ಖುಷಿ ಜೊತೆಗೆ ಸರ್ಜಾ ಕುಟುಂಬಕ್ಕೆ ಆಘಾತ; ಮೇಘನಾ, ಪುತ್ರನಿಗೂ ಕೋವಿಡ್!
ಸುಂದರ್ ರಾಜ್, ಪ್ರಮೀಳಾ, ಮೇಘನಾ ರಾಜ್ ಹಾಗೂ ಪುತ್ರ ಚಿಂಟುಗೆ ಕೊರೋನಾ ಸೋಂಕು ತಗುಲಿರುವುದಾಗಿ ತಿಳಿದು ಬಂದಿದೆ.
![article_image1](https://static-gi.asianetnews.com/images/01epygqb4z96nkdsggwvdf8t47/3b232926-01ad-4a1d-bb33-bf75885d7d7c-jpg_380x214xt.jpg)
ನಟಿ ಮೇಘನಾ ರಾಜ್ ಕುಟುಂಬಕ್ಕೆ ಕೊರೋನಾ ಸೋಂಕು.
![article_image2](https://static-gi.asianetnews.com/images/01emgsbc84pghsjphvvpvmttjx/m5-jpg_380x256xt.jpg)
ಹಿರಿಯ ಕಲಾವಿದೆ ಪ್ರಮೀಳಾ ಜೋಷಾಯಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರ ಬೆನ್ನಲ್ಲೇ ಸುಂದರ್ ರಾಜ್ ಇಂದು(ಡಿಸೆಂಬರ್ 8) ಆಸ್ಪತ್ರಗೆ ದಾಖಲಾಗಿದ್ದಾರೆ.
ಜೂನಿಯರ್ ಚಿರು ಹಾಗೂ ಮೇಘನಾ asymptomatic ಆಗಿರುವ ಕಾರಣ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೇಘನಾಗೆ ಸೋಂಕು ಇರುವುದು ದೃಢವಾಗಿದೆ, ಮಗುವಿಗೆ ಕೊರೋನಾ ಪರೀಕ್ಷೆ ಮಾಡಿಸಿಲ್ಲ ಆದರೆ ಹಾಲುಣಿಸುತ್ತಿರುವ ಕಾರಣ ಮಗುವಿಗೂ ಸೋಂಕು ತಾಗಿದೆ ಎನ್ನಲಾಗಿದೆ.
ಎಲ್ಲರಿಗೂ ಕೊರೋನಾ ಸೋಂಕು ತಾಗಿದ್ದು ಯಾರಿಗೂ ತೊಂದರೆಯಾಗಿಲ್ಲ. ಎಲ್ಲರೂ ಹುಷಾರಾಗಿರುವುದಾಗಿ ಮೇಘನಾ ಮಾಹಿತಿ ನೀಡಿದ್ದಾರೆ.
ಈಗಿ ಇಡೀ ಚಿತ್ರರಂಗಕ್ಕೆ ಹಾಗೂ ಅಭಿಮಾನಿಗಳಿಗೆ ಮೇಘನಾ ಕುಟುಂಬದ ಆರೋಗ್ಯ ಸ್ಥಿತಿ ಬಗ್ಗೆ ಚಿಂತೆ ಹೆಚ್ಚಾಗಿದೆ. ಬೇಗ ಹುಷಾರಾಗಲಿ ಎಂಬುವುದು ಎಲ್ಲರ ಮನದಾಳದ ಹಾರೈಕೆ.