ನವದೆಹಲಿ(ಡಿ.08): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ದೇಶಾದ್ಯಂತ ಇಂದು ಭಾರತ್ ಬಂದ್ರ್ಗೆ ಕರೆ ನೀಡಲಾಗಿದೆ. ನಾಲ್ಕು ಗಂಟೆಗಳ ಕಾಲ ನಡೆಯುವ ಈ ಬಂದ್‌ಗೆ ಒಟ್ಟು ಹದಿನೆಂಟು ರಾಜಕೀಯ ಪಕ್ಷಗಳು ಸೇರಿ ಅನೇಕ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಹೀಗಿರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು, ಮಂಗಳವಾರ ಸಂಜೆ  ಗಂಟೆಗೆ ರೈತ ನಾಯಕರ ಸಭೆ ಕರೆದಿದ್ದಾರೆ. 

ಇಂದು ಭಾರತ್ ಬಂದ್: ಸಂಪೂರ್ಣ ಸ್ತಬ್ಧ ಇಲ್ಲ? ಕಾರಣ ಇಲ್ಲಿದೆ

ಹೌದು ರೈತರು ಕರೆದ ಈ ಬಂದ್‌ನಿಂದಾಗಿ ದೇಶದ ಹಲವೆಡೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅನೇಕ ಕಡೆ ರಾಷ್ಟ್ರೀಯ ಹೆದ್ದಾರಿಗಳು ಮುಚ್ಚಲ್ಪಟ್ಟಿದ್ದರೆ, ಮಾರುಕಟ್ಟೆಗಳೂ ಬಂದ್ ಆಗಿವೆ. 

ಹೀಗಿರುವಾಗಲೇ ರೈತ ನಾಯಕ ರಾಕೇಶ್ ಟಿಕೈಟ್ 'ನನಗೊಂದು ಕರೆಡ ಬಂದಿದ್ದು, ಇಂದು ಸಂಜೆ ಏಳು ಗಂಟೆಗೆ ಅಮಿತ್ ಶಾ ನಮ್ಮನ್ನು ಭೇಟಿಯಾಗಲು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.