ಮಕ್ಕಳನ್ನು ಅಪಾಯಕಾರಿ ವಸ್ತುಗಳಿಂದ, ಕ್ರಿಮಿ ನಾಶಕ ಮತ್ತಿತರ ಪದಾರ್ಥಗಳಿಂದ ದೂರ ಇ೨ಡಿ ಎಂದು ಪದೇ ಪದೇ ಮಾಧ್ಯಮಗಳು ಎಚ್ಚರಿಸುತ್ತಿದ್ದರೂ ದುರ್ಘಟನೆಗಳಿಗೆ ಏನು ಕಡಿಮೆಯಿಲ್ಲ. ಅಂತದ್ದೊಂದು ದುರ್ಘಟನೆ ನಡೆದ ವರದಿ ಇಲ್ಲಿದೆ.
ಕೋಲ್ಕತ್ತಾ [ಜೂನ್ 18] ಮಕ್ಕಳನ್ನು ಅಪಾಯಕಾರಿ ವಸ್ತುಗಳಿಂದ, ಕ್ರಿಮಿ ನಾಶಕ ಮತ್ತಿತರ ಪದಾರ್ಥಗಳಿಂದ ದೂರ ಇಡಿ ಎಂದು ಪದೇ ಪದೇ ಮಾಧ್ಯಮಗಳು ಎಚ್ಚರಿಸುತ್ತಿದ್ದರೂ ದುರ್ಘಟನೆಗಳಿಗೆ ಏನು ಕಡಿಮೆಯಿಲ್ಲ.
ಮನೆಯ ಹೊರಗಡೆ ಸಿಕ್ಕ ಪಿಸ್ತೂಲ್ ವೊಂದನ್ನು ಆಟಿಕೆ ಎಂದು ತಿಳಿದ ತಾಯಿ ತನ್ನ ಮಗಳಿಗೆ ಕೊಟ್ಟಿದ್ದಳು. ಆಡವಾಡುತ್ತ ಇದ್ದ ಮಗು ಶೂಟ್ ಮಾಡಿದ್ದು ಗುಂಡು ತಾಗಿ ಗಂಭೀರ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಿಳೆಯರೇ ನಿಮ್ಮ ಆತ್ಮ ರಕ್ಷಣೆ ಮುಖ್ಯ, ಇಲ್ಲಿದೆ ದಿಲ್ಲಿ ಪೊಲೀಸರ ಟಿಪ್ಸ್, ನೋಡಿ ಕಲಿತುಕೊಳ್ಳಿ
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ಮನೆಯ ಮುಂದೆ ಗಾರ್ಡ್ ನಲ್ಲಿ ಪಿಸ್ತೂಲ್ ಸಿಕ್ಕಿದ್ದು, ಅದನ್ನು ಆಟಿಕೆಯಂದು ಭಾವಿಸಿದ ತಾಯಿ ಮಗಳಿಗೆ ನೀಡಿದ್ದಾಳೆ. ಬಾಲಕಿ ಆಡವಾಡುತ್ತಿರುವಾಗ ಅಚಾತುರ್ಯದಿಂದ ತಾಯಿ ಮೇಲೆ ಗುಂಡು ಹಾರಿದೆ. ಮನೆಯ ಒಳಗೆ ಇದ್ದ ತಾಯಿಗೆ ಗುಂಡು ತಗುಲಿದ್ದು ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪಿಸ್ತೂಲ್ ಮನೆಯ ಗಾರ್ಡ್ ನ್ ಒಳಕ್ಕೆ ಹೇಗೆ ಬಂತು ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
