ಕಷ್ಟದ ಸಂದರ್ಭಗಳಲ್ಲಿ ಮಹಿಳೆಯರೇ ತಮ್ಮ ಆತ್ಮ ರಕ್ಷಣೆಗೆ ಮುಂದಾಗುವುದು ಅನಿವಾರ್ಯ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದಕ್ಕೆ ದಿಲ್ಲಿ ಪೊಲೀಸರು ತರಬೇತು ನೀಡುತ್ತಿದ್ದಾರೆ.

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಎಲ್ಲೆಡೆ ಮಹಿಳೆಯರ ವಿರುದ್ಧ ದೌರ್ಜನ್ಯ ಹೆಚ್ಚಾಗುತ್ತಿದೆ. ಏನೇ ಮಾಡಿದರೂ ನಿಯಂತ್ರಣಕ್ಕೆ ಬಾರದ ಮಹಿಳಾ ವಿರೋಧಿ ಅಪರಾಧಗಳನ್ನು ತಡೆಗಟ್ಟಲು ಮಹಿಳೆಯರೇ ತಮ್ಮ ಆತ್ಮ ರಕ್ಷಣೆ ಮಾಡಿಕೊಳ್ಳುವುದು ಮುಖ್ಯ. ಅದಕ್ಕೆ ದಿಲ್ಲಿ ಪೊಲೀಸರು ಅರಿವು ಮೂಡಿಸಲು ಮುಂದಾಗಿದ್ದು, ಇಲ್ಲಿವೆ ಕೆಲವು ಟಿಪ್ಸ್.

ಅತ್ಯಾಚಾರವೆಸಗಲು ಮುಂದಾದಾಗ ಅಥವಾ ಯಾರಾದರೂ ಮಹಿಳೆಯರನ್ನು ಅಪಹರಿಸಲು ಮುಂದಾದರೆ, ತಕ್ಷಣವೇ ಯಾರೂ ರಕ್ಷಣೆಗೆ ಬರಲು ಸಾಧ್ಯವಾಗುವುದಿಲ್ಲ. ಅಂಥ ಸಂದರ್ಭಗಳಲ್ಲಿ ಮಹಿಳೆಯರೇ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಈ ಬಗ್ಗೆ ಯುವಕರು ಬೀದಿ ನಾಟಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದು, ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹೇಗೆಂದು ತರಬೇತಿ ನೀಡುತ್ತಿದ್ದಾರೆ.

Scroll to load tweet…

ಮಹಿಳೆಯರ ವಿರುದ್ಧ ಅಪರಾಧ, ಮಹಿಳಾ ಸ್ವಾವಲಂಬನೆ ಮತ್ತು ಇತರೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ದಿಲ್ಲಿ ಪೊಲೀಸರು ಈ ಕಾರ್ಯಕ್ಕೂ ಮುಂದಾಗಿದ್ದು, ಸ್ವಯಂ ರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

2017ರಲ್ಲಿಯೇ ಬೀದಿ ನಾಟಕಗಳ ಮೂಲಕ ದಿಲ್ಲಿ ಪೊಲೀಸರು ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಕಾರ್ಯಪ್ರವೃತ್ತರಾಗಿದ್ದು, ಆಗ 142 ಬೀದಿ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಆ ಮೂಲಕ ಮಹಿಳೆಯರಿಗೆ ಆತ್ಮ ರಕ್ಷಣೆ ಬಗ್ಗೆ ಹೆಚ್ಚಿನ ತರಬೇತು ನೀಡಿದ್ದು, ಈ ತರಬೇತಿ ಪಡೆದವರು ಭದ್ರತಾ ಭಾವನೆಯನ್ನು ಅನುಭವಿಸುತ್ತಿದ್ದಾರೆ. ಸ್ವಯಂ ರಕ್ಷಣೆ ಮೂಲ ಪಾಠಗಳನ್ನು ಹೇಳಿ ಕೊಡುವ ಮೂಲಕ, ಮಹಿಳೆಯರಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸುವುದು ಈ ತರಬೇತಿಯ ಉದ್ದೇಶ.

ಫೋಟೋ ಕೃಪೆ:ಹಿಂದೂಸ್ತಾನ್ ಟೈಮ್ಸ್