ಕೇಜ್ರೀವಾಲ್ ಗೃಹ ಬಂಧನ, ಆಪ್ ಆರೋಪ ಸುಳ್ಳು ಎಂದ ಪೊಲೀಸರು!
ರೈತರಿಂದ ಭಾರತ್ ಬಂದ್| ದೇಶಾದ್ಯಂತ ನಾಲ್ಕು ಗಂಟೆ ನಡೆಯಲಿದೆ ಭಾರತ್ ಬಂದ್| ಭಾರತ್ ಬಂದ್ ನಡುವೆ ಕೇಜ್ರೀವಾಲ್ ಗೃಹ ಬಂಧನ ಆರೋಪ
ನವದೆಹಲಿ(ಡಿ.08): ರೈತರು ನಡೆಸುತ್ತಿರುವ ಭಾರತ್ ಬಂದ್ ನಡುವೆ ಆಮ್ ಆದ್ಮಿ ಪಕ್ಷ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್‌ರನ್ನು ಗೃಹ ಬಂಧನದಲ್ಲಿರಿಸಲಾಗ್ಇದೆ ಎಂದು ಆರೋಪಿಸಿದೆ. ಆದರೆ ದೆಹಲಿ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಕೇಜ್ರೀವಾಲ್‌ರನ್ನು ಗೃಹ ಬಂಧನದಲ್ಲಿರಿಸಿಲ್ಲ. ಉತ್ತರ ದೆಹಲಿ ವಿಭಾಗದ ಡಿಸಿಪಿ ಟ್ವಿಟ್ ಮಾಡಿರುವ ಫೋಟೋದಲ್ಲೂ ಪಕ್ಷ ಹೇಳಿದಂತೆ ಅವರ ಮನೆ ಬಳಿ ಯಾವುದೇ ಬ್ಯಾರಿಕೇಡ್‌ಗಳನ್ನು ಹಾಕಿಲ್ಲ ಎಂಬುವುದನ್ನು ಸ್ಪಷ್ಟಪಡಿಸುತ್ತದೆ.
ರೈತರಿಗೆ ದೆಹಲಿಗೆ ಬರಲು ಕೇಜ್ರೀವಾಲ್ ಅನುಮತಿ ಕೊಟ್ಟಿದ್ದೇಕೆ: ಇಲ್ಲಿದೆ ಲೆಕ್ಕಾಚಾರ!
ಈ ಕುರಿತು ಟ್ವೀಟ್ ಮಾಡಿರುವ ಡಿಸಿಪಿ ದೆಹಲಿ ಸಿಎಂರನ್ನು ಹೌಸ್ ಅರೆಸ್ಟ್ ಮಾಡಿದ್ದಾರೆಂಬ ಆರೋಪ ಸುಳ್ಳು. ಅವರು ಕನೂನಡಿಯಲ್ಲಿ ತಮ್ಮ ಚಟುವಟಿಕೆ ಮುಂದುವರೆಸಲು ಸಂಪೂರ್ಣ ಸ್ವತಂತ್ರರು. ಅವರ ಮನೆಯ ಪ್ರವೇಶ ದ್ವಾರದ ಫೋಟೋ ಎಲ್ಲವನ್ನೂ ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷವು ದೆಹಲಿ ಪೊಲೀಸರು ಅರವಿಂದ್ ಕೇಜ್ರೀವಾಲ್‌ರನ್ನು ಬಿಜೆಪಿ ಸಹಾಯದಿಂದ ಅವರ ಮನೆಯಲ್ಲೇ ಬಂಧನದಲ್ಲಿಟ್ಟಿದ್ದಾರೆ. ನಿನ್ನೆ ಅವರು ಸಿಂಘು ಬಾರ್ಡರ್‌ನಬಿಂದ ಹಿಂದೆ ಮರಳಿ ಬಂದ ಬಳಿಕ ಗೃಹ ಬಂಧನದಂತಹ ವಾತಾವರಣ ನಿರ್ಮಿಸಿದ್ದಾರೆಂದಿತ್ತು.
AAP ಸಂಸದ, ಸಚಿವರಿಗೆ ಮಹತ್ವದ ಸೂಚನೆ ನೀಡಿದ ಕೇಜ್ರಿವಾಲ್; ದೇಶವೇ ಮೆಚ್ಚುಗೆ!
ಇನ್ನು ಲಭ್ಯವಾದ ಮಾಹಿತಿ ಅನ್ವಯ ದೆಹಲಿ ಸಿಎಂ ಕೇಜ್ರೀವಾಲ್ ಮನೆ ಹೊರಗೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ, ಸಂಸದ ಪ್ರವೇಶ್ ವರ್ಮಾ ಹಾಗೂ ಮೂರೂ ನಗರ ನಿಗಮ ಮೇಯರ್ ಧರಣಿ ಹೂಡಿದ್ದಾರೆನ್ನಲಾಗಿದೆ. ಹೀಗಿರುವಾಗ ಆಪ್ ಗೃಹ ಸಚಿವಾಲಯದ ಆದೇಶದ ಮೇರೆಗೆ ಮೂರೂ ನಗರ ನಿಗಮ ಮೇಯರ್ ಇಲ್ಲಿ ಧರಣಿ ಹೂಡಿದ್ದಾರೆಂದು ಆರೋಪಿಸಿದ್ದಾರೆ.