬಂದ್: ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ಜಾರಿ!
* ಬಂದ್‌ಗೆ ಬೆಂಬಲ ನೀಡಿರುವ ಕಾರ್ಮಿಕ, ಸಾರಿಗೆ ಸಂಘಟನೆಗಳಲ್ಲೇ ಒಡಕಿದೆ. ಕೆಲವು ಸಂಣಘಟನೆಗಳು ಸಹಕರಿಸಲ್ಲ ಎಂದಿವೆ.
* ಸಾಮಾನ್ಯವಾಗಿ ಹೋರಾಟಕ್ಕೆ ಬರುವ ಸಂಘ- ಸಂಸ್ಥೆಗಳು ನೈತಿಕ ಬೆಂಬಲ ನೀಡಿದ್ದು, ಪ್ರತಿಭಟನೆಯಷ್ಟೇ ನಡೆಯುವ ಸಾಧ್ಯತೆ ಇದೆ.
ಬಿಜೆಪಿ ಆಡಳಿತವಿರುವ ಅನೇಕ ರಾಜ್ಯಗಳಲ್ಲಿ ಬಂದ್ ವಿಫಲಸಾಧ್ಯತೆ. ಜೊತೆಗೆ ಕೇಂದ್ರದಿಂದಲೂ ಬಂದ್ ಆಗದಂತೆ ಪ್ರಯತ್ನ.