ನವದೆಹಲಿ(ನ.08): ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಅತ್ಯಂತ ಕುತೂಹಲಕಾರಿ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪು ನಾಳೆ(ನ.09) ಪ್ರಕಟವಾಗಲಿದೆ.

ಕೊನೆಗೂ ಮುಗೀತು ವಿಚಾರಣೆ: ಅಯೋಧ್ಯೆ ತೀರ್ಪಿಗೆ ದಿನಗಣನೆ!

ಈ ಕುರಿತು ಮಾಹಿತಿ ನೀಡಿರುವ ಸುಪ್ರೀಂಕೋರ್ಟ್ ಪಂಚಪೀಠ, ನಾಳೆ(ನ.09) ಬೆಳಗ್ಗೆ 10-30ಕ್ಕೆ ಅಯೋಧ್ಯೆ ತೀರ್ಪು ಪ್ರಕಟಿಸಲಿರುವುದಾಗಿ ಘೋಷಣೆ ಮಾಡಿದೆ.

ಅಯೋಧ್ಯೆ ತೀರ್ಪು: ವಾಟ್ಸಪ್, ಟ್ವಿಟ್ಟರ್ ಮೇಲೆ ಸರ್ಕಾರದ ನಿಯಂತ್ರಣ!

ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಮುಂದಿನ ವಾರದಲ್ಲಿ ಪ್ರಕಟಿಸಲಿದೆ ಎಂದು ಭಾವಿಸಲಾಗಿತ್ತಾದರೂ, ನಾಳೆಯೇ ತೀರ್ಪು ಪ್ರಕಟಿಸುವುದಾಗಿ ಪಂಚಪೀಠ ಸ್ಪಷ್ಟಪಡಿಸಿದೆ.

ಇನ್ನು ನಾಳೆ ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು,  ಎಲ್ಲಾ ರಾಜ್ಯ ಸರ್ಕಾರಗಳಿಗೂ ಕಟ್ಟುನಿಟ್ಟಿನ  ಸೂಚನೆ ನೀಡಿದೆ. 

"

ರಾಮ ಜನ್ಮಭೂಮಿಯಲ್ಲಿ ಭಾರಿ ಕಟ್ಟೆಚ್ಚರ; ಸಂಭ್ರಮಾಚರಣೆ ನಿಷೇಧ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಪೀಠ  ನಾಳೆ ಬೆಳಗ್ಗೆ 10-30ಗೆ ತೀರ್ಪು ಪ್ರಕಟಿಸಲಿದೆ. 

ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?

ಗೊಗೊಯ್ ನೇತೃತ್ವದ ಪಂಚಪೀಠದಲ್ಲಿ ಎಸ್. ಎ. ಬೊಬ್ಡೆ, DY ಚಂದ್ರಚೂಡ್, ಅಶೋಕ್ ಭೂಷಣ ಹಾಗೂ ಎಸ್.ಎ ನಜೀರ್ ಇರಲಿದ್ದಾರೆ. 

ಸೋಶಿಯಲ್ ಮಿಡಿಯಾ ಬಳಕೆದಾರರು ಗಮನಿಸಿ: ಅಯೋಧ್ಯೆ ರೂಲ್ಸ್ ಒಮ್ಮೆ ವಿಚಾರಿಸಿ!