ಕೇರಳದಲ್ಲಿ ಸ್ಥಳೀಯ ಚುನಾವಣೆ ಬಿಸಿ ಹೆಚ್ಚಿದ್ದು, ಕಣಕ್ಕಿಳಿದಿರೋ ಅಭ್ಯರ್ಥಿಗಳ ಹಿಂದೆ ಇಂಟ್ರೆಸ್ಟಿಂಗ್ ಕಥೆಗಳೇ ಇವೆ. ಇತ್ತೀಚೆಗಷ್ಟೇ ಇಬ್ಬರು ಮುಸ್ಲಿಂ ಯುವತಿಯರನ್ನು ಕಣಕ್ಕಿಳಿಸಿದ್ದ ಬಿಜೆಪಿ ಈಗ ಪಾಲಕ್ಕಾಡ್‌ನಿಂದ ಕಣಕ್ಕಿಳಿಸಿದ ಅಭ್ಯರ್ಥಿ ಯಾರು ನೋಡಿ..

ಈಕೆಯ ಹೆಸರು ಜ್ಯೋತಿ ವಿಕಾಸ್. ಹಿಂದಿ ಸ್ಲಾಂಗ್‌ನಲ್ಲಿ ಮಲಯಾಳಂ ಮಾತನಾಡುವ ಈಕೆ ಛತ್ತೀಸ್‌ಗಡ್‌ನವಳು. ಛತ್ತೀಸ್‌ಗಡದ ಯುವತಿಗೆ ಕೇರಳದ ನಂಟು ಹೇಗೆ.. ಆಕೆ ಚುನಾವಣೆಗೆ ಸ್ಪರ್ಧಿಸುವ ತನಕ ತಲುಪಿದ್ದು ಹೇಗೆ..? ಇಲ್ಲಿ ಓದಿ.

ನಟಿ ವಿಜಯಶಾಂತಿ ಮರಳಿ ಬಿಜೆಪಿಗೆ!

ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ 2010ರಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಎದುರಿಂದ ಬರುತ್ತಿರೋ ಟ್ರಕ್ ತಾನಿದ್ದ ಬಸ್‌ಗೆ ಡಿಕ್ಕಿ ಹೊಡೆಯುತ್ತೆ ಎಂದು ಆರಿತ ಈಕೆ ಎದುರಿನ ಸೀಟ್‌ನಲ್ಲಿ ಮಲಗಿದ್ದ ಯೋಧನನ್ನು ಎಬ್ಬಿಸಲು ಹೋಗಿ ತನ್ನ ಬಲಗೈ ಕಳೆದುಕೊಂಡಿದ್ದಳು

BJPಯಿಂದ ಇಬ್ಬರು ಮುಸ್ಲಿಂ ಮಹಿಳೆಯರು ಸ್ಪರ್ಧೆ..! ಮೋದಿಯ ಅಪ್ಪಟ ಫ್ಯಾನ್ಸ್ ಇವ್ರು

ನಾನು 12 ದಿನಗಳ ಕಾಲ ಆಸ್ಪತ್ರೆಯಲ್ಲಿ  ಕಳೆದಿದ್ದೆ. ನನ್ನ ಕೈ ಕತ್ತರಿಸಿ ತೆಗೆಯದಿದ್ದರೆ ನನ್ನ ದೇಹಕ್ಕೆ ಇನ್ಫೆಕ್ಷನ್‌ ಆಗಬಹುದೆಂದು ವೈದ್ಯರು ಹೇಳಿದ್ದರು. ನಾನು ರಕ್ಷಿಸಿದ ವ್ಯಕ್ತಿ ಯಾರೆಂಬುದು ನನಗೆ ಗೊತ್ತಿರಲಿಲ್ಲ. ಆದರೆ ಆತ ನನ್ನನ್ನು ಮೆಚ್ಚಿ ಮದುವೆಯಾಗುವುದಾಗಿ ಪ್ರಪೋಸ್ ಮಾಡಿದ. ನಾನು ಪಿವಿ ವಿಕಾಸ್‌ನ್ನು ವಿವಾಹವಾದೆ. ಅವರು ಸಿಐಎಸ್‌ಎಫ್ ಕಾನ್ಸ್ಟೆಬಲ್ ಆಗಿದ್ದರು ಎಂದಿದ್ದಾರೆ.

ಮಾಜಿ ಶಾಸಕ ಬಿಜೆಪಿ ಸೇರ್ಪಡೆ, ಸಿಎಂ ಭೇಟಿ ಮಾಡಿಸಿದ ಸಚಿವ ಸುಧಾಕರ್...!

ಜ್ಯೋತಿ ಬಚೇಲಿಯ ಛತ್ತೀಸ್‌ಗಡದ ದಂತೇವಾಡ ಜಿಲ್ಲೆಯವರು. ಅಪಘಾತ ನಡೆದಾಗ ವಿಕಾಸ್ ಅದೇ ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಅಪಘಾತದ ನಂತರ ನರ್ಸಿಂಗ್ ಶಿಕ್ಷಣ ಪೂರ್ತಿಗೊಳಿಸಲಾಗಲಿಲ್ಲ ಎನ್ನುತ್ತಾರೆ ಈಕೆ. ಆಕೆಯನ್ನು ಪ್ರೀತಿಯಿಂದ ಸ್ವೀಕರಿಸಿದ ಸಮಾಜದ ಋಣ ತೀರಿಸುವ ಸಂದರ್ಭ ಇದು ಎನ್ನುತ್ತಾರೆ ಜ್ಯೋತಿ.

ಸೇವೆ ನನ್ನ ರಕ್ತದಲ್ಲಿದೆ. ಸ್ಥಳೀಯ ಸಂಸ್ಥೆಯ ಚುನಾವಣೆಗಳು ಹತ್ತಿರವಾದಂತೆ ಸ್ಥಳೀಯ ಬಿಜೆಪಿ ನಾಯಕರು ನನ್ನನ್ನು ಅಭ್ಯರ್ಥಿಯಾಗಿ ಪ್ರಸ್ತಾಪಿಸಿದರು. ಆದರೆ ನನಗೆ ಆರಂಭದಲ್ಲಿ ಇಷ್ಟವಿರಲಿಲ್ಲ. ನನ್ನ ಪತಿ ಮತ್ತು ಅವರ ಕುಟುಂಬ ಸದಸ್ಯರು ಸ್ಪರ್ಧಿಸಲು ನನ್ನನ್ನು ಪ್ರೇರೇಪಿಸಿದರು. ಇದು ಸವಾಲಿನ ಅನುಭವ ಎಂದಿದ್ದಾರೆ. 
ನಾನು ಮೋದಿಯವರನ್ನು ಸಮಗ್ರತೆಯ ನಿಲುವುಳ್ಳ ವ್ಯಕ್ತಿಯಾಗಿ ಕಾಣುತ್ತೇನೆ ಎಂದು ಜ್ಯೋತಿ ಹೇಳಿದ್ದಾರೆ.